ಜೂನ್ 10ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ, ಇತರೆ ಮಾಹಿತಿಗಳು

ಬೆಂಗಳೂರು, ಜೂನ್ 3: ಅಂತೂ ಶಿಕ್ಷಕರ ವರ್ಗಾವಣೆ ಕುರಿತ ಬೇಸರ, ಪ್ರತಿಭಟನೆ ಎಲ್ಲದಕ್ಕೂ ತೆರೆ ಬಿದ್ದಿದೆ. ಜೂನ್ 10ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಕೊನೆಗೂ ಚಾಲನೆ ನೀಡಿದ್ದು, ಸಿ ವಲಯದ ಶಾಲೆಗಳಿಗೆ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ.

ಜೂನ್ 10ರಂದು ಟಿಡಿಎಸ್ ಮತ್ತು ವರ್ಗಾವಣೆ ತಂತ್ರಾಂಶದಲ್ಲಿ ಶಾಲೆಗಳ ವಲಯಗಳ ವಿವರ ನೀಡುವುದರ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿವೆ. ಆಗಸ್ಟ್‌ 10ರೊಳಗೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

 ಶಿಕ್ಷಕರ ವರ್ಗಾವಣೆ ಪ್ರಮುಖ ನಿಯಮಗಳೇನು?

ಶಿಕ್ಷಕರ ವರ್ಗಾವಣೆ ಪ್ರಮುಖ ನಿಯಮಗಳೇನು?

ಶಿಕ್ಷಕರ ವರ್ಗಾವಣೆಗೂ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಯಾವುದೇ ತಾಲೂಕು ಅಥವಾ ಘಟಕದಿಂದ ಹೊರಗೆ ವರ್ಗಾವಣೆ ಹೊಂದಲು ಕೋರಿ ಅರ್ಜಿ ಸಲ್ಲಿಸಬೇಕಾದಲ್ಲಿ ಆ ಘಟಕದಲ್ಲಿ ಮಂಜೂರಾದ ಆಯಾ ವೃಂದದ ಖಾಲಿ ಹುದ್ದೆಗಳು ಶೇ.20ಕ್ಕಿಂತ ಹೆಚ್ಚು ಖಾಲಿ ಇರಬಾರದು.

 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ

ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ

ಕಡ್ಡಾಯ, ಕೋರಿಕೆ ವರ್ಗಾವಣೆ ಪಟ್ಟಿಗೆ ಆಕ್ಷೇಪಣೆಗಳನ್ನು ಜೂನ್ 12ರಿಂದ 20ರವರೆಗೆ ಸ್ವೀಕರಿಸಲಾಗುತ್ತದೆ. 26ರಂದು ಅಂತಿಮಗೊಳಿಸಿ ಅದೇ ದಿನ ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿ ಮಾಡಿ, ಶಾಲಾವಾರು ಹುದ್ದೆ ಪ್ರಕಟಿಸಲಾಗುತ್ತದೆ.

 ವರ್ಗಾವಣೆ ವಿಧಗಳಾವುವು

ವರ್ಗಾವಣೆ ವಿಧಗಳಾವುವು

ಕಡ್ಡಾಯ ವರ್ಗಾವಣೆ, ಕೋರಿಕೆ ವರ್ಗಾವಣೆ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಕೋರಿಗೆ ವರ್ಗಾವಣೆಯಲ್ಲಿ ಘಟಕದ ಒಳಗಿನ ಮತ್ತು ಹೊರಗಿನ ವರ್ಗಾವಣೆ ಪರಸ್ಪರ ವರ್ಗಾವಣೆ ಎಲ್ಲದಕ್ಕೂ ಪ್ರತ್ಯೇಕ ವೇಳಾಪಟ್ಟಿಗಳಿರುತ್ತವೆ.

 ವರ್ಗಾವಣೆ ಪ್ರಕ್ರಿಯೆಗಳು ಆನ್‌ಲೈನ್

ವರ್ಗಾವಣೆ ಪ್ರಕ್ರಿಯೆಗಳು ಆನ್‌ಲೈನ್

ವರ್ಗಾವಣೆ ಪ್ರಕ್ರಿಯೆಗಳೆಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಒಮ್ಮೆ ಕೌನ್ಸೆಲಿಂಗ್ ನಲ್ಲಿ ಸ್ಥಳ ಆಯ್ಕೆ ಮಾಡಿದ ನಂತರ ಮಾರ್ಪಾಡು ಅಥವಾ ವರ್ಗಾವಣೆ ಆದೇಶ ರದ್ದತಿಗೆ ಅವಕಾಶವಿಲ್ಲ. ಇಲಾಖೆ ವೆಬ್‌ಸೈಟ್ www.schooleducation,kar.nic.in ಪ್ರತಿದಿನ ನೋಡಿ ಮಾಹಿತಿ ಪಡೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+