ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರು

|
Google Oneindia Kannada News

ಬೆಂಗಳೂರು, ಮೇ 22: ವೈಟ್ ಫಂಗಸ್ ಪ್ರಕರಣ ಇದುವರೆಗೂ ಕರ್ನಾಟಕದಲ್ಲಿ ಪತ್ತೆಯಾಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರ ಮಧ್ಯೆ, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ವೈಟ್ ಫಂಗಸ್ (ಬಿಳಿ ಶಿಲೀಂಧ್ರಕ) ಪತ್ತೆಯಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಬಿಳಿ ಶಿಲೀಂಧ್ರ ವರದಿಯಾಗಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ಸೋಂಕು ತಡೆಗೆ ಇಲ್ಲಿದೆ ದಂತವೈದ್ಯರ ಸರಳ ಸಲಹೆ ಬ್ಲ್ಯಾಕ್‌ ಫಂಗಸ್‌ ಸೋಂಕು ತಡೆಗೆ ಇಲ್ಲಿದೆ ದಂತವೈದ್ಯರ ಸರಳ ಸಲಹೆ

ರೋಗನಿರೋಧಕ ಶಕ್ತಿ, ಕ್ಯಾನ್ಸರ್ ಮತ್ತು ಅಂಗಾಂಗ ಕಸಿಗೆ ಒಳಗಾದ ರೋಗಿಗಳಲ್ಲಿ ನಾವು ಅವುಗಳನ್ನು ನೋಡುತ್ತಿದ್ದರೂ, ಸ್ಟೀರಾಯ್ಡ್ ಗಳ ವ್ಯಾಪಕ ಬಳಕೆಯಿಂದಾಗಿ ಕೋವಿಡ್ ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಈ ಸೋಂಕುಗಳ ಹಠಾತ್ ಏರಿಕೆ ಕಂಡುಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

No White Fungus Cases In Karnataka: Doctors

ನೈರ್ಮಲ್ಯ ಸೇರಿದಂತೆ ಇತರ ಅಂಶಗಳು ಸಹ ಫಂಗಸ್ ಗೆ ಕಾರಣವಾಗಬಹುದು. ಈ ಸೋಂಕುಗಳಿಗೆ ಸಾಮಾನ್ಯವಾಗಿ ಚಿಕಿತ್ಸೆ ನೀಡುವುದು ಕಷ್ಟ. 'ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ' ಎಂಬ ಗಾದೆ ಮಾತಿನಂತೆ ಸಾಧ್ಯವಾದಷ್ಟು ಬ್ಲ್ಯಾಕ್ ಫಂಗಸ್ ಬರದಂತೆ ನೋಡಿಕೊಳ್ಳುವುದೇ ಇದಕ್ಕೆ ಪರಿಹಾರವಾಗಿದೆ ಎನ್ನುತ್ತಾರೆ ಮಣಿಪಾಲ ವಿಶ್ವವಿದ್ಯಾಲಯದ ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಶಶಿಕಿರಣ ಉಮಾಕಾಂತ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ಉಲ್ಭಣವಾಗಿ ಐಸಿಯುನಲ್ಲಿ ದಾಖಲಾಗಿ ಬಿಡುಗಡೆ ಹೊಂದಿ ಬಂದವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಉಂಟಾಗುತ್ತಿದೆ. ಮ್ಯುಕೊರ್ಮಿಕೊಸಿಸ್ ನ್ನು ಬ್ಲ್ಯಾಕ್ ಫಂಗಸ್ ಎಂದು ಕರೆಯಲಾಗುತ್ತಿದ್ದು ಇತರ ಶಿಲೀಂಧ್ರಗಳ ಸೋಂಕುಗಳು, ಉದಾಹರಣೆಗೆ, ಬಾಹ್ಯ ಮತ್ತು ಆಕ್ರಮಣಕಾರಿ ಕ್ಯಾಂಡಿಡಿಯಾಸಿಸ್, ಆಕ್ರಮಣಕಾರಿ ಆಸ್ಪರ್ಜಿಲೊಸಿಸ್, ಇತ್ಯಾದಿಗಳನ್ನು ಈಗ 'ಬಿಳಿ ಶಿಲೀಂಧ್ರ' ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

Recommended Video

ಕೊರೊನಾ ಸೋಂಕನ್ನು ನಾಯಿಗಳಿಂದ ಪತ್ತೆಮಾಡಬಹುದು!! | Oneindia Kannada

English summary
While black fungus has been elevated to epidemic status, a new kind of fungal infection -- termed as ‘white fungus’ has been reported in Patna, Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X