ಗೃಹ ಮಂಡಳಿ ಮನೆ ಪಡೆಯಲು ಇದ್ದ ನಿಯಮಾವಳಿ ಸಡಿಲಿಕೆ
ಬೆಂಗಳೂರು, ಜೂನ್ 12 : ಕರ್ನಾಟಕ ಸರ್ಕಾರ ಗೃಹ ಮಂಡಳಿ ಮನೆಗಳನ್ನು ಪಡೆಯಲು ಇದ್ದ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ. 50 ಸಾವಿರ ರೂ. ಠೇವಣಿ ಹಣವನ್ನು ಇಟ್ಟು ಜನರು ಮನೆಗಳನ್ನು ಖರೀದಿ ಮಾಡಬಹುದಾಗಿದೆ.
ವಸತಿ ಸಚಿವ ಯು.ಟಿ.ಖಾದರ್ ಮಂಗಳವಾರ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಸಚಿವರು, 'ಗೃಹ ಮಂಡಳಿ ಫ್ಲಾಟ್‌ಗಳನ್ನು ಜನರು ಖರೀದಿ ಮಾಡುವುದಿಲ್ಲ ಎಂಬ ಅಪವಾದವಿದೆ. ಇದನ್ನು ತೊಡೆದು ಹಾಕಲು ನಿಯಮಾವಳಿಗಳನ್ನು ಸಡಿಲಿಸಲಾಗಿದೆ' ಎಂದರು.
'5 ವರ್ಷ ಬೆಂಗಳೂರಿನಲ್ಲಿ ವಾಸವಾಗಿರಬೇಕು. 90 ಸಾವಿರ ಠೇವಣಿ ಇಡಬೇಕು. ಆದಾಯ ತೆರಿಗೆ ಮಿತಿಗೆ ಒಳಪಟ್ಟಿರಬೇಕು ಮುಂತಾದ ನಿಯಮಾವಳಿಗಳನ್ನು ಸಡಿಲಿಸಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು.

'50 ಸಾವಿರ ರೂ. ಠೇವಣಿ ಇಟ್ಟು ಸ್ಥಳದಲ್ಲಿಯೇ ಗೃಹ ಮಂಡಳಿಯ ಮನೆಗಳನ್ನು ಪಡೆಯಬಹುದಾಗಿದೆ. ಸುಲಭವಾಗಿ ಜನರಿಗೆ ಮನೆಗಳು ಸಿಗುವಂತಾಗಲು ಹಲವು ಬದಲಾವಣೆ ಮಾಡಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು.
'ಗೃಹ ಮಂಡಳಿಯ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗುತ್ತದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ' ಎಂದು ಸಚಿವರು ಹೇಳಿದರು.












Click it and Unblock the Notifications