ಆಗಸ್ಟ್‌ 2ಕ್ಕೆ ಉತ್ತರ ಕರ್ನಾಟಕ ಬಂದ್ ಇಲ್ಲ, ಪ್ರತಿಭಟನೆ ಮಾತ್ರ

Recommended Video

      ಆಗಸ್ಟ್ 2, ಇಂದು ಉತ್ತರ ಕರ್ನಾಟಕ ಬಂದ್ ರದ್ದು | Oneindia Kannada

      ಬೆಳಗಾವಿ, ಆಗಸ್ಟ್‌ 01: ಅಭಿವೃದ್ಧಿಯಿಂದ ವಂಚಿತವಾಗಿರುವ ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಬೇಕು ಎಂದು ಒತ್ತಾಯಿಸಿ ಕೆಲವು ಸಂಘಟನೆಗಳು ಆಗಸ್ಟ್‌ 2ಕ್ಕೆ ಮಾಡಲಿಚ್ಛಿಸಿದ್ದ ಉತ್ತರ ಕರ್ನಾಟಕ ಬಂದ್ ರದ್ದಾಗಿದೆ. ಬದಲಿಗೆ ಪ್ರತಿಭಟನೆಯನ್ನಷ್ಟೆ ಮಾಡಲಾಗುತ್ತಿದೆ.

      ಸರ್ಕಾರಗಳಿಂದ ನಿರ್ಲಕ್ಷಕ್ಕೆ ಒಳಗಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಬೇಕು ಎಂದು ಒತ್ತಾಯಿಸಿ ಕೆಲವು ಸಂಘಟನೆಗಳು ಮತ್ತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯು ಉತ್ತರ ಕರ್ನಾಟಕ 13 ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿತ್ತು. ಆದರೆ ಈಗ ಅದು ರದ್ದಾಗಿದೆ.

      ಆದರೆ 13 ಜಿಲ್ಲೆಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲಾಗುತ್ತಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಲಿದ್ದಾರೆ.

      ಮುಖಂಡರ ಮಾತಿಗೆ ಗೌರವ

      ಮುಖಂಡರ ಮಾತಿಗೆ ಗೌರವ

      ನಾಳೆಯ ಬಂದ್ ಕರೆಯನ್ನು ಪ್ರತಿಭಟನೆಗೆ ಸೀಮಿತಗೊಳಿಸುವ ಮೂಲಕ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಹಿನ್ನಡೆ ಆದಂತಾಗಿದ್ದು. ಹಲವು ಪ್ರಮುಖ ರಾಜಕಾರಣಿಗಳು, ಮುಖಂಡರು ಮತ್ತು ಸ್ವಾಮೀಜಿಗಳ ಶ್ರಮ ಫಲ ನೀಡಿದಂತಾಗಿದೆ.

      ಪ್ರತ್ಯೇಕ ರಾಜ್ಯ ಒತ್ತಾಯವಲ್ಲ

      ಪ್ರತ್ಯೇಕ ರಾಜ್ಯ ಒತ್ತಾಯವಲ್ಲ

      ನಾಳೆಯ ಪ್ರತಿಭಟನೆಯು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಅಲ್ಲವೆಂಬುದನ್ನು ಹಲವು ಸಂಘಟನೆಗಳು ಸ್ಪಷ್ಟಪಡಿಸಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರತಿಭಟನೆ ಇದಾಗಿರಲಿದೆ ಎಂದು ಸ್ಪಷ್ಟಪಡಿಸಿವೆ.

      ಮುಖಂಡರ ಮಾತಿಗೆ ಗೌರವ

      ಮುಖಂಡರ ಮಾತಿಗೆ ಗೌರವ

      ನಾಳೆಯ ಬಂದ್ ಕರೆಯನ್ನು ಪ್ರತಿಭಟನೆಗೆ ಸೀಮಿತಗೊಳಿಸುವ ಮೂಲಕ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಹಿನ್ನಡೆ ಆದಂತಾಗಿದ್ದು. ಹಲವು ಪ್ರಮುಖ ರಾಜಕಾರಣಿಗಳು, ಮುಖಂಡರು ಮತ್ತು ಸ್ವಾಮೀಜಿಗಳ ಶ್ರಮ ಫಲ ನೀಡಿದಂತಾಗಿದೆ.

      ರಾಜಕಾರಣಿಗಳಿಂದ ತೀವ್ರ ವಿರೋಧ

      ರಾಜಕಾರಣಿಗಳಿಂದ ತೀವ್ರ ವಿರೋಧ

      ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡ ಸೇರಿದಂತೆ ಹಲವರು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇವರಿಗೆ ಹಲವು ಸ್ವಾಮೀಜಿಗಳು, ಚಿತ್ರನಟರು, ಸಾಹಿತಿಗಳು ಧನಿ ಗೂಡಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+