ಸ್ವಾಮೀಜಿ ಭವಿಷ್ಯದಂತೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ? - ಮಾಜಿ ಸಿಎಂ ಹೇಳಿದ್ದೇನು?
ಹುಬ್ಬಳ್ಳಿ, ಡಿಸೆಂಬರ್ 09: ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಬಹುಮತ ಪಡೆದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆರು ತಿಂಗಳು ಪೂರೈಸಿದ್ದು, ಪದೇ ಪದೇ ಮುಖ್ಯಮಂತ್ರಿ ವಿಚಾರ ಚರ್ಚೆಯಲ್ಲಿರುತ್ತದೆ. ಇದೀಗ ಡಿ.ಕೆ. ಶಿವಕುಮಾರ ಸಿಎಂ ಆಗಬೇಕೆಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರೊತು ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೇಟರ್ ಮಾತನಾಡಿ, ನೊಣವಿನಕೇರೆ ಶ್ರೀಗಳು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ವಿಚಾರವನ್ನ ತಿಳಿದುಕೊಂಡಿದ್ದೇನೆ. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಅನಗತ್ಯವಾಗಿ ಈ ವಿಚಾರ ಪ್ರಸ್ತಾಪ ಸರಿಯಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು ಮಾಡಿದ ಟೀಕೆ ಅರಗಿಸಿಕೊಳ್ಳಲು ಆಗಲ್ಲಿಲ್ಲ ಅಂದರೆ ಅದು ಭಾರತೀಯ ಜನತಾ ಪಕ್ಷದವರ ಅಹಂಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗತಾ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ತಾರತಮ್ಯ ಸರಿಯಲ್ಲ ಎಂದು ಹೇಳಿದರು.
ಬರ ಪರಿಹಾರ ವಿಷಯದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ನೋಡಿದರೆ ಗೊತ್ತಾಗುತ್ತದೆ ರಾಜ್ಯದ ಸಮಸ್ಯೆಗಳಿಗೆ ಕೇಂದ್ರ ಸ್ಪಂದಿಸುತಿಲ್ಲ ಅಂತಾ. ಪ್ರಧಾನಿ ನರೇಂದ್ರ ಮೋದಿ ಅವರು ಅವರ ಸಚಿವ ಸಂಪುಟದ ಸದಸ್ಯರು ಅವಕಾಶ ಕೊಡುತಾ ಇಲ್ಲ. ಸಾಕಷ್ಟು ಸಲ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ, ಕೇಂದ್ರದಲ್ಲಿ ಒಂದೇ ಪಕ್ಷ ಇದ್ದ ಸರ್ಕಾರಕ್ಕೂ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬೇರೆ ಬೇರೆ ಪಕ್ಷ ಅಧಿಕಾರದಲ್ಲಿ ಇದ್ದ ರಾಜ್ಯಕ್ಕೋ ತಾರತಮ್ಯ ಆಗಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳತಾ ಇದ್ದಾರೆ.

ಬರ ಪರಿಹಾರ ಅನುದಾನ ಸೇರಿದಂತೆ ಯಾವುದೇ ಸಮಸ್ಯೆಗೆ ಕೇಂದ್ರ ಸಹಕಾರ ಕೊಡುತ್ತಾ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಸಲ ಭೇಟಿಗೆ ಅವಕಾಶ ಕೊಟ್ಟಿಲ್ಲ ಅವರ ಸಚಿವರು ಕೊಟ್ಟಿಲ್ಲ, ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅಧಿಕಾರಿಗಳನ್ನ ಭೇಟಿ ಮಾಡಲಾಗಿದೆ ಮನವಿ ಮಾಡಲಾಗಿದೆ ಎಂದು ಅಸಹಾಯಕತೆ ತೊಡಗಿಕೊಂಡರು ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಹರಿಪ್ರಸಾದ್ ಸಿಎಂ ಬಗ್ಗೆ ಅಸಮಧಾನ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿದ ಅವರು, ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡತಾರೆ ಈ ಕುರಿತು ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳತ್ತಾರೆ ನಾನು ಏನು ಹೇಳಲಾರೆ ಎಂದು ಹೇಳಿದರು.
ನಟಿ ಲೀಲಾವತಿ ನಿಧನಕ್ಕೆ ಸಂತಾಪ
ಖ್ಯಾತ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಅವರು ಲೀಲಾವತಿ ಅವರು, ಹಿರಿಯ ನಟಿಯಾಗಿದ್ದರು. ಪ್ರತಿಭಾವಂತ ನಟಿಯಾಗಿ ತಾಯಿ,ಮಗಳು ಹೀಗೆ ಹಲವಾರು ಪಾತ್ರ ಮಾಡಿದವರು ಡಾ.ರಾಜ್ ಕುಮಾರ್, ಡಾ.ವಿಷ್ಣು ವರ್ಧನ, ಅಂಬರೀಶ್ ರಂತೆ ಜನಪ್ರಿಯತೆ ಹೊಂದಿದ್ದರು ಕಾರಣ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ಲೀಲಾವತಿ ಅವರು ಕರ್ನಾಟಕ ನಾಡಿಗೆ ಚಿರಪರಿಚಿತರು ಆಗಿದ್ದವರು, ಪ್ರಮುಖ ನಟರ ಜೊತೆಗೆ ನಟನೆ ಮಾಡಿದವರು ಎಂದು ಹೇಳಿದರು.












Click it and Unblock the Notifications