ಆಪರೇಷನ್ ಕಮಲ: ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ವ್ಯಂಗ್ಯದ ರಸಪ್ರಶ್ನೆ

ಬೆಂಗಳೂರು, ಫೆಬ್ರವರಿ 14: ಶಾಸಕ ನಾಗನಗೌಡ ಅವರ ಮಗ ಶರಣಗೌಡ ಬಳಿ ಪಕ್ಷ ತೊರೆದು ಬಿಜೆಪಿಗೆ ಬರುವಂತೆ ಆಹ್ವಾನ ನೀಡುವ ಆಡಿಯೊ ಪ್ರಕರಣವನ್ನು ಕಾಂಗ್ರೆಸ್, ಬಿಜೆಪಿಯ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡಿದೆ.

ಪ್ರಕರಣ ಬಯಲಾದ ದಿನಗಳಿಂದಲೂ ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಆಡಿಯೊ ಪ್ರಕರಣದ ಕುರಿತು ಟ್ವಿಟ್ಟರ್‌ನಲ್ಲಿ ವ್ಯಂಗ್ಯದ ಪ್ರಶ್ನೆಗಳನ್ನು ನೀಡುತ್ತಿದೆ. ಬಿಜೆಪಿ ಮತ್ತು ಯಡಿಯೂರಪ್ಪ ಕುರಿತಂತೆ ಸರಣಿ ಟ್ವೀಟ್‌ ಪ್ರಶ್ನೆಗಳನ್ನು ಹಾಕಿರುವ, ಅವುಗಳಿಗೆ ಉತ್ತರಿಸಿ ಎಂದು ಆಯ್ಕೆಗಳನ್ನು ನೀಡಿದೆ.

ಅಲ್ಲದೆ, ಪ್ರತಿ ಟ್ವೀಟ್‌ನಲ್ಲಿಯೂ ಆಪರೇಷನ್ ಕಮಲ ಮತ್ತು ಬಿಎಸ್‌ವೈ ರಾಜೀನಾಮೆ ನೀಡಲಿ ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಬಳಸುತ್ತಿದೆ.

ಹಾಗೆಯೇ, ಆಡಿಯೊ ಮುದ್ರಣ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಬಿಜೆಪಿಯ ಪ್ರಯತ್ನವನ್ನೂ ಟೀಕಿಸಿದೆ. ಪರಮೇಶ್ವರ್ ಅವರು ಐದು ವರ್ಷದ ಹಿಂದೆ ಆಡಿದ್ದ ಮಾತಿನ ವಿಡಿಯೋವನ್ನು ಕುತಂತ್ರ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದೀರ. ಸಾವು ಬಯಸುವುದಕ್ಕೂ, ಮಾತಿಗೆ ತಿರುಗೇಟು ನೀಡುವುದಕ್ಕೂ ವ್ಯತ್ಯಾಸ ಅರಿಯದ ಅಮಾಯಕರಲ್ಲ ರಾಜ್ಯದ ಜನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಅಲ್ಲದೆ, ಯಡಿಯೂರಪ್ಪ ಮತ್ತು ಇತರರು ನಡೆಸಿದ್ದಾರೆ ಎನ್ನಲಾದ ಆಪರೇಷನ್ ಕಮಲದ ಆಡಿಯೋದ 2.20 ನಿಮಿಷದ ತುಣುಕನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಬಿಜೆಪಿ ಕುರಿತು ಸರಣಿ ಟ್ವೀಟ್‌ಗಳಲ್ಲಿ ಕೇಳಿರುವ ಪ್ರಶ್ನೆಗಳು ಇಲ್ಲಿವೆ.

Array

ಧ್ವನಿ ಯಾರದ್ದು?

ಆಪರೇಷನ್ ಕಮಲ ಆಡಿಯೊ ಕ್ಲಿಪ್‌ನಲ್ಲಿರುವ ಧ್ವನಿ ಯಾರದ್ದು. ಬಿಎಸ್‌ವೈ, ಶಾ, ಮೋದಿ ಎಂದು ಮೂರು ಆಯ್ಕೆಗಳನ್ನು ಕಾಂಗ್ರೆಸ್ ನೀಡಿದೆ.

Array

ಗಾಡ್ ಫಾದರ್ ಯಾರು

ಆಪರೇಷನ್ ಕಮಲದ ಗಾಡ್ ಫಾದರ್ ಯಾರು?
ಬಿಎಸ್‌ವೈ
ಮೋದಿ
ಶಾ

ಯಾವ ಪಕ್ಷದ ನಾಯಕ?

ಆಪರೇಷನ್ ಕಮಲ ಆಡಿಯೊ ಕ್ಲಿಪ್‌ನಲ್ಲಿ ಶಾಸಕರಿಗೆ 10 ಕೋಟಿ ಆಫರ್ ನೀಡಿದವರು ಯಾವ ಪಕ್ಷದ ನಾಯಕ?
ಬಿಜೆಪಿ
ಕೆಜೆಪಿ

ನಿರಾಕರಿಸಿದವರು ಯಾರು?

ಆ ಆಡಿಯೊ ಕ್ಲಿಪ್‌ನಲ್ಲಿರುವ ಧ್ವನಿ ತಮ್ಮದಲ್ಲ ಎಂದು ಫೆಬ್ರವರಿ 8ರಂದು ನಿರಾಕರಿಸಿದವರು ಯಾರು?
ಬಿಎಸ್‌ವೈ
ಕರ್ನಾಟಕದ ವಿರೋಧಪಕ್ಷದ ನಾಯಕ
ಬಿಜೆಪಿ ಕರ್ನಾಟಕ ಅಧ್ಯಕ್ಷ

ಒಪ್ಪಿಕೊಂಡವರು ಯಾರು?

ಫೆಬ್ರವರಿ 10ರಂದು ಆಪರೇಷನ್ ಕಮಲ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡವರು ಯಾರು?
ಬಿಎಸ್‌ವೈ
ಬಿಜೆಪಿ ಕರ್ನಾಟಕ ಅಧ್ಯಕ್ಷ
ಕರ್ನಾಟಕದ ವಿರೋಧಪಕ್ಷದ ನಾಯಕ

ಹಣ ಎಲ್ಲಿಂದ ಬಂತು?

ಆಪರೇಷನ್ ಕಮಲಕ್ಕೆ ಹಣವು ಎಲ್ಲಿಂದ ಬಂದಿತು?
ರಫೇಲ್ ಡೀಲ್
ಅಪನಗದೀಕರಣ
ಗಣಿಧಣಿಗಳಿಂದ

ಜಡ್ಜ್‌ಗಳ ಖರೀದಿ

ಆಪರೇಷನ್ ಕಮಲ ಆಡಿಯೋ ಟೇಪ್‌ನಲ್ಲಿ ಹೇಳಿರುವಂತೆ ಜಡ್ಜ್‌ಗಳನ್ನು ಬುಕ್ ಮಾಡುವ ಸಾಮರ್ಥ್ಯ ಯಾರಿಗೆ ಇದೆ?
ಶಾ
ಮೋದಿ
ಬಿಎಸ್‌ವೈ

ರಾಜೀನಾಮೆ ನೀಡುತ್ತೇನೆ ಎಂದವರು ಯಾರು?

ಆಪರೇಷನ್ ಕಮಲ ಆಡಿಯೋ ಟೇಪ್‌ನಲ್ಲಿರುವ ಧ್ವನಿ ತಮ್ಮದು ಎಂಬುದು ಸಾಬೀತಾದರೆ ರಾಜಕೀಯ ತೊರೆಯುವುದಾಗಿ ಹೇಳಿದ್ದ ಬಿಜೆಪಿ ನಾಯಕ ಯಾರು?

ಬಿಎಸ್‌ವೈ
ಬಿಜೆಪಿ ಕರ್ನಾಟಕ ಅಧ್ಯಕ್ಷ
ಕರ್ನಾಟಕ ವಿರೋಧಪಕ್ಷದ ನಾಯಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+