ಮಿಸ್ಸಿಂಗ್ ಕರ್ನಾಟಕ: 3 ವರ್ಷದಲ್ಲಿ 50 ಸಾವಿರ ಮಂದಿ ಕಾಣೆ
ಬೆಂಗಳೂರು, ಅ.3: ರಾಜ್ಯದಲ್ಲಿ ಮಕ್ಕಳು, ಪುರುಷರು, ಮಹಿಳೆಯರ ನಾಪತ್ತೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ, ಆದರೂ ಪತ್ತೆಗೆ ಕ್ರಮ ಕೈಗೊಳ್ಳದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ರಾಜ್ಯದಲ್ಲಿ 2015-2018ರವರೆಗೆ ಒಟ್ಟು 52,813 ಮಂದಿ ಕಾಣೆಯಾಗಿದ್ದಾರೆ. ಅದರಲ್ಲಿ ಇನ್ನೂ 14,150 ಮಂದಿ ಪತ್ತೆಯಾಗಿಲ್ಲ, ಈ ಕುರಿತು ಡಿಜಿಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಅಧ್ಯಯನ ನಡೆಸದೆ ಯಾಕೆ ಉತ್ತರ ನೀಡುತ್ತೀರಿ ಎಂದು ಪ್ರಶ್ನಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಕುರಿತಂತೆ ಸ್ವಯಂಪ್ರೇರಿತ ದೂರು ಮತ್ತು ರಾಜ್ಯದ ಹಲವು ನಾಪತ್ತೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾ. ರಾಘವೇಂದ್ರ ಚವ್ಹಾಣ್ ಹಾಗೂ ನ್ಯಾ. ಬಿಎಂ ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು.

ನಾಪತ್ತೆಯಾಗಿರುವವರು ದೇಶದ್ರೋಹಿ ಸಂಘಟನೆಯಲ್ಲಿ ತೊಡಗಿರುವರೇ? ಇಂಥವರನ್ನು ತಂದಿಟ್ಟುಕೊಂಡು ಬೆಂಗಳೂರಿಗೆ ಅಪಾಯವನ್ನು ತರಲು ಸಂಘಟನೆಗಳು ಮುಂದಾಗಿವೆಯೇ?, ವಿಚಕ್ಷಣಾ ದಳ ಏನು ಮಾಡುತ್ತಿವೆ ಎಂದು ಹೈಕೋರ್ಟ್ರ ಪ್ರಶ್ನೆ ಕೇಳಿದೆ.ನಾಪತ್ತೆಯಾದವರ ಪತ್ತೆಗೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಗಾಬರಿ ಹುಟ್ಟಿಸುವ ಸಂಗತಿ, ನಾಪತ್ತೆಯಾದವರ ಆರ್ಥಿಕ ಹಿನ್ನೆಲೆಯನ್ನು ಪೊಲೀಸರು ವಿಶ್ಲೇಷಿಸಬೇಕಿತ್ತು ಎಂದು ಹೈಕೋರ್ಟ್ ಹೇಳಿದೆ.












Click it and Unblock the Notifications