ಕರ್ನಾಟಕ : ಸಬ್ಸಿಡಿ ದರದಲ್ಲಿ 6 ಕೋಟಿ ಎಲ್‌ಇಡಿ ಬಲ್ಬ್‌

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 09 : ಕರ್ನಾಟಕ ಸರ್ಕಾರದ ಎಲ್‌ಇಡಿ ಬಲ್ಬ್ ವಿತರಣೆಯ 'ಹೊಸಬೆಳಕು' ಯೋಜನೆಗೆ ಮೈಸೂರಿನಲ್ಲಿ ಶುಕ್ರವಾರ ಚಾಲನೆ ದೊರೆಯಲಿದೆ. ಮೊದಲ ಹಂತದಲ್ಲಿ ವಿತರಣೆ ಮಾಡಲು ಸುಮಾರು 6 ಕೋಟಿ ಬಲ್ಬ್‌ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ವಿದ್ಯುತ್ ಉಳಿತಾಯಕ್ಕಾಗಿ ಇಂಧನ ಇಲಾಖೆ ಗೃಹ ಬಳಕೆ ಗ್ರಾಹಕರಿಗೆ ಎಲ್ಇಡಿ ಬಲ್ಬ್ ವಿತರಣೆ ಮಾಡುವ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಗೆ ಹೊಸಬೆಳಕು ಎಂದು ನಾಮಕರಣ ಮಾಡಲಾಗಿದ್ದು, ಡಿಸೆಂಬರ್ 11ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.

dk shivakumar

90 ರಿಂದ 100 ರೂ. : 'ಮೊದಲ ಹಂತದಲ್ಲಿ ಸರ್ಕಾರ ಸುಮಾರು 6 ಕೋಟಿ ಬಲ್ಬ್‌ಗಳನ್ನು ವಿತರಣೆ ಮಾಡಲಿದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಲ್ಬ್‌ಗಳನ್ನು 90 ರಿಂದ 100 ರೂ.ದರದಲ್ಲಿ ನೀಡಲಾಗುತ್ತದೆ. [ಎಲ್ ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ]

ಬಲ್ಬ್‌ಗಳನ್ನು ಪೂರೈಕೆ ಮಾಡುವ ಗುತ್ತಿಗೆಯನ್ನು ಇಇಎಸ್‌ಎಲ್ (Energy Efficiency Services Limited ) ಸಂಸ್ಥೆಗೆ ನೀಡಲಾಗಿದೆ. ಹೊಸಬೆಳಕು ಯೋಜನೆಯಡಿ ನೀಡಲಾಗುವ ಬಲ್ಬ್‌ಗೆ ಮೂರು ವರ್ಷಗಳ ಗ್ಯಾರಂಟಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಬಲ್ಬ್‌ಗಳು ಕೆಟ್ಟುಹೋದರೆ ಸಂಸ್ಥೆಯೇ ಉಚಿತವಾಗಿ ಬದಲಾವಣೆ ಮಾಡಿಕೊಡಲಿದೆ. [ಡಿ.11 ರಿಂದ ಕರ್ನಾಟಕದಲ್ಲಿ ಹೊಸಬೆಳಕು ಮೂಡಲಿದೆ]

hosa belaku

ಎಷ್ಟು ಹಣ ನೀಡಬೇಕು? : ಮೊದಲಿಗೆ ಪ್ರತಿಯೊಬ್ಬ ಗ್ರಾಹಕರಿಗೂ 10 ಬಲ್ಬ್‌ಗಳನ್ನು ಲೈನ್‌ಮನ್ ಅಥವ ಬಿಲ್ ಕಲೆಕ್ಟರ್‌ಗಳ ಮೂಲಕ ಹಂಚಿಕೆ ಮಾಡಲು ಇಂಧನ ಇಲಾಖೆ ನಿರ್ಧರಿಸಿದೆ. ಗ್ರಾಹಕರು 10 ರೂ. ಪಾವತಿ ಮಾಡಿ ಬಲ್ಬ್‌ಗಳನ್ನು ಪಡೆಯಬಹುದಾಗಿದೆ. ಬಾಕಿ ಮೊತ್ತವನ್ನು ಮಾಸಿಕ ವಿದ್ಯುತ್ ಬಿಲ್ ಜೊತೆಗೆ ಕಂತುಗಳಲ್ಲಿ ಮುರಿದುಕೊಳ್ಳಲಾಗುತ್ತದೆ.

ರಮ್ಯಾ, ಪುನೀತ್ ರಾಯಭಾರಿ : 'ಹೊಸಬೆಳಕು' ಯೋಜನೆಗೆ ನಟ ಪುನೀತ್ ರಾಜ್‌ಕುಮಾರ್ ಮತ್ತು ನಟಿ, ಮಾಜಿ ಸಂಸದೆ ರಮ್ಯಾ ಅವರು ರಾಯಭಾರಿಗಳಾಗಿದ್ದಾರೆ. ಎಲ್‌ಇಡಿ ಬಲ್ಬ್‌ ಬಳಕೆ ಬಗ್ಗೆ ಇವರು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಬೀದಿ ದೀಪಕ್ಕೆ ಎಲ್‌ಇಡಿ ಬಲ್ಬ್‌ : ಇಂಧನ ಇಲಾಖೆ ಮೊದಲ ಹಂತದಲ್ಲಿ ಗೃಹ ಬಳಕೆದಾರರಿಗೆ 10 ಬಲ್ಬ್‌ಗಳನ್ನು ವಿತರಣೆ ಮಾಡಲಿದೆ. 2ನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೀದಿ ದೀಪಗಳಿಗೆ ಎಲ್​ಇಡಿ ಬಲ್ಬ್ ಅಳವಡಿಸುವ ಗುರಿಯನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government 'Hosa Belaku' scheme will be officially launched on December 11, Friday at Mysuru said, Energy Minister D.K.Shivakumar. Under the scheme department has proposed to provide 6 core nine-watt LED bulbs to households.
Please Wait while comments are loading...