ಸಿದ್ದರಾಮಯ್ಯ ಮಗನ ಸಾವಿಗೆ ಕಾರಣ ಯಾರು? ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆ

Recommended Video

      ರಾಕೇಶ್ ಸಾವಿನ ರಹಸ್ಯ ಹೇಳಿದ MTB..! | MTB Nagaraj | Oneindia Kannada

      ಬೆಂಗಳೂರು, ಸೆ 22: " ನನ್ನ ತಂಟೆಗೆ ಬಂದರೆ, ಕಾಂಗ್ರೆಸ್ ಮುಖಂಡರ ಬಂಡವಾಳವನ್ನು ಒಂದೊಂದಾಗಿ ಬಯಲು ಮಾಡುವುದಾಗಿ" ಹೊಸಕೋಟೆ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್ ಹೇಳಿದ್ದರು.

      ಅದರಂತೆಯೇ, ಭಾನುವಾರ (ಸೆ 22), ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ರಾಕೇಶ್ ಸಾವಿನ ಸುತ್ತ, ಇದೇ ಮೊದಲ ಬಾರಿಗೆ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

      " ರಾಕೇಶ್ ಸಾವನ್ನಪ್ಪಲು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಕಾರಣ" ಎಂದು ಎಂಟಿಬಿ ನೇರವಾಗಿ ಆರೋಪಿಸಿದ್ದಾರೆ. ಎಂಟಿಬಿ ಹೇಳಿಕೆ, ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

      On Siddaramaiah Son Rakesh Death: Former Hoskote MLA MTB Nagaraj Statement

      " ಇನ್ನು ನೂರು ವರ್ಷ ಬಾಳು ಬದುಕಬೇಕಾಗಿದ್ದ ರಾಕೇಶ್ ನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್" ಎಂದು ಕಿಡಿಕಾರಿರುವ ಎಂಟಿಬಿ, " ರಾಕೇಶ್ ನನ್ನು ದಿನಾ ಕುಡಿಸಿ ಕುಡಿಸಿ ಸುರೇಶ್, ರಾಕೇಶ್ ಸಾವಿಗೆ ಕಾರಣನಾಗಿದ್ದಾನೆ" ಎನ್ನುವ ಗಂಭೀರ ಆರೋಪವನ್ನು ಎಂಟಿಬಿ ಮಾಡಿದ್ದಾರೆ.

      " ಕಾಂಗ್ರೆಸ್ ಇಷ್ಟು ದುರ್ಬಲವಾದ ಕೆಪಿಸಿಸಿ ಅಧ್ಯಕ್ಷರನ್ನು ಇದುವರಿಗೆ ನೋಡಿರಲಿಲ್ಲ" ಎಂದು ದಿನೇಶ್ ಗುಂಡೂರಾವ್ ವಿರುದ್ದ ಹರಿಹಾಯ್ದ ಎಂಟಿಬಿ, " ಲೋಕಸಭಾ ಚುನಾವಣೆಯಲ್ಲಿ ಪಕ್ಷ ಇಷ್ಟು ಹೀನಾಯವಾಗಿ ನೆಲಕಚ್ಚಲು, ಪಕ್ಷದ ಹಿರಿಯ ಮುಖಂಡರುಗಳೇ ಕಾರಣ" ಎಂದು ಹೇಳಿದರು.

      " ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರೆಲ್ಲಾ ಎಲ್ಲಿಂದ ಬಂದವರು. ಜೆಡಿಎಸ್ ನಿಂದ ಬಂದವರು ನನಗೆ ಪಾಠ ಮಾಡಬೇಕಾಗಿಲ್ಲ. ಸಿದ್ರಾಮಣ್ಣ ಬರುವ ಮುನ್ನವೇ ನಾನು ಕಾಂಗ್ರೆಸ್ ನಲ್ಲಿದ್ದೆ" ಎಂದು, ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+