ಮೇ 23ರಂದು ಕಾಂಗ್ರೆಸ್‌-ಜೆಡಿಎಸ್‌ಗೆ ಬಿಗ್ ಶಾಕ್ : ಮೋದಿ ಟ್ವೀಟ್

Recommended Video

      Lok Sabha Elections 2019 :ಮೈತ್ರಿ ಪಕ್ಷಕ್ಕೆ ಶಾಕ್ ಕೊಡ್ತಾರಂತೆ ಮೋದಿ | Oneindia Kannada

      ಬೆಂಗಳೂರು, ಏಪ್ರಿಲ್ 19 : 'ಮೇ 23ರಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ಆಗಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಬಿಜೆಪಿ ಸಮಾವೇದ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಕರ್ನಾಟಕದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶಗಳಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಪ್ರಧಾನಿ ನರೇಂದ್ರ ಮೋದಿ ಸಂತಸಗೊಂಡಿದ್ದಾರೆ. ಆದ್ದರಿಂದ, ಸಮಾವೇಶದ ಚಿತ್ರಗಳನ್ನು ಟ್ವೀಟ್ ಮಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರವನ್ನು ಟೀಕಿಸಿದ್ದಾರೆ.

      'ಕರ್ನಾಟಕದಲ್ಲಿ ನಡೆಯುವ ನನ್ನ ಸಮಾವೇಶಗಳಿಗೆ ಸೇರುತ್ತಿರುವ ಜನಸಾಗರವನ್ನು ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಭಯ ಉಂಟಾಗಿದೆ. ಮೇ 23ರಂದು ನಾವು ರಾಜ್ಯದಲ್ಲಿ ಕ್ಲೀನ್ ಸ್ವಿಪ್ ಮಾಡಲಿದ್ದು ಆಗ ಅವರಿಗೆ ಬಿಗ್ ಶಾಕ್ ಆಗಲಿದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

      ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ಮುಕ್ತಾಯಗೊಂಡಿದೆ. ಏಪ್ರಿಲ್ 23ರಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. ಗುರುವಾರ ನರೇಂದ್ರ ಮೋದಿ ಚಿಕ್ಕೋಡಿ ಮತ್ತು ಬಾಗಲಕೋಟೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.

      ನರೇಂದ್ರ ಮೋದಿ ಟ್ವೀಟ್

      'ಕರ್ನಾಟಕದಲ್ಲಿ ನಡೆಯುವ ನನ್ನ ಸಮಾವೇಶಗಳಿಗೆ ಸೇರುತ್ತಿರುವ ಜನಸಾಗರವನ್ನು ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಭಯ ಉಂಟಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

      ಟ್ವಿಟರ್‌ನಲ್ಲಿ ಬೆಂಬಲ

      ಟ್ವಿಟರ್‌ನಲ್ಲಿ ಬೆಂಬಲ

      ನರೇಂದ್ರ ಮೋದಿ ಅವರ ಟ್ವೀಟ್‌ ಅನ್ನು 3.6ಕೆ ಜನರು ರಿಟ್ವೀಟ್ ಮಾಡಿದ್ದಾರೆ. 12 ಸಾವಿರ ಜನರು ಲೈಕ್ ಮಾಡಿದ್ದಾರೆ. 544 ಜನರು ಕಮೆಂಟ್ ಮಾಡಿದ್ದಾರೆ.

      ಎಲ್ಲೆಲ್ಲಿ ಸಮಾವೇಶ

      ಎಲ್ಲೆಲ್ಲಿ ಸಮಾವೇಶ

      ಧಾರವಾಡ, ಕಲಬುರಗಿ, ಮಂಗಳೂರು, ಬೆಂಗಳೂರು, ಮೈಸೂರು, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಿದ್ದಾರೆ.

      ಮಂಗಳೂರು ಸಮಾವೇಶ

      ಏಪ್ರಿಲ್ 13ರಂದು ಮಂಗಳೂರಿನಲ್ಲಿ ನರೇಂದ್ರ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಈ ಕುರಿತು ಅವರು ವಿಡಿಯೋವೊಂದನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+