ಪಾಕ್ ಗೆದ್ದ ಬಳಿಕ ದೇಶದ್ರೋಹಿ ಘೋಷಣೆ ಕೂಗಿದ ವ್ಯಕ್ತಿ ಬಂಧನ

Posted By:
Subscribe to Oneindia Kannada

ಹಾವೇರಿ, ಜೂನ್ 20 : ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲುತ್ತಿದ್ದಂತೆಯೇ ಪಾಕ್ ಪರ ಘೋಷಣೆ ಕೂಗಿದ್ದ ವ್ಯಕ್ತಿಯೋರ್ವನನ್ನು ಜಿಲ್ಲೆಯ ಸವಣೂರು ಪೊಲೀಸರು ಬಂಧಿಸಿದ್ದಾರೆ.

35 ವರ್ಷದ ಶಬ್ಬೀರ ಅಹಮ್ಮದ ಬಿಜಾಪುರಿ ಬಂಧಿತ ಆರೋಪಿ. ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಶಬ್ಬೀರ್ ಪಾಕ್ ಪರ ಘೋಷಣೆ ಕೂಗಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಶಬ್ಬೀರನ್ನು ಬಂಧಿಸಿದ್ದಾರೆ.

One arrested for anti-national slogans in Haveri

ಸದ್ಯ ಬಂಧಿತ ಶಬ್ಬೀರನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಬಗ್ಗೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
One person was arrested in Savanur, Haveri district for raising anti-national slogans a Pakistan win against India in champions trophy final match on Sunday.
Please Wait while comments are loading...