ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 19ರ ತನಕ ಎಕ್ಸಿಟ್‌ ಪೋಲ್ ಸಮೀಕ್ಷೆ ಪ್ರಕಟಿಸುವಂತಿಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 16 : ಕೊನೆಯ ಹಂತದ ಮತದಾನ ನಡೆಯುವ ಮೇ 19ರ ತನಕ ಯಾವುದೇ ರೀತಿಯ ಮತದಾನೋತ್ತರ ಸಮೀಕ್ಷೆ ಫಲಿತಾಂಶಗಳನ್ನು ಮುದ್ರಣ ಹಾಗೂ ಇತರೆ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.

ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 11ರ ಬೆಳಗ್ಗೆ 7 ಗಂಟೆಯಿಂದ ಕೊನೆಯ ಹಂತದ ಮತದಾನ ದಿನಾಂಕವಾದ ಮೇ 19ರ ಸಂಜೆ 6.30ರ ತನಕ ಯಾವುದೇ ರೀತಿಯ ಮತದಾನದ ನಂತರದ ಸಮೀಕ್ಷೆ ಪ್ರಕಟಿಸುವಂತಿಲ್ಲ.

ಆಂಬ್ಯುಲೆನ್ಸ್‌, ಪೊಲೀಸ್ ವಾಹನಗಳಲ್ಲೂ ಆಯೋಗದಿಂದ ತಪಾಸಣೆಆಂಬ್ಯುಲೆನ್ಸ್‌, ಪೊಲೀಸ್ ವಾಹನಗಳಲ್ಲೂ ಆಯೋಗದಿಂದ ತಪಾಸಣೆ

1951 ಪ್ರಕರಣ 126ಎ ನಂತೆ ಯಾವುದೇ ಟಿವಿ, ರೇಡಿಯೋ, ಕೇಬಲ್, ಎಫ್ಎಂ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಚುರಪಡಿಸುವಂತಿಲ್ಲ. ಈ ಅವಧಿಯಲ್ಲಿ ಅಭ್ಯರ್ಥಿಯ ಪರ ಅಥವಾ ವಿರೋಧ ಯಾವುದೇ ವಿಶ್ಲೇಷಣೆ ಮಾಡುವಂತಿಲ್ಲ ಹಾಗೂ ಅಭ್ಯರ್ಥಿಗಳ ಸಂದರ್ಶನಗಳನ್ನು ನಡೆಸುವಂತಿಲ್ಲ.

ಬೆಂಗಳೂರಲ್ಲಿ 1600 ಸೂಕ್ಷ್ಮ ಮತಗಟ್ಟೆಗಳು, ವಿಶೇಷ ವೀಕ್ಷಕರ ನೇಮಕಬೆಂಗಳೂರಲ್ಲಿ 1600 ಸೂಕ್ಷ್ಮ ಮತಗಟ್ಟೆಗಳು, ವಿಶೇಷ ವೀಕ್ಷಕರ ನೇಮಕ

No exit poll results will telecast till May 19

ಯಾವುದೇ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶವನ್ನು ಯಾವುದೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚುರ ಪಡಿಸುವುದನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಜಿಲ್ಲಾ ಮಾಧ್ಯಮ ಮತ್ತು ಮೇಲುಸ್ತುವಾರಿ ಸಮಿತಿಯಿಂದ ಅನುಮತಿ ಪಡೆಯದೇ ಇರುವ ಯಾವುದೇ ಜಾಹಿರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತಿಲ್ಲ.

ಮೊದಲ ಹಂತದ ಲೋಕಸಭಾ ಮತದಾನ ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?ಮೊದಲ ಹಂತದ ಲೋಕಸಭಾ ಮತದಾನ ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

ಅನುಮತಿ ಪಡೆಯದೇ ಜಾಹೀರಾತುಗಳನ್ನು ಪ್ರಕಟಿಸಿದರೆ ಅಭ್ಯರ್ಥಿಗಳು ಹಾಗೂ ಪ್ರಕಟಿಸಿದ ಮಾಧ್ಯಮದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲಾ ಮಾಧ್ಯಮ ಮಿತ್ರರು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
In a press release, the election commission said that Electronic, online, FM and print media do not publish, telecast exit poll results till May 19, 2019. Last phase of Lok Sabha election will be held on May 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X