ಕರ್ನಾಟಕದ ಶಾಲೆಗಳಿಗೆ ಯೋಗ ದಿನ ಕಡ್ಡಾಯವಲ್ಲ

ಬೆಂಗಳೂರು, ಜೂ, 16: ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡುವುದು ಶಾಲೆಗಳಿಗೆ ಕಡ್ಡಾಯವಲ್ಲ. ಆದರೆ ಕಾಲೇಜುಗಳು ಯೋಗ ದಿನ ಆಚರಿಸಲಿವೆ.

ಉನ್ನತ ಶಿಕ್ಷಣ ಇಲಾಖೆ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಯೋಗ ದಿನ ಆಚರಿಸಬೇಕು ಎಂದು ತಿಳಿಸಿದೆ. ಆದರೆ ಸಿಬಿಎಸ್ ಇ ಮಾದರಿಯ ಶಾಲೆಗಳಿಗೆ ಯಾವ ಆದೇಶ ಕಳುಹಿಸಲಾಗಿಲ್ಲ. [ವಿಶ್ವ ಯೋಗ ದಿನಾಚರಣೆಗೆ ಬಿರುಸಿನ ಅಭ್ಯಾಸ]

yoga

ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪ್ರಾಥಮಿಕ ಶಾಲೆಗಳಿಗೆ ಈ ಬಗ್ಗೆ ಯಾವ ಸುತ್ತೋಲೆತಯನ್ನು ನೀಡಲಾಗಿಲ್ಲ. ಯೋಗ ದಿನ ಆಚರಣೆ ಐಚ್ಛಿಕವಾದ ಸಂಗತಿಯಾಗಿದೆ ಎಂದು ಹೇಳಿದರು.

ಆದರೆ ಅನುದಾನಿತ ಮತ್ತು ಸ್ವಾಯುತ್ತ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಯೋಗ ದಿನ ಆಚರಣೆ ಮಾಡಲಿದ್ದು ಉಪನ್ಯಾಸ ವರ್ಗವೂ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು. ಸಿಬಿಎಸ್ ಸಿ ಶಾಲೆಗಳು ಜೂನ್ 22 ಕ್ಕೆ ಆರಂಭವಾಗಲಿದ್ದು ಅವುಗಳಿಗೆ ಯಾವ ಸುತ್ತೋಲೆಯನ್ನು ನೀಡಲಾಗಿಲ್ಲ.[ಯೋಗ ದಿನ ಪ್ರಚಾರಕ್ಕೆ ಅಂತರ್ಜಾಲದ ನೆರವು]

ನರೇಮದ್ರ ಮೋದಿ ಕನಸಿನ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ವಿಶ್ವ ಮಾನ್ಯತೆ ಸಿಕ್ಕಿದ್ದು ನವದೆಹಲಿಯಲ್ಲಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಬಾಬಾ ರಾಮ್ ದೇವ್ ಯೋಗ ದಿನದ ನೇತೃತ್ವ ವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+