ಫೆ. 15 ಮತ್ತು ಮಾ. 15ರಂದು ಪಾಸ್ ಪೋರ್ಟ್ ಸುಗ್ಗಿ

online-indian-passport-mela-at-bangalore-mangalore-hubli-feb-15-mar-15
ಬೆಂಗಳೂರು, ಫೆ. 8- ರಾಜ್ಯದಲ್ಲಿ ಮೂರು ಕಡೆ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗಳು 2 ದಿನ ಪ್ರತ್ಯೇಕವಾಗಿ ಪಾಸ್ ಪೋರ್ಟ್ ವಿತರಣೆ ಮೇಳವನ್ನು ಹಮ್ಮಿಕೊಂಡಿವೆ. ಫೆಬ್ರವರಿ 15 ಮತ್ತು ಮಾರ್ಚ್ 15ರಂದು Passport Mela ನಡೆಯಲಿದೆ.

ನಗರದ ಲಾಲ್ ಬಾಗ್ ರಸ್ತೆ ಊರ್ವಶಿ ಟಾಕೀಸ್ ಬಳಿಯಿರುವ ಮತ್ತು ಮಾರತ್ ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ (Passport Seva Kendras) ಮುಂದಿನ ಶನಿವಾರ ಅಂದರೆ ಫೆಬ್ರವರಿ 15 ರಂದು ಮತ್ತು ಮಾರ್ಚ್ 15ರಂದು (ಶನಿವಾರ) ಈ ಪಾಸ್ ಪೋರ್ಟ್ ಮೇಳ ನಡೆಯಲಿದೆ.

ಜತೆಗೆ ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿಯೂ ಈ ಮೇಳ ನಡೆಯಲಿದೆ.

Feb 15 ರಂದು ನಡೆಯುವ ಮೇಳಕ್ಕೆ Feb 10 ರಂದು ಮುಂಗಡ ಬುಕ್ಕಿಂಗ್ ಮಾಡಬಹುದು. ಮತ್ತು Mar 15 ರಂದು ನಡೆಯುವ ಮೇಳಕ್ಕೆ Mar 10 ರಂದು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂಗಡವಾಗಿ ಪಾಸ್ ಪೋರ್ಟ್ ಕೇಂದ್ರದ ಅಧಿಕೃತ ವೆಬ್ ಸೈಟಿನಲ್ಲಿ ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಿರುವ ಅರ್ಜಿದಾರರಿಗೆ ಮಾತ್ರ Passport Melaದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಮುಂಚಿತವಾಗಿಯೇ ARN ನಲ್ಲಿ ನೋಂದಾಯಿಸಿಕೊಂಡಿರಬೇಕು.

ಅದಾದ ನಂತರ ಆನ್ ಲೈನ್ ನಲ್ಲಿ ಶುಲ್ಕ ಪಾವತಿಸಿ, ಅಪಾಯಿಂಟ್ ಮೆಂಟ್ ಪಡೆಯಬೇಕು. ಮೇಳಕ್ಕೆ ಹೋಗುವಾಗ ARN ಪ್ರತಿ ಮತ್ತು ಶುಲ್ಕ ಪಾವತಿಸಿ ಸೇರಿದಂತೆ ಅಪಾಯಿಂಟ್ ಮೆಂಟ್ ವಿವರವನ್ನು ಕೊಂಡೊಯ್ಯಬೇಕು. ಜತೆಗೆ ಮೂಲ ದಾಖಲೆಗಳು ಮತ್ತು ಜೆರಾಕ್ಸ್ ಪ್ರತಿಗಳನ್ನು ಹೊಂದಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+