• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿಯಿಂದ ಗೋವಾ, ಕೇರಳಕ್ಕೆ ಪ್ಯಾಕೇಜ್ ಟೂರ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 31: ದಸರಾ ಮತ್ತು ದೀಪಾವಳಿಯ ಸಮಯದಲ್ಲಿ ಪ್ರಾರಂಭಿಸಲಾದ ಒಂದು ದಿನದ ಪ್ಯಾಕೇಜ್ ಪ್ರವಾಸಗಳು ಭರ್ಜರಿ ಯಶಸ್ಸು ಗಳಿಸಿದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗವು ಈ ವರ್ಷಾಂತ್ಯದಲ್ಲಿ ಗೋವಾಕ್ಕೆ ಮತ್ತು ಕೇರಳಕ್ಕೆ ವಿಶೇಷ ಎರಡು ದಿನಗಳ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಕೆಎಸ್‌ಆರ್‌ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಮಾತನಾಡಿ, ನಾವು ಈಗಾಗಲೇ ಕ್ರಿಸ್‌ಮಸ್ ರಜಾದಿನಗಳಿಗಾಗಿ ಗೋವಾ ಮತ್ತು ಕೇರಳಕ್ಕೆ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸಲು ಕೆಲಸ ಮಾಡುತ್ತಿದ್ದೇವೆ. ಗೋವಾಗೆ ಇದು ಒಂದು ರಾತ್ರಿ ಮತ್ತು ಎರಡು ದಿನದ ಪ್ಯಾಕೇಜ್ ಆಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಹೋಮ್‌ ಸ್ಟೇಗಳೊಂದಿಗೆ ಮಾತುಕತೆ ನಡೆಸಿ ವಸತಿ ವ್ಯವಸ್ಥೆ ಮಾಡಲಾಗುವುದು. ಕೇರಳ ಪ್ಯಾಕೇಜ್ ಕಾಞಂಗಾಡ್, ರಾಜರಾಜೇಶ್ವರ ದೇವಸ್ಥಾನ, ತಳಿಪರಂಬ, ಮಾದಾಯಿ ಕಾವು ದೇವಸ್ಥಾನ ಮತ್ತು ಬೇಕಲ್ ಕೋಟೆಗೆ ಇರುತ್ತದೆ. ಕೇರಳ ಪ್ರವಾಸದ ಪ್ಯಾಕೇಜ್ ಒಂದು ದಿನವಿಡೀ ಇರುತ್ತದೆ ಎಂದು ಅವರು ಹೇಳಿದರು.

ರಾಯಚೂರಿನಲ್ಲಿ ರಸ್ತೆಗಿಳಿದ ದುರಸ್ತಿಗೆ ಬಂದಿರುವ ಬಸ್‌ಗಳು, ಪ್ರಯಾಣಿಕರಿಗೆ ಆತಂಕರಾಯಚೂರಿನಲ್ಲಿ ರಸ್ತೆಗಿಳಿದ ದುರಸ್ತಿಗೆ ಬಂದಿರುವ ಬಸ್‌ಗಳು, ಪ್ರಯಾಣಿಕರಿಗೆ ಆತಂಕ

ಕೆಎಸ್‌ಆರ್‌ಟಿಸಿಯ ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಟೂರ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಅಕ್ಟೋಬರ್ 21 ರಿಂದ 31 ರ ನಡುವೆ ಮಂಗಳೂರು, ಉಡುಪಿ ಮತ್ತು ಕುಂದಾಪುರದಿಂದ ವಿವಿಧ ಸ್ಥಳಗಳಿಗೆ 11 ಏಕದಿನ ಪ್ಯಾಕೇಜ್‌ಗಳನ್ನು ಪರಿಚಯಿಸಲು ವಿಭಾಗವನ್ನು ಪ್ರೇರೇಪಿಸಿತು. ಇವುಗಳಲ್ಲಿ, ಮಡಿಕೇರಿ, ಕೊಲ್ಲೂರು ಮತ್ತು ಪುತ್ತೂರಿಗೆ ಒಂದು ದಿನದ ಪ್ರವಾಸ ಭಾರಿ ಯಶಸ್ಸನ್ನು ಕಂಡಿದೆ. ವಾರಾಂತ್ಯದಲ್ಲಿ ವಿಭಾಗವು ಈ ಪ್ಯಾಕೇಜ್‌ಗಳೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ.

ಮಂಗಳೂರು-ಮಡಿಕೇರಿ ಟೂರ್ ಪ್ಯಾಕೇಜ್‌ಗೆ ಅತ್ಯಧಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿನಕ್ಕೆ ಸರಾಸರಿ ನಾಲ್ಕು ಬಸ್‌ಗಳು ಮಡಿಕೇರಿಗೆ ಸಂಚರಿಸುತ್ತವೆ. ಭಾನುವಾರ ಏಳು ಬಸ್‌ಗಳು ಮಡಿಕೇರಿಗೆ, ಮೂರು ಬಸ್‌ಗಳು ಕೊಲ್ಲೂರಿಗೆ ಮತ್ತು ಒಂದು ಬಸ್‌ಗಳು ಪುತ್ತೂರಿಗೆ ಓಡಾಟ ನಡೆಸಿದವು. ಮಂಗಳೂರಿನಿಂದ ಕೊಲ್ಲೂರು ಪ್ರವಾಸದ ಪ್ಯಾಕೇಜ್ ಮಾರನಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ.

ಪುತ್ತೂರಿನ ಪ್ಯಾಕೇಜ್‌ನಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಮೂರ್ತಿಯುಂಜೇಶ್ವರ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಗೆಜ್ಜೆಗಿರಿ ಮತ್ತು ಹನುಮಗಿರಿ ಮತ್ತು ಮಡಿಕೇರಿ ಪ್ಯಾಕೇಜ್ ರಾಜಾ ಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಮತ್ತು ಹಾರಂಗಿ ಅಣೆಕಟ್ಟುಗಳನ್ನು ಒಳಗೊಂಡಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ವಾರಾಂತ್ಯದಲ್ಲಿ ಸೇವೆಗಳನ್ನು ಮುಂದುವರಿಸಲು ವಿಭಾಗವನ್ನು ಸಜ್ಜುಗೊಳಿಸಲಾಗಿದೆ ಎಂದು ಶೆಟ್ಟಿ ಹೇಳಿದರು.

Package tour to Goa, Kerala from KSRTC

ಆದಾಗ್ಯೂ, ಪ್ಯಾಕೇಜ್ ಟೂರ್‌ಗಾಗಿ ದೀಪಾವಳಿ ಜನರ ಓಡಾಟ ದಸರಾ ಜನರ ಓಡಾಟಕ್ಕಿಂತ ತುಲನಾತ್ಮಕವಾಗಿ ಕಡಿಮೆಯಾಗಿದೆ. ದಸರಾ ಪ್ಯಾಕೇಜ್ ಅಂಗವಾಗಿ ಕೆಎಸ್‌ಆರ್‌ಟಿಸಿ 119 ಬಸ್ ಗಳನ್ನು ಓಡಿಸಿ ಸುಮಾರು 13 ಲಕ್ಷ ರೂ. ದೀಪಾವಳಿ ಪ್ರವಾಸದ ಪ್ಯಾಕೇಜ್‌ನ ಭಾಗವಾಗಿ ಒಟ್ಟು 70 ಬಸ್‌ಗಳು ಅಕ್ಟೋಬರ್ 31 ರವರೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಈ ದೀಪಾವಳಿಯಲ್ಲಿ ದಿನಕ್ಕೆ ಸರಾಸರಿ ಐದು ಬಸ್‌ಗಳು ಓಡಾಡಲಿವೆ ಎಂದು ರಾಜೇಶ್ ಶೆಟ್ಟಿ ಹೇಳಿದರು.

English summary
After the resounding success of the one-day package tours launched during Dussehra and Diwali, the Mangalore division of the Karnataka State Road Transport Corporation is planning to launch special two-day package tours to Goa and Kerala later this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X