ಮುಚ್ಚಿದ ಕಚೇರಿಗಳು, ಬಿಕೋ ಎನ್ನುತ್ತಿರುವ ವಿಧಾನಸೌಧ: ಇದು ನೌಕರರ ಮಷ್ಕರ ಪರಿಣಾಮ- ವಿಡಿಯೊ ನೋಡಿ
7ನೇ ವೇತನ ಆಯೋಗಕ್ಕೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಎಲ್ಲಾ ಕಚೇರಿಗಳು ಮುಚ್ಚಿವೆ. ವಿಧಾನಸೌಧದಲ್ಲಿ ರಾಜಕಾರಣಿಗಳು ಇಲ್ಲ, ನೌಕರರೂ ಇಲ್ಲ. ಕಾರಣ, ಅಧಿಕಾರ ಕೇಂದ್ರದಲ್ಲಿ ಗಾಢ ಖಾಲಿತನ ಆವರಿಸಿದೆ.
ಬೆಂಗಳೂರು, ಮಾರ್ಚ್ 01: 7ನೇ ವೇತನ ಆಯೋಗಕ್ಕೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಎಲ್ಲಾ ಕಚೇರಿಗಳು ಮುಚ್ಚಿವೆ. ವಿಧಾನಸೌಧದಲ್ಲಿ ರಾಜಕಾರಣಿಗಳು ಇಲ್ಲ, ನೌಕರರೂ ಇಲ್ಲ. ಕಾರಣ, ಅಧಿಕಾರ ಕೇಂದ್ರದಲ್ಲಿ ಗಾಢ ಖಾಲಿತನ ಆವರಿಸಿದೆ.
ಈ ಕುರಿತು ವಿಡಿಯೊ ಟ್ವೀಟ್ ಮಾಡಿರುವ ಪರ್ತಕರ್ತೆ ಅನುಷಾ ರವಿ ಸೂದ್, '7ನೇ ವೇತನ ಆಯೋಗಕ್ಕೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಕಚೇರಿಗಳಿಗೆ ಬೀಗ ಬಿದ್ದಿದೆ. ನಿನ್ನೆ ರಾತ್ರಿ ಸ್ಟಾಫ್ ಯೂನಿಯನ್ ಮತ್ತು ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿದೆ. ಸುಮಾರು 6 ಲಕ್ಷ ಸರ್ಕಾರಿ ನೌಕರರು ಮುಷ್ಕರದಲ್ಲಿದ್ದಾರೆ' ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒತ್ತಾಯ ಮಾಡಿದ್ದರು. ತಡರಾತ್ರಿ ನಡೆಸಿದ ಸಭೆಯು ನೌಕರರ ಮನವೊಲಿಸುವಲ್ಲಿ ವಿಫಲವಾದ ಕಾರಣ ಸರ್ಕಾರಿ ಕಚೇರಿಗಳ ಪ್ರತಿದಿನ ಕಾರ್ಯಾಚರಣೆಗಳು ಮತ್ತು ಸೇವೆಗಳು ಬುಧವಾರ ಅಸ್ತವ್ಯಸ್ತಗೊಂಡಿವೆ.
Offices in Vidhana Soudha remain locked up as government employees go on strike demanding 7th Pay commission. Talks between staff Union & govt failed last night. Some 6 lakh government employees on strike. pic.twitter.com/GX3Rdf6Hg9
— Anusha Ravi Sood (@anusharavi10) March 1, 2023
ಆರು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಪ್ರತಿನಿಧಿಸುವ ನೌಕರರ ಸಂಘವು 7ನೇ ವೇತನ ಆಯೋಗದ ಪ್ರಕಾರ ವೇತನ ಪರಿಷ್ಕರಣೆ ಮತ್ತು ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ಮಾಡಬೇಕೆಂದು ಒತ್ತಾಯಿಸುತ್ತಿದೆ.

ವೇತನ ಪರಿಷ್ಕರಣೆ ಕುರಿತು ಮಧ್ಯಂತರ ಪರಿಹಾರ ಘೋಷಿಸಲು ಕೇವಲ ಹತ್ತು ದಿನಗಳ ಕಾಲಾವಕಾಶ ಬೇಕು ಎಂದು ಬೊಮ್ಮಾಯಿ ಸಂಘದ ಪ್ರತಿನಿಧಿಗಳಿಗೆ ಭರವಸೆ ನೀಡಿದ್ದಾರೆ. ಎನ್‌ಪಿಎಸ್ ಕುರಿತು, ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸುವ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ. ಆದರೆ, ಸಂಘವು ತನ್ನ ಪ್ರತಿಭಟನೆಯ ಕರೆಯನ್ನು ಹಿಂಪಡೆದಿಲ್ಲ.
'ಸಿಎಂ ಹತ್ತು ದಿನಗಳಲ್ಲಿ ಮಧ್ಯಂತರ ಪರಿಹಾರ ನೀಡುವುದಾಗಿ ಸಿಎಂ ಹೇಳಿದರು. ಸರ್ಕಾರ ನಮ್ಮ ವಿರುದ್ಧ ಇಲ್ಲವೆಂದು ಅವರು ಮನವರಿಕೆ ಮಾಡಿಕೊಡಲು ಯತ್ನಿಸಿದರು. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ. ಆದರೆ ನಾವು ಅವುಗಳನ್ನು ಆಂತರಿಕವಾಗಿ ಚರ್ಚಿಸಬೇಕಾಗಿದೆ' ಎಂದು ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.

ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳೊಂದಿಗೆ ಎಂಟು ಸಭೆಗಳನ್ನು ನಡೆಸಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೆಲವು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳಲ್ಲಿ ವ್ಯತ್ಯವಾಗಿದೆ. ಮುಷ್ಕರವು ಎಲ್ಲಾ ಆರೋಗ್ಯ ಸೇವೆಗಳು, ಪರೀಕ್ಷೆಗಳು ಮತ್ತು ವಿದ್ಯುತ್ ನಿರ್ವಹಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
7ನೇ ವೇತನ ಆಯೋಗದ ವೇತನವನ್ನು ಜಾರಿಗೆ ತಂದರೆ ಮೊದಲ ವರ್ಷದಲ್ಲಿಯೇ ಬೊಕ್ಕಸಕ್ಕೆ 12,000 ರಿಂದ 17,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications