NWKRTC: ಸವದತ್ತಿ ಶ್ರೀ ಯಲ್ಲಮ್ಮ ಭಕ್ತರಿಗೆ ಸಿಹಿಸುದ್ದಿ! ಶೀಗಿ ಹುಣ್ಣಿಮೆ-ದೀಪಾವಳಿತನಕ; ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ
NWKRTC Special Bus: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಪ್ರಮುಖವಾದ ಹಾಗೂ ಪ್ರತಿ ಹುಣ್ಣಿಮೆಗೂ ಭಕ್ತರಿಂದ ತುಂಬಿ ತುಳುಕುವ ಶ್ರೀ ಕ್ಷೇತ್ರ ಬೆಳಗಾವಿ ಜಿಲ್ಲೆಯ ಸೌದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಭಾಗದಿಂದ ತೆರಳುವ ಭಕ್ತಾಧಿಗಳಿಗೆ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಈ ಮೂಲಕ ಸಿಹಿ ಸುದ್ದಿ ನೀಡಿದೆ.
ನಾಳೆ ಸೋಮವಾರ ಶೀಗಿ ಹುಣ್ಣಿಮೆಯನ್ನು ಉತ್ತರ ಕರ್ನಾಟಕದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವೇಳೆ ಮನೆ ದೇವರು, ಅದರಲ್ಲೂ ದೀಪಾವಳಿ ಮುನ್ನ ಬರುವ ಹುಣ್ಣಿಮೆಯು ವಿಶೇಷವಾಗಿರುವ ಕಾರಣಕ್ಕೆ ಭಕ್ತರು ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಾರೆ. ಹೀಗಾಗಿ NWKRTC ಸಂಸ್ಥೆಯು ಅಗತ್ಯತೆ ನೋಡಿಕೊಂಡು ದೀಪಾವಳಿ ಅಮವಾಸೆಯವರೆಗೆ ಮುಂದಿನ 15 ದಿನ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ರವಿವಾರ ವಿಶೇಷ ಬಸ್ ಗಳ ಹುಬ್ಬಳ್ಳಿ ಮತ್ತು ನವಲಗುಂದದಿಂದ ಯಲ್ಲಮ್ಮನ ನೇರ ಕಾರ್ಯಾಚರಣೆ ಮಾಡಲಿವೆ ಎಂದರು.

40 ಸಾವಿರಕ್ಕೂ ಅಧಿಕ ಜನ ಸಂಚಾರ
ಭಕ್ತಾದಿಗಳ ಮನವಿಯ ಮೇರೆಗೆ ಕಳೆದ ವರ್ಷ ಶೀಗಿ ಹುಣ್ಣಿಮೆಯಿಂದ ದೀಪಾವಳಿಯ ವರೆಗಿನ ಅವಧಿಯಲ್ಲಿ ಮಾಡಲಾಗಿದ್ದ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಶೇಷ ಬಸ್ಸುಗಳಲ್ಲಿ 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಯಾಣ ಮಾಡಿದ್ದಾರೆ.
ಹುಬ್ಬಳ್ಳಿ ಹಾಗೂ ನವಲಗುಂದದಿಂದ ನೇರವಾಗಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿಬರಲು ವಿಶೇಷ ಬಸ್ಸುಗಳಿಂದ ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾವಾಗಿದೆ. ಆದ್ದರಿಂದ ಈ ವರ್ಷವೂ ಸಹ ವಿಶೇಷ ಬಸ್ ಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು.
ಬಸ್ ಸಂಚಾರದ ದಿನಾಂಕಗಳು
ಅದರಂತೆ ಶೀಗಿ ಹುಣ್ಣಿಮೆಯಂದು ಸೋಮವಾರ ಹಾಗೂ ದೀಪಾವಳಿ ಅಮಾವಾಸ್ಯೆವರೆಗೆ ಅಕ್ಟೋಬರ್ 26, 27, 30, ನವೆಂಬರ್ 1,3,ಹಾಗೂ 6 ರಂದು ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ವಿಶೇಷ ಬಸ್ ಸಂಚಾರ ಮಾರ್ಗಗಳು
* ಹುಬ್ಬಳ್ಳಿ ಮತ್ತು ನವಲಗುಡ್ಡ-ಯಲ್ಲಮ್ಮನಗುಡ್ಡ ವಿಶೇಷ ಬಸ್ ಎರಡು ಕಡೆಯಿಂದ ಸಂಚಾರ.
* ಹುಬ್ಬಳ್ಳಿ-ಯಲ್ಲಮ್ಮನಗುಡ್ಡ ಬಸ್: ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ, ಅಮ್ಮಿನಭಾವಿ, ಸವದತ್ತಿ ಮಾರ್ಗವಾಗಿ ಸಂಚರಿಸುತ್ತವೆ.
* ನವಲಗುಂದ- ಯಲ್ಲಮ್ಮನಗುಡ್ಡ: ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರಗುಂಪಿ, ಅಳಗವಾಡಿ, ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.


Click it and Unblock the Notifications
