KSRTC UPI ವ್ಯವಸ್ಥೆಗೆ ಭಾರೀ ಸ್ಪಂದನೆ: ಹೆಚ್ಚಾಯ್ತು ಬಳಕೆದಾರರ ಸಂಖ್ಯೆ, ವಿವರ

ಬೆಂಗಳೂರು, ಡಿಸೆಂಬರ್ 02: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯು ಬಸ್‌ಗಳಲ್ಲಿ ಪರಿಚಯಿಸಿರುವ ಸ್ಮಾರ್ಟ್ ಇಟಿಎಂ ವ್ಯವಸ್ಥೆಗೆ ಪ್ರಯಾಣಿಕರಿಂದ ಭರಪೂರ ಸ್ಪಂದನೆ ವ್ಯಕ್ತವಾಗಿದೆ. ಇದರಿಂದಲೇ ನಿಗಮಕ್ಕೆ ಲಕ್ಷ ಲಕ್ಷ ಆದಾಯ ಸಂಗ್ರಹವಾಗುತ್ತಿದೆ. ಚಿಲ್ಲರೆ ಸಮಸ್ಯೆಗೆ ಮುಕ್ತ ಕೊಡುವ ಈ ಯುಪಿಐ ಆಧಾರಿತ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಗೆ ಜನ ಫಿದಾ ಆಗಿದ್ದಾರೆ. ಯುಪಿಐ ಬಳಕೆದಾರರು ಕ್ರಮೇಣ ಹೆಚ್ಚಾಗಿದ್ದಾರೆ.

ಆಪಲ್, ಆಂಡ್ರಾಯ್ಡ್‌ ಸ್ಮಾರ್ಟ್ ಫೋನ್‌ ಬಳಸಿ, ಯುಪಿಐ ಇಲ್ಲವೇ ಇನ್ನಿತರ ಹಣ ಪಾವತಿ ಆಪ್ ಮೂಲಕ ನೀವು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿರ್ವಾಹಕರು ತೋರಿಸುವ ಇಟಿಎಂ ಮಷಿನ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬೇಕು. ಹೀಗೆ ಪಾವತಿಸುವವರ ದೈನಂದಿನ ಪ್ರಯಾಣಿಕರ ಸಂಖ್ಯೆ 20,000 ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

Number of Users of UPI-Based Payment System in KSRTC Buses Increases

ಹೊಸ ವ್ಯವಸ್ಥೆಯಿಂದ ಬಂದ ವರಮಾನವೆಷ್ಟು?

ಹೌದು, ನಿತ್ಯ ಸಾಮಾನ್ಯ ಬಸ್‌ಗಳು ಒಳಗೊಂಡಂತೆ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಸಂಚರಿಸುವ ಸುಮಾರು 20 ಸಾವಿರ ಮಂದಿ ಯುಪಿಐ ಆಧಾರಿತ ವ್ಯವಸ್ಥೆ ಬಳಸುತ್ತಿದ್ದಾರೆ. ಇದರಿಂದಲೇ ಮಾಸಿಕ ಸರಾಸರಿ ಸುಮಾರು 30 ಲಕ್ಷ ರೂಪಾಯಿ ವರಮಾನ ಬರುತ್ತಿದೆ.

ಪ್ರೀಮಿಯಂ ನಂತಹ ಬಸ್‌ಗಳಲ್ಲಿ ಈವ್ಯವಸ್ಥೆ ಬಳಕೆ ಕೇವಲ 10ರಷ್ಟು ಮಾತ್ರ ಇಲ್ಲ. ಅಲ್ಲಿ ಮುಂಗಡ ಬುಕ್ಕಿಂಗ್ ಆನ್‌ಲೈನ್‌ ನಲ್ಲೆ ನಡೆದಿರುತ್ತದೆ. ಇದರ ಹೊರತಾಗಿ ಎಕ್ಸ್‌ಪ್ರೆಸ್ ಹಾಗೂ ಸಾಮಾನ್ಯ ಬಸ್‌ಗಳಲ್ಲಿ ದೈನಂದಿನ ಪ್ರಯಾಣಿಕರೇ ಈ ಯುಪಿಐ ಇಟಿಎಂ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಪ್ಪಿದ ಚಿಲ್ಲರೆಯ ತಲೆ ಬಿಸಿ

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಎಲ್‌ ಬಸ್‌ಗಳಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ಬಳಸಿ ಪಾವತಿ ವ್ಯವಸ್ಥೆಯು ಜನರಿಗೆ ಅನುಕೂಲವಾಗುವ ಜೊತೆಗೆ ಚಿಲ್ಲರೆ ಸಮಸ್ಯೆ, ತಲೆ ಬಿಸಿ, ಜಗಳ ತಪ್ಪುತ್ತಿದೆ. ಅಲ್ಲದೇ, ಟಿಕೆಟ್ ಪಾವತಿಗೆ ಪ್ರಯಾಣಿಕರಿಗೆ ಮತ್ತೊಂದು ಆಯ್ಕೆ ಸಿಕ್ಕಂತಾಗಿದೆ. ನಗದು ಹಣ ಇಲ್ಲದಿದ್ದರೂ ಕೈಲಿ ಮೊಬೈಲ್ ಫೋನ್ ಇದ್ದರೆ ಸಾಕು ಅದರಿಂದ ಹಣ ಪಾವತಿಸಿ ಎಲ್ಲಿ ಬೇಕಾದರೂ ಓಡಾಡಬಹುದಾಗಿದೆ.

ಬಳಕೆ ಆಗುತ್ತಿರುವ ಸ್ಮಾರ್ಟ್ ಇಟಿಎಂ ವಿವರ

ಸದ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ನಿರ್ವಾಹಕರ ಬಳಿ ಒಟ್ಟು 10,200ಕ್ಕೂ ಹೆಚ್ಚು ಇಟಿಎಂ ಮಷಿನ್‌ಗಳಿವೆ. ಅವುಗಳ ಜವಾಬ್ದಾರಿ ನಿರ್ವಾಹಕರ ಮೇಲಿದೆ. ನಿಗಮ ವ್ಯಾಪ್ತಿಯಲ್ಲಿ 8500ಕ್ಕೂ ಬಸ್‌ಗಳಿವೆ. ಹೊರ ರಾಜ್ಯಗಳ ಬಸ್‌ಗಳಲ್ಲಿ ಎರಡು ಇಟಿಎಂ ಬಸಲಾಗುತ್ತಿದೆ. ಇನ್ನೂ ಇಟಿಎಂ ದಿಢೀರ್ ಕೆಟ್ಟರೆ ಮತ್ತೊಂದು ಬಳಕೆಗೆ ಇರಲಿ, ಪ್ರಯಾಣದ ವೇಳೆ ತೊಂದರೆ ಆಗದಂತೆ ನೋಡಿಕೊಳ್ಳಲು 500 ಇಟಿಎಂಗಳು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ. ಅಗತ್ಯವಿದ್ದಾಗ ಅವುಗಳ ಬಳಕೆ ಆಗಲಿವೆ.

ಈ ಹೊಸ ವ್ಯವಸ್ಥೆಯನ್ನು ಕಳೆದ ನವೆಂಬರ್ 6ರಂದು ಕೆಲವೇ ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ನಂತರ ಒಂದು ವಾರದಲ್ಲಿ ಎಲ್ಲ ಬಸ್‌ಗಳಿಗೆ ನೀಡಲಾಯಿತು. ಅದಾದ ಬಳಿಕ ನವಂಬರ್ 18ರಿಂದ ಎಲ್ಲ ಬಸ್‌ಗಳಲ್ಲಿ ನಿರ್ವಾಹಕರು ಇಟಿಎಂ ಮಷಿನ್ ಬಳಕೆ ಆರಂಭಿಸಿದರು. ಇದರೊಂದಿಗೆ ಸಾಮಾನ್ಯವಾಗಿ ನಗದು ಸಹಿತ ವ್ಯವಸ್ಥೆಯು ಚಾಲ್ತಿಯಲ್ಲಿರುತ್ತದೆ ಎಂದು ನಿಗಮವು ತಿಳಿಸಿದೆ.

ಮುಂದಿನ ದಿನಗಳಲ್ಲಿ ಈ ಸ್ಮಾರ್ಟ್ ಟಿಕೆಟ್ ಹಣ ಪಾವತಿ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಪ್ರಯಾಣಿಕರು ಬಳಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+