ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ಎಂಟ್ರಿ ; ಯಾವ ಕ್ಷೇತ್ರದಿಂದ, ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ರಾಮನಗರ: ರಾಜ್ಯ ರಾಜಕಾರಣಕ್ಕೆ ಹೆಚ್ ಡಿ ಕುಮಾರಸ್ವಾಮಿ ಬರ್ತಾರಾ, ಕ್ಷೇತ್ರಕ್ಕೆ ಬರ್ತಾರ ಅಂತ ಚರ್ಚೆ.ಮೊದಲು ರಾಜ್ಯಕ್ಕೆ ಬರ್ತಾರಾ ಎನ್ನುವ ವಿಚಾರಕ್ಕೆ ಉತ್ತರ ಕಂಡಿಡಿದುಕೊಳ್ಳೊಣ. ಬಳಿಕ ಯಾವ ಕ್ಷೇತ್ರಕ್ಕೆ ಬರ್ತಾರೆ ಅನ್ನೋದು ತೀರ್ಮಾನ ಆಗುತ್ತೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಈ ಕುರಿತು ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿ, ಕುಮಾರಣ್ಣ 4 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದು ಅವರು ಮುಖ್ಯಮಂತ್ರಿಯಾಗಿ ಮಾಡಿದ ಹಲವಾರು ಕೆಲಸಗಳ ಬಗ್ಗೆ ಜನರಿಗೆ ಅರಿವಿದೆ. ಅಭಿವೃದ್ದಿ ವಿಚಾರದಲ್ಲಿ ಅವರಿಗಿರುವ ದೂರದೃಷ್ಟಿ ಜನತೆಗೆ ಗೊತ್ತಿದೆ. ಇವತ್ತಿನ ಕಾಂಗ್ರೆಸ್ ಪಕ್ಷ ಬಂದು ಏನು ಮಾಡಿದೆ, ರಸ್ತೆಗಳು ಏನಾಗಿದೆ. ಪೆನ್ನು ಪೇಪರ್ ಕೇಳುವ ಉಪಮುಖ್ಯಮಂತ್ರಿಗಳು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ಘನತೆಗೆ ಕಾಂಗ್ರೆಸ್ ಅಗೌರವ ತೋರಿದೆ, ರಾಜ್ಯಪಾಲರ ಸ್ಥಾನಕ್ಕೆ ಒಂದು ಗೌರವ ಇದೆ. ಅವರು ಏನನ್ನ ಓದಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ. ಅವರ ಘನತೆಯನ್ನ ಕಾಂಗ್ರೆಸ್‌ನವರು ಹಾಳು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರನ್ನ ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿ ಧಿಕ್ಕಾರ ಕೂಗಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ರಾಜ್ಯ ಸರ್ಕಾರ ಸದಾಕಾಲ ಕೇಂದ್ರದ ಜೊತೆ ಸಂಘರ್ಷ ಸರಿಯಲ್ಲಇದರಿಂದ ಹೋದ್ರೆ ರಾಜ್ಯದ ಜನತೆಯೇ ಬಡವಾಗುತ್ತಾರೆ ಎಂದು ನಿಖಿಲ್ ಅವರು ಕಿಡಿಕಾರಿದರು.
ಇನ್ನು ತುಮಕೂರಿನಲ್ಲಿ ಸ್ಟೇಡಿಯಂ ಹೆಸರು ಬದಲಾವಣೆ ಆಯ್ತು. ಮಹಾತ್ಮ ಗಾಂಧಿ ಹೆಸರು ಬದಲಾವಣೆ ಮಾಡಿರೋದು ನಿಮ್ಮ ನಾಯಕರೇ. ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಕಾಂಗ್ರೆಸ್‌ನವರು ಯಾಕೆ ಈ ವಿಚಾರದಲ್ಲಿ ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮುಂದಿನ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿ ವಿಚಾರಕ್ಕೆ ಮಾತನಾಡಿದ ಅವರು. ಸ್ವಾಭಾವಿಕವಾಗಿ ಜನ ಪ್ರೀತಿಯಿಂದ ಹೇಳ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಮುಖಂಡರಲ್ಲೇ ಓವರ್ ಕಾನ್ಸಿಡೆನ್ಸ್ ಇತ್ತು. ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಆದರೂ ಸ್ವಲ್ಪ ಎಡವಿದ್ರು. ಎಲ್ಲವನ್ನೂ ಸರಿಪಡಿಸಿ ಮೊದಲು ಪಕ್ಷ ಅಧಿಕಾರಕ್ಕೆ ತರ್ತೀವಿ ಎಂದು ಹೇಳಿದರು.
ನಮ್ಮ ಪಕ್ಷದ ಚೌಕಟ್ಟಿನಲ್ಲಿ ನಾವು ಚರ್ಚೆ ಮಾಡಿದ್ದು ಕುಮಾರಣ್ಣನವರನ್ನು ರಾಜ್ಯ ನೋಡುತ್ತಿದ್ದು ನಾನು ಕ್ಷೇತ್ರಕ್ಕೆ ಸೀಮಿತವಾದರೆ ಇಲ್ಲೇ ನೋಡುತ್ತೇನೆ. ಆದರೆ ರಾಜ್ಯ ನೋಡಬೇಕು ನಾನು ಎಲ್ಲೇ ಇದ್ದರು ನನ್ನ ಮನಸ್ಸು ಇಲ್ಲೇ ಇರುತ್ತದೆ, ಸವಾಲು ಇರುತ್ತದೆ. ರಾಜಕಾರಣ ಸಮುದ್ರ ಇದ್ದಂತೆ 24ನೇ ತಾರೀಖು ಹಾಸನದಲ್ಲಿ ಬೃಹತ್ ಸಮಾವೇಶ ನಡೆಯುತ್ತದೆ, ಅಸೆಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ ಎಂದರು. ಎಂಪಿ ಚುನಾವಣೆಯಲ್ಲಿ ಜನ ನಮಗೆ ವೋಟು ಮಾಡಿದ್ದಾರೆ. ನಮ್ಮ ಪರವಾಗಿ ನಿಲ್ಲುವ ಜನ ಇದ್ದಾರೆ. ಈಗಲೂ ಇದೆ ಎರಡು ಬಾರಿ ಮಂತ್ರಿ ಮಾಡಿದ ಕುಮಾರಣ್ಣರವರನ್ನು ಇನ್ನು ರಾಜ್ಯದಲ್ಲಿ ರಾಮನಗರಕ್ಕೆ ಬರುತ್ತಾರೆ ಎಂಬುದು ಅವರಿಗೆ ಗೊತ್ತಿರುವ ವಿಚಾರ.
ರಾಜ್ಯ ಸರ್ಕಾರ-ಕೇಂದ್ರ ಸರ್ಕಾರ ಸಂಘರ್ಷ ಮಾಡಿದರೆ ಬಡವಾಗುವುದು ರಾಜ್ಯ ಸರ್ಕಾರ. ಜಿ ರಾಮ್ ಜಿ , ಮನರೇಗಾ ಹೆಸರು ಬದಲಾವಣೆ ಮಾಡಿದ್ದಾರೆ. ಇದೆಲ್ಲಾ ಬೇಡ ಹೆಸರು ಬದಲಾವಣೆ ಮಾಡಿರುವುದಲ್ಲಾ ಪ್ರಶ್ನೆ ಅಲ್ಲ ತಾಂತ್ರಿಕವಾಗಿ ತೆಗೆದುಕೊಂಡ ವಿಚಾರ. ಅವರು ರಾಮನಗರ ಹೆಸರು ಬದಲಾವಣೆ ಮಾಡಿದರು ಇವತ್ತು ತುಮಕೂರು ಕ್ರೀಡಾಂಗಣಕ್ಕೆ ಪರಮೇಶ್ವರ್ ಹೆಸರು ಯಾಕೆ ಇಟ್ಟರು ಗಾಂಧಿ ಇರಲಿಲ್ಲವಾ, ಕಾಂಗ್ರೆಸ್ ನವರಿಗೆ ಡಬಲ್ ಸ್ಟ್ಯಾಂಡರ್ಡ್ ಏಕೆ ಎಂದರು.












Click it and Unblock the Notifications