ಬೆಳಗಾವಿ ಜಾನುವಾರು ಆಸ್ಪತ್ರೆ ನಿರ್ಮಾಣ ಯಾವಾಗ?

Posted By:
Subscribe to Oneindia Kannada

ಬೆಳಗಾವಿ, ಫೆಬ್ರವರಿ 7: ಹೈನುಗಾರರಿಗೆ ಹಾಗೂ ಸಾಕಪ್ರಾಣಿಗಳಿಗೆ ನೆರವಾಗುವ ಮಹದೋದ್ದೇಶದೊಂದಿಗೆ ನಿರ್ಮಿಸಲುದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿಗೆ ಅನುದಾನ ಸರಿಯಾಗಿ ದೊರಯದಿದ್ದ ಹಿನ್ನೆಲೆಯಲ್ಲಿ ಇಡೀ ಯೋಜನೆ ನೆನೆಗುದಿಗೆ ಬಿದ್ದಿರುವುದು ಇಲ್ಲಿನ ಜನತೆಗೆ ಬೇಸರ ತರಿಸಿದೆ.

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಮಹತ್ವದ ಯೋಜನೆ ಇದಾಗಿದ್ದು, ವಿವಿಧ ರೋಗ ರುಜಿನೆಗಳಿಂದ ನರಳುತ್ತಿರುವ ಹಾಗೂ ಅಪಘಾತಕ್ಕೀಡಾದ ಪ್ರಾಣಿಗಳಿಗೆ ಉತ್ತಮ ದರ್ಜೆಯ ಚಿಕಿತ್ಸೆ ನೀಡುವ ಸಲುವಾಗಿಯೇ ಬೆಳಗಾವಿಯಲ್ಲೊಂದು ಸುಸಜ್ಜಿತ ಆಸ್ಪತ್ರೆಯೊಂದನ್ನು ಕಟ್ಟುವ ಯೋಜನೆ ಹಮ್ಮಿಕೊಳ್ಳಲಾಗಿತ್ತು.

No funds stalled Multi specialty hospital for animals in Belagavi.

ಕೇವಲ ಬೆಳಗಾವಿ ಜಿಲ್ಲೆಗೆ ಮಾತ್ರವಲ್ಲದೆ ಈ ಪ್ರಾಂತ್ಯದ ಸುಮಾರು ಏಳು ಜಿಲ್ಲೆಗಳಿಗೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಕೆಲವು ವಿಶೇಷ ಪ್ರಕರಣಗಳಿಗೂ ಇಲ್ಲಿ ಚಿಕಿತ್ಸೆ ನೀಡುವ ಮಹದೋದ್ದೇಶದೊಂದಿಗೆ ಮೂರು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಾಗಿತ್ತು.

ಆಸ್ಪತ್ರೆ ನಿರ್ಮಾಣಕ್ಕಾಗಿ ಪಶು ಸಂಗೋಪನಾ ಇಲಾಖೆಗೆ ಸೇರಿದ ಒಂದು ಎಕರೆ ಜಾಗ ಗುರುತಿಸಿ, 2015-16ರಲ್ಲೇ ಈ ಆತ್ಪತ್ರೆಗೆ ₹ 3.60 ಕೋಟಿ ಅನುದಾನ ನೀಡಲಾಗಿತ್ತು.

ಇಷ್ಟೆಲ್ಲಾ ಆದರೂ, ಅನುದಾನ ಮಂಜೂರಾಗಿದ್ದರೂ ಕಾಮಗಾರಿಗೆ ಹಣ ಹರಿದುಬರದೇ ಇಡೀ ಯೋಜನೆ ನೆನೆಗುದಿಗೆ ಬಿದ್ದಿದೆ. ಹಾಗಾಗಿ, ಈ ಯೋಜನೆ ಕೇವಲ ಕಾಗದದಲ್ಲೇ ಉಳಿದಿದೆ. ಇದು ಇಲ್ಲಿನ ಜನತೆಗೆ ಬೇಸರ ತರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Construction of Multi specialty Hospital for animals is stalled due to zero funds which was sanctioned 3 years ago by the state government.
Please Wait while comments are loading...