ಕರ್ನಾಟಕ, ಬೆಂಗಳೂರಿನ ಬಗ್ಗೆ ಕೀಳಾಗಿ ಮಾತನಾಡಿದ ಉತ್ತರ ಭಾರತೀಯ; ವ್ಯಾಪಕ ಆಕ್ರೋಶ

ಕರ್ನಾಟಕ, ಕನ್ನಡಿಗರು ಅಂದರೆ ಕೆಲವು ಉತ್ತರ ಭಾರತೀಯರಿಗೆ ಅದೆಷ್ಟು ಉರಿಯುತ್ತದೋ ಗೊತ್ತಿಲ್ಲ, ಹಲವು ಬಾರಿ ಕರ್ನಾಟಕ ಮತ್ತು ಕನ್ನಡಿಗರನ್ನು ಅವಮಾನಿಸುತ್ತಲೇ ಇರುತ್ತಾರೆ. ಆಕ್ರೋಶ ವ್ಯಕ್ತವಾದ ಬಳಿಕ ತಮ್ಮ ಪೋಸ್ಟ್ ಡಿಲೀಟ್ ಮಾಡುವುದು, ಇಲ್ಲವೇ ಕ್ಷಮೆ ಕೇಳುವುದು ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಉತ್ತರ ಭಾರತೀಯನೊಬ್ಬ ಡಿ ಮಾರ್ಟ್‌ನಲ್ಲಿ ನಾಯಿಗಳು, ಕನ್ನಡಿಗರಿಗೆ ಪ್ರವೇಶವಿಲ್ಲ ಎನ್ನುವ ಬೋರ್ಡ್ ಇದೆ ಎಂದು ತಿರುಚಿದ ಫೋಟೊ ಹಂಚಿಕೊಂಡಿದ್ದ. ಜನ ಕ್ಯಾಕರಿಸಿ ಉಗಿದ ನಂತರ ಕ್ಷಮೆ ಕೇಳಿದ್ದ. ಈಗ ಮತ್ತೊಬ್ಬ ಅವಿವೇಕಿ ಇಂತಹದ್ದೇ ಕೆಲಸ ಮಾಡಿದ್ದು, ಕನ್ನಡಿಗರ ಸಿಟ್ಟಿಗೆ ಗುರಿಯಾಗಿದ್ದಾನೆ.

ದೇವ್ ಜೆ ಶರ್ಮಾ ಎನ್ನುವಾತನೇ ಕರ್ನಾಟಕದ ಬಗ್ಗೆ ಕೀಳಾಗಿ ಮಾತನಾಡಿದ್ದು ಆತನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯವನ್ನು ಅವಮಾನಿಸುವ ವಿಡಿಯೋವನ್ನು ಆತ ಅಪ್‌ಲೋಡ್ ಮಾಡಿದ್ದಾನೆ. ಕನ್ನಡಿಗರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದಾರೆ.

North Indian insult Karnataka and Bengaluru in video

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಭಾರತದ ಭೂಪಟ ಎದುರು ನಿಂತ ಓರ್ವ ವ್ಯಕ್ತಿ ಮತ್ತೊಬ್ಬನಿಗೆ ರಾಜಸ್ಥಾನ ಎಲ್ಲಿದೆ, ಮಹಾರಾಷ್ಟ್ರ ಎಲ್ಲಿದೆ ಎಂದು ಕೇಳಿದಾಗ ಹೃದಯಲ್ಲಿದೆ ಎನ್ನುತ್ತಾನೆ. ಕರ್ನಾಟಕ ಎಲ್ಲಿದೆ ಎಂದು ಕೇಳಿದಾಗ ಸೊಂಟದ ಕೆಳಗಿನ ಭಾಗ ತೋರಿಸಿ ಇಲ್ಲಿದೆ ಎಂದು ಹೇಳಿದ್ದಾನೆ. ಕನ್ನಡಿಗರು ತಮ್ಮ ಹಕ್ಕುಗಳಿಗೆ, ಕನ್ನಡದ ಬಗ್ಗೆ ಧ್ವನಿ ಎತ್ತಿದಾಗ ಭಾರತೀಯತೆ ಬಗ್ಗೆ ಭಾಷಣ ಬಿಗಿಯುವ ಉತ್ತರ ಭಾರತೀಯರು, ಭಾರತದ ದೇಶದ ರಾಜ್ಯವೊಂದಕ್ಕೆ ಕೊಡುವ ಗೌರವ ಇದು ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಮಗೆ ಅವಕಾಶ ಕೊಡಿ ಎಂದ ಕನ್ನಡಿಗರು

ಈ ವಿಡಿಯೋವನ್ನು ಹಂಚಿಕೊಂಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. "ಈ ದುರಹಂಕಾರಿಗಳನ್ನು ಏನು ಮಾಡಬೇಕು ಹೇಳಿ, ಕರ್ನಾಟಕ, ಬೆಂಗಳೂರು, ಕನ್ನಡಿಗರನ್ನು ಹೀನಾಯವಾಗಿ ನಿಂದಿಸೋದೆ ಕೆಲಸ ಮಾಡಿಕೊಂಡಿದ್ದಾರೆ. ಬೆಂಗಳೂರು ಪೊಲೀಸರೇ ಈ ಕೂಡಲೇ ಇವನನ್ನು ಹುಡುಕಿ ತಂದು ಕರ್ನಾಟಕ ಪೊಲೀಸರ ಶಕ್ತಿ ಏನೆಂದು ತೋರಿಸಿ, ಇಲ್ಲ ನಮಗೆ ಅವಕಾಶ ಕೊಡಿ, ಕನ್ನಡಿಗರ ಮುಂದೆ ಈ ಮಂಡಿಯೂರುವಂತೆ ಮಾಡುತ್ತೇವೆ" ಎಂದು ಹೇಳಿದ್ದಾರೆ.

ಇದಕ್ಕೆ ಬೆಂಗಳೂರು ನಗರ ಪೊಲೀಸರು ಅಧಿಕೃತ ಎಕ್ಸ್ ಖಾತೆಯಿಂದ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರನ್ನು ಪರಿಗಣಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+