"ಉತ್ತರ ಕರ್ನಾಟಕದ ಹಿನ್ನಡೆಗೆ ಇದೇ ಕಾರಣ"
Uttara Karnataka: "ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯದಂತಹ ಮಹತ್ವದ ಇತಿಹಾಸವಿರುವ, ದೊಡ್ಡ ದೊಡ್ಡ ಶ್ರೀಮಂತ ಸಾಮ್ರಾಜ್ಯವಿದ್ದ ಉತ್ತರ ಕರ್ನಾಟಕದ ಈಗಿನ ಪರಿಸ್ಥಿತಿ ಶೋಚನೀಯವಾಗಿದೆ. ಉತ್ತರ ಕರ್ನಾಟಕದ ಕೆಲವು ಯುವಕರಿಗೆ ಜವಾಬ್ದಾರಿ ಇಲ್ಲ... ಕೆಲವರು ಕುಡುಕರು ಇನ್ನೂ ಕೆಲವರು ತಂಬಾಕು ಸೇವನೆ ಮಾಡುತ್ತಾರೆ. ಈ ಭಾಗದಲ್ಲಿ ಕೆಲವು ನಗರಗಳು ಅಭಿವೃದ್ಧಿ ಹಾಗೂ ಸ್ವಚ್ಛತೆ ಕೊರತೆ ಇದೆ" ಇದು "ನನ್ ಮಿನಿ ರೇಡಿಯೋ" ಖ್ಯಾತಿಯ ಯೂಟ್ಯೂಬರ್ ಹರೀಶ್ ಅವರು ಹೇಳಿರುವ ಮಾತು. ಈ ವಿಡಿಯೋ ಉತ್ತರ ಕರ್ನಾಟಕದವರನ್ನು ಕೆರಳಿಸಿದೆ. ಉತ್ತರ ಕರ್ನಾಟಕದ ಬಗ್ಗೆ ಏನೂ ತಿಳಿದುಕೊಳ್ಳದೆ ಸುಮ್ಮನೆ ಮಾತನಾಡಬೇಕು ಅಂತ ಮಾತನಾಡಿದಾಗ ಈ ರೀತಿ ಆಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಏನಿದು ವಿವಾದ ಎನ್ನುವ ವಿವರ ಇಲ್ಲಿದೆ.
ಉತ್ತರ ಕರ್ನಾಟಕದ ಯುವಕರು ಹಾಗೂ ಪರಿಸ್ಥಿತಿಯ ಬಗ್ಗೆ ಹರೀಶ್ ಅವರು ಮಾಡಿರುವ ವಿಡಿಯೋಗೆ ಪರ - ವಿರೋಧ ವ್ಯಕ್ತವಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಬಹುತೇಕರು ಈ ವಿಡಿಯೋಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ಇಲ್ಲಿರುವ ಎಷ್ಟೋ ಹಳ್ಳಿಗಳಲ್ಲಿರುವ ಯುವಕರು, ಯುವತಿಯರು ಓದಬೇಕು ಏನಾದರೂ ಮಾಡಬೇಕು ಎನ್ನುವ ಛಲವನ್ನೇ ಕಳೆದುಕೊಂಡು ಬಿಟ್ಟಿದ್ದಾರೆ. ಇಲ್ಲಿರುವ ಎಷ್ಟೋ ಯುವಕರು 10ನೇ ತರಗತಿಯ ನಂತರ ಓದುವುದೇ ಇಲ್ಲ. ರಸ್ತೆ ರಸ್ತೆಗಳಲ್ಲಿ ಅಡ್ಡಾಡಿರುತ್ತಿರುತ್ತಾರೆ. ಜೀವನದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೆಲವರು ತಂಬಾಕು ಚಟವನ್ನು ಬೆಳೆಸಿಕೊಂಡಿದ್ದಾರೆ" ಎನ್ನುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಉತ್ತರ ಕರ್ನಾಟಕದವರಿಂದ ವಿರೋಧ: ಈ ವಿಡಿಯೋವನ್ನು ರಿಸರ್ಚ್ ಮಾಡದೆ ಮಾಡಲಾಗಿದೆ. ಚೂರಾದರೂ ರಿಸರ್ಚ್ ಮಾಡಿಕೊಂಡು ವಿಡಿಯೋ ಮಾಡಬೇಕು. ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಮಂಡಿಸುವಾಗ ಕೆಲವರು.. ಕೆಲವೊಂದು ಅಂತ ಹೇಳುವುದರಲ್ಲಿ ಅರ್ಥವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಶೇಷಗಿರಿ ದೇಶಪಾಂಡೆ ಎನ್ನುವವರು, ಅಣ್ಣ Please Restrict yourself to OMR (ಮಂಗಳೂರು). ಸುಮ್ನೆ ಉತ್ತರ ಕರ್ನಾಟಕದ ಬಗ್ಗೆ ಏನೋ ಏನೋ ವದರ್ ಬ್ಯಾಡಾ. - High Crime Rates - High Alcohol Consumption are more in your OMR, Google first ಎಂದು ಹೇಳಿದ್ದಾರೆ.
ಸಚಿನ್ ಎನ್ ಎನ್ನುವವರು, ಏನೋ ಕೊನೆಗೂ ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿ ಬಗ್ಗೆ ಹೋರಾಟಗಾರರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದದ್ದಾರೆ ಎನ್ನುವಾಗಲೇ ಅಲ್ಲಿ ಆಗಿದ್ದು ಬರೀ ಅವಮಾನ. ವಿಡಿಯೋದಲ್ಲಿ ಬಂದ ಮಾತುಗಳು

* ಕುಡುಕರು
* ಕಸ ಎಸೆಯೋ ಕೊಳಕರು
* ಪತ್ನಿ ಪೀಡಕರು
* ಕೊಡುವ ಸೌಲಭ್ಯ ತಿರಸ್ಕರಿಸೋರು
* ಛಲ - ಗುರಿ ಇಲ್ಲದವರು
* ಶುಚಿತ್ವ ಇಲ್ಲದವರು
* ವಾಸ್ತವಿಕತೆ ತಿಳಿಯದವರು
* ಧರ್ಮಾಂಧರು ಇವೆಲ್ಲ ಬೇರೆಲ್ಲೂ ಇಲ್ವಾ? ಅಂತ ಪ್ರಶ್ನೆ ಮಾಡಿದ್ದಾರೆ.
ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿ 💔💔😞
— ನನ್ ಮಿನಿ ರೇಡಿಯೋ 📻 (@nanminiradio) April 13, 2025
ನಿಜಕ್ಕೂ ನೋವಾಗತ್ತೆ #uttarakarnataka #bijapur #hublidharwad #vijayapura #kannada #ಕರ್ನಾಟಕ #Karnataka pic.twitter.com/pXXL8eAXvV
ಉತ್ತರ ಕರ್ನಾಟಕದ ಮಕ್ಕಳು ಯಾಕೆ ಓದುತ್ತಿಲ್ಲ. ಯುವಕರು ಯಾಕೆ ಗುಳೆ ಹೋಗುತ್ತಿದ್ದಾರೆ, ಸರ್ಕಾರದ ಸೌಲಭ್ಯಗಳೇನಾದವು ? ತಿಳಿಬೇಕಂದ್ರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಶಿಕ್ಷಣ ಗುಣಮಟ್ಟ ಪರಿಕ್ಷಿಸಿ, ಸರ್ಕಾರದ ಸೌಕರ್ಯಗಳು ಪೇಪರ್ ಬಿಟ್ಟು ಮನೆಗೆ ಬಂದಿದಾವಾ ಕೇಳಿ, ಹೊಲ ಇದ್ರು ಬೆಲೆ ಯಾಕಿಲ್ಲ ಹೇಳಿ. ಇದ್ರು ನಿಮ್ಮೂರಿಗೆ ನೀರಾವರಿ ಯೋಜನೆಗಳು ಯಾಕಿಲ್ಲ ಕೇಳಿ ಅಂತ Tweet ಕರ್ನಾಟಕ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications