ಕಾಂಗ್ರೆಸ್ ನದು ಈಗ 'ಹುಸಿ ಹಿಂದುತ್ವ': ಪ್ರಕಾಶ್ ಜಾವಡೇಕರ್ ವ್ಯಂಗ್ಯ

Subscribe to Oneindia Kannada

ಬೆಂಗಳೂರು, ಫೆಬ್ರವರಿ 12: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ದೇವಾಲಯಗಳಿಗೆ ನಿರಂತರ ಭೇಟಿ ನೀಡುತ್ತಿರುವುದನ್ನು ಬಿಜೆಪಿ ಟೀಕಿಸಿದೆ. "ಕಾಂಗ್ರೆಸಿನವರು ಈ ಹಿಂದೆ ಹುಸಿ ಜಾತ್ಯಾತೀತವಾದಿಗಳಾಗಿದ್ದರು. ಈಗ ಹುಸಿ ಹಿಂದುತ್ವವಾದಿಗಳಾಗಿದ್ದಾರೆ," ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಅವರು (ಕಾಂಗ್ರೆಸ್) ಈಗ ದೇವಸ್ಥಾನದ ಅಮಲಿನಲ್ಲಿದ್ದಾರೆ. ಅವರ ಜಾಹೀರಾತುಗಳೂ ಈಗ ಕೇಸರಿ ಬಣ್ಣದಲ್ಲಿ ಬರುತ್ತಿವೆ. ಈ ಹಿಂದೆ ಅವರು ಹುಸಿ ಜಾತ್ಯಾತೀತವಾದಿಗಳಾಗಿದ್ದರು. ಈಗ ಹುಸಿ ಹಿಂದುತ್ವವಾದಿಗಳಾಗಿದ್ದಾರೆ. ಜನರು ಯಾವುದು ಚುನಾವಣೆಯ ಗಿಮಿಕ್ ಯಾವುದು ನಿಜವಾದ ಭಕ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

"ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಕಾರಣ ಅವರು ಎಲ್ಲೆಲ್ಲಿ ಪ್ರಚಾರಕ್ಕೆ ಹೋಗುತ್ತಾರೋ ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆ ಮತ್ತು ಬಿಜೆಪಿ ಗೆದ್ದಿದೆ," ಎಂದು ಜಾವಡೇಕರ್ ವಿವರಿಸಿದ್ದಾರೆ.

Now Congress leaders are pseudo-Hinduism: Prakash Javadekar

ದೇವಾಲಯ ಭೇಟಿ ಮುಂದುವರಿಸುತ್ತೇನೆ
ಬಿಜೆಪಿಯ ಟೀಕೆಯನ್ನು ಮೊದಲೇ ನಿರೀಕ್ಷಿಸಿದ್ದ ರಾಹುಲ್ ಗಾಂಧಿ ತಮ್ಮ ದೇವಾಲಯ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತು ತಾವು ಮುಂದೆಯೂ ದೇವಾಲಯ ಭೇಟಿ ಮುಂದುವರಿಸುವುದಾಗಿ ಹೇಳಿದ್ದಾರೆ.

"ನಾನು ದೇವಾಲಯಗಳಿಗೆ ಹೋಗುವುದನ್ನು ಇಷ್ಟಪಡುತ್ತೇನೆ. ಎಲ್ಲೆಲ್ಲಿ ನಾನು ಧಾರ್ಮಿಕ ಕ್ಷೇತ್ರಗಳನ್ನು ನೋಡುತ್ತೇನೆಯೋ ಅಲ್ಲಿಗೆಲ್ಲಾ ನಾನು ಹೋಗುತ್ತೇನೆ. ನನಗೆ ಇದರಿಂದ ಖುಷಿಯಾಗುತ್ತದೆ ಮತ್ತು ನಾನು ಇದನ್ನು ಮುಂದುವರಿಸುತ್ತೇನೆ," ಎಂದು ರಾಹುಲ್ ಗಾಂಧಿ ಮಾಧ್ಯಮ ಪ್ರತಿನಿಧಿಗಳಿಗ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Earlier they (Congress) were pseudo-secularists, now they are pseudo-Hinduism. People understand which is election gimmick and which is true devotion," said Union Minister Prakash Javadekar on Rahul Gandhi visit to temples in Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ