'ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ'
ಬೆಂಗಳೂರು, ಅಕ್ಟೋಬರ್ 30 : ಗೋಮಾಂಸದ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ. ಇದನ್ನು ತಡೆಯಲು ನೀವು ಯಾರು?' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಗುರುವಾರ ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ನಾನು ಇದುವರೆಗೆ ಗೋಮಾಂಸ ತಿಂದಿಲ್ಲ. ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ. ಇದನ್ನು ತಡೆಯಲು ನೀವು ಯಾರು?' ಎಂದು ಕೇಳಿದರು. [ನನ್ನ ಜೈನ ಗೆಳೆಯರು ಗೋಮಾಂಸ ಮಾರುತ್ತಾರೆ: ಮೋದಿ]

'ಕರ್ನಾಟಕ ಗೋಹತ್ಯೆ ನಿಷೇಧ ಮಸೂದೆ ಕುರಿತ ಚರ್ಚೆ ಸಂದರ್ಭದಲ್ಲೂ ನಾನು ಇದೇ ಮಾತನ್ನು ಹೇಳಿದ್ದೆ ಎಂದು ನೆನಪಿಸಿದ ಸಿದ್ದರಾಮಯ್ಯ ಅವರು, ಆಹಾರದ ಹಕ್ಕನ್ನು ಯಾರೊಬ್ಬರೂ ಕಸಿಯಲು ಸಾಧ್ಯವಿಲ್ಲ' ಎಂದರು. [ಜಮ್ಮು ಮತ್ತು ಕಾಶ್ಮೀರದಲ್ಲಿ ದನದ ಮಾಂಸ ಮಾರಾಟ ಬ್ಯಾನ್!]
ಮಂಗಳವಾ ಕ್ಷೌರ ಮಾಡಿಕೊಳ್ಳುತ್ತೇನೆ : 'ಕೆಲವು ಸಾಂಪ್ರದಾಯವಾದಿಗಳ ಪ್ರಕಾರ ಮಂಗಳವಾರ ಕ್ಷೌರ ಮಾಡಿಸಬಾರದು. ಆದರೆ, ನನಗೆ ವಾರದಲ್ಲಿ ಮಂಗಳವಾರ ಬಿಡುವಾಗುವುದು ಅಂದೇ ನಾನು ಕ್ಷೌರ ಮಾಡಿಕೊಳ್ಳುತ್ತೇನೆ' ಎಂದು ಸಿದ್ದರಾಮಯ್ಯ ಹೇಳಿದರು. [ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]
ಚುನಾವಣಾ ಫಲಿತಾಂಶದ ಬಳಿಕ ತಿಳಿಯಲಿದೆ : 'ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮೀಸಲಾತಿಯ ವಿರೋಧಿಯಾಗಿದ್ದಾರೆ. ಮೀಸಲಾತಿ ತೆಗೆದು ಹಾಕುವುದು ಅವರ ಗುರಿಯಾಗಿದೆ. ಇದರ ಪರಿಣಾಮ ಬಿಜೆಪಿಯವರಿಗೆ ಬಿಹಾರ ಚುನಾವಣಾ ಫಲಿತಾಂಶದಲ್ಲಿ ತಿಳಿಯಲಿದೆ' ಎಂದರು.












Click it and Unblock the Notifications