• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ರೈವಿಂಗ್ ಲೈಸೆನ್ಸ್‌ಗೆ ವಿದ್ಯಾರ್ಹತೆ ಬೇಕಿಲ್ಲ: ಹೊಸ ನಿಯಮ

|

ನವದೆಹಲಿ, ಆಗಸ್ಟ್ 31: ಹೊಸ ಮೊಟಾರು ವಾಹನ ಕಾಯ್ದೆಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದ್ದು, ಹೊಸ ಕಾಯ್ದೆಯ ಅನ್ವಯ ಚಾಲನಾ ಪರವಾನಗಿ ಪಡೆಯಲು ಕನಿಷ್ಟ ವಿದ್ಯಾರ್ಹತೆ ಕಡ್ಡಾಯವಲ್ಲ.

ಈ ಹಿಂದೆ ಇದ್ದ ಕಾಯ್ದೆಯ ಪ್ರಕಾರ ಚಾಲನಾ ಪರವಾನಗಿ ಪಡೆಯಲು ಎಂಟನೇ ತರಗತಿ ವರೆಗೆ ಓದುವುದು ಕಡ್ಡಾಯವಾಗಿತ್ತು. ಆದರೆ ಹೊಸ ಕಾಯ್ದೆಯ ಪ್ರಕಾರ ಯಾವುದೇ ಶಿಕ್ಷಣ ಪಡೆಯದಿದ್ದವರೂ ಸಹ ಚಾಲನಾ ಪರವಾನಗಿ ಪಡೆಯಬಹುದಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?

ಚಾಲನೆಗೆ ಕೌಶಲ್ಯವೊಂದನ್ನೆ ಮಾನದಂಡ ಮಾಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ಕೌಶಲ್ಯ ಹೊಂದಿರುವ ಅಶಿಕ್ಷಿತ ವ್ಯಕ್ತಿಗಳೂ ಚಾಲನಾ ಪರವಾನಗಿ ಪಡೆಯಲೆಂಬ ಉದ್ದೇಶದಿಂದಾಗಿ ಕನಿಷ್ಟ ವಿದ್ಯಾರ್ಹತೆ ನಿಯವನ್ನು ತೆಗೆದು ಹಾಕಿದೆ.

ಕನಿಷ್ಟ ವಿದ್ಯಾರ್ಹತೆಯನ್ನು ತೆಗೆದು ಹಾಕಿರುವುದರಿಂದ ಹೆಚ್ಚು ಜನರಿಗೆ ಚಾಲನಾ ಪರವಾನಗಿ ದೊರೆಯಲಿದ್ದು, ಆ ಮೂಲಕ ಅಶಿಕ್ಷಿತರಿಗೆ, ಆರ್ಥಿಕವಾಗಿ ಕೆಳ ಹಂತದ ಹೆಚ್ಚಿನ ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಆರ್'ಟಿಓ ಅಧಿಕಾರಿಗೆ ಚಪ್ಪಲಿ ತೋರಿಸಿದ ಶಿವಮೊಗ್ಗ ಪಾಲಿಕೆ ಸದಸ್ಯನ ವಿರುದ್ಧ ದೂರು

ದೇಶದಾದ್ಯಂತ ಸಾರಿಗೆ ವಲಯದಲ್ಲಿ 22 ಲಕ್ಷ ಡ್ರೈವರ್‌ಗಳ ಕೊರತೆಯಿದೆ, ಈ ಕೊರತೆ ನೀಗಿಸಲು ಹೊಸ ನಿಯಮ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಚಾಮರಾಜನಗರ ಆರ್ ಟಿಓ ಕಚೇರಿ ಮೇಲೆ ಎಸಿಬಿ ದಾಳಿ:1.12 ಲಕ್ಷ ರೂ.ವಶ

ಸೆಪ್ಟೆಂಬರ್ 1 ರಿಂದ ಹೊಸ ಮೋಟಾರು ಕಾಯ್ದೆ ದೇಶದೆಲ್ಲೆಡೆ ಜಾರಿಯಾಗುತ್ತಿತ್ತು. ಸಂಚಾರಿ ನಿಯಮ ಉಲ್ಲಂಘಟನೆಗೆ ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ. ಅದೂ ಸಹ ನಾಳೆಯಿಂದಲೇ ಜಾರಿಗೆ ಬರಲಿದೆ.

English summary
No need of minimum education for driving license as per new Motor vehicle act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X