ಮಾಲ್ಗುಡಿ ಡೇಸ್ ಧಾರಾವಾಹಿ ಕನ್ನಡದಲ್ಲಿ ಪ್ರಸಾರ ಮಾಡಲು ಮನವಿ
ಕನ್ನಡದ ಜನಪ್ರಿಯ ಟಿವಿವಾಹಿನಿಗಳಾದ ಉದಯ,ಕಲರ್ಸ್ ಕನ್ನಡ, ಜೀ ಕನ್ನಡ ಮತ್ತು ಸುವರ್ಣ ವಾಹಿನಿಗಳಲ್ಲಿ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಲು ಮನವಿ ಮಾಡಿಕೊಂಡಿರುವ ಕನ್ನಡಿಗರು, ಆನ್ ಲೈನ್ ಅರ್ಜಿ ಹಾಕಿದ್ದಾರೆ.
ನಟ, ನಿರ್ದೇಶಕ ಶಂಕರ್ ನಾಗ್ ಅವರ ನಿರ್ದೇಶನದ "ಮಾಲ್ಗುಡಿ ಡೇಸ್" ಧಾರಾವಾಹಿಯು ಈಗ ಕನ್ನಡೀಕರಣಗೊಂಡು ಕನ್ನಡದಲ್ಲಿಯೇ ಲಭ್ಯವಿದೆ. ಕನ್ನಡದ ನಟರೇ ಅಭಿನಯಿಸಿರುವ, ಕನ್ನಡ ಸಂಸ್ಕೃತಿಯನ್ನೇ ಬಿಂಬಿಸುವ ಈ ಧಾರಾವಾಹಿಯು ಹಿಂದಿಯಲ್ಲಿ ಇದ್ದಿದರಿಂದ ಕನ್ನಡಿಗರು ತಮ್ಮ ಭಾಷೆಯಲ್ಲೇ ನೋಡುವ ಅವಕಾಶದಿಂದ ಇಷ್ಟು ವರ್ಷ ವಂಚಿತರಾಗಿದ್ದರು.
ಆದರೆ ಈಗ ಕನ್ನಡದಲ್ಲಿ ಡಬ್ಬಿಂಗ್ ಮುಖ್ಯವಾಹಿನಿಗೆ ಬಂದು ಹಲವಾರು ಸಿನೇಮಾಗಳು, ಟಿ.ವಿ. ಕಾರ್ಯಕ್ರಮಗಳು ಡಬ್ ಆಗಿ ಪ್ರಸಾರವಾಗುತ್ತಿವೆ ಮತ್ತು ಕನ್ನಡಿಗರು ಅದನ್ನು ತುಂಬಾ ಸಕಾರಾತ್ಮಕವಾಗಿ ಸ್ವೀಕರಿಸುವುದು ಕಂಡುಬರುತ್ತಿದೆ. ಮಾಲ್ಗುಡಿ ಡೇಸ್ ಸಹ ಅತ್ಯುತ್ತಮ ಗುಣಮಟ್ಟದಲ್ಲಿ ಡಬ್ಬಿಂಗ್ ಆಗಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಹೀಗಿರುವಾಗ ಮಾಲ್ಗುಡಿ ಡೇಸ್ ನ ಕನ್ನಡ ಆವೃತ್ತಿಯನ್ನು ನಿಮ್ಮ ಜನಪ್ರಿಯ ವಾಹಿನಿಗಳಲ್ಲಿ ಪ್ರಸಾರ ಮಾಡಬೇಕೆಂದು ಜಾಗೃತ ಕನ್ನಡ ಗ್ರಾಹಕರಾದ ನಾವು ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.

ಕನ್ನಡದ ಕಲಾವಿದರು ಅಭಿನಯಿಸಿರುವ, ಕನ್ನಡಿಗರೇ ನಿರ್ದೇಶಿಸಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲ್ಪಟ್ಟ, ಕನ್ನಡ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಿದ ಅಪರೂಪದ ಧಾರಾವಾಹಿ "ಮಾಲ್ಗುಡಿ ಡೇಸ್" ಆಗಿದ್ದು, ಅದನ್ನು ಕನ್ನಡ ವಾಹಿನಿಯೊಂದರಲ್ಲಿ ಕನ್ನಡದಲ್ಲೇ ನೋಡಬೇಕೆಂಬುದು ಕೋಟ್ಯಂತರ ಕನ್ನಡಿಗರ ಕನಸಾಗಿದೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications