Channapatna: ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಜಯ ಖಚಿತ!

ಉಪಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯ ಹೆಸರು ಘೋಷಣೆಯಾಗಿದೆ. ಈ ನಡುವೆ ಸೋಲು ಗೆಲುವಿನ ಲೆಕ್ಕಾಚಾರ, ಸಮೀಕ್ಷೆ ಹಾಗೂ ಅಭಿಪ್ರಾಯ ಸಂಗ್ರಹ ಜೋರಾಗಿ ನಡೆಯುತ್ತಿದೆ. ಹಾಗಾದರೆ ಚನ್ನಪಟ್ಟಣದಲ್ಲಿ ಜನರ ಒಲವು ಯಾವ ಅಭ್ಯರ್ಥಿಯ ಪರವಾಗಿದೆ ಎಂದು ತಿಳಿಯೋಣ.

ನವೆಂಬರ್‌ 13ರಂದು ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟದಲ್ಲಿ ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷದಿಂದ ಸಿಪಿ ಯೋಗೇಶ್ವರ್ ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಇವರಿಬ್ಬರೂ ಸದ್ಯ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಭರ್ಜರಿ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ರಣ ರೋಚಕ ಏರ್ಪಟ್ಟಿದೆ. ಹಾಗಾದರೆ ಚನ್ನಪಟ್ಟದ ಜನ ಏನು ಹೇಳ್ತಾರೆ? ಯಾರ ಪರ ಒಲವು ತೋರುತ್ತಾರೆ ನೋಡೋಣ.

Nikhil Kumaraswamy win in Channapatna is certain

ಚನ್ನಪಟ್ಟಣ ತಾಲೂಕಿನ ಇಗ್ಲೂರಿನ ಜನ ನಿಖಿಲ್ ಕುಮಾರಸ್ವಾಮಿ ಪರ ಒಲವು ತೋರಿದ್ದಾರೆ. ಯಾಕೆಂದರೆ ಹೆಚ್‌ಡಿ ದೇವೇಗೌಡರ ಕಾಲದಿಂದಲೂ ಇಗ್ಲೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆಗುತ್ತಲೂ ಇವೆ. ಹೀಗಾಗಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರೇ ಚನ್ನಪಟ್ಟದಲ್ಲಿ ಗೆದ್ದು ಬರ್ತಾರೆ. ನಾವು ಅವರಿಗೆ ಮತ ಚಲಾಯಿಸುತ್ತೇವೆ ಎಂದು ಇಗ್ಲೂರಿನ ಹಿರಿಯ ವ್ಯಕ್ತಿ ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಚನ್ನಪಟ್ಟಣಕ್ಕೆ ದಳಪತಿಗಳ ಕೊಡುಗೆ ಅಪಾರ!

ಈ ಕ್ಷೇತ್ರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರದ್ದೇ ಆದ ಕೊಡುಗೆ ಇದೆ. ಹೀಗಾಗಿ ಜನ ಅವರ ಕೊಡುಗೆಯನ್ನು ಮರೆಯುವುದಿಲ್ಲ. ಜೊತೆಗೆ ಕೆಲವರು ಹೊರಗಿನ ಜನ ಒಳಗಿನ ಜನ ಅಂತ ಪ್ರಚಾರ ಮಾಡ್ತಾಯಿದ್ದಾರೆ. ನಾವು ಆ ರೀತಿ ಅಂದುಕೊಂಡಿಲ್ಲ ಎಂದು ಮಂಜುನಾಥ್ ಎಂಬುವವರು ಹೇಳಿದರು.

Nikhil Kumaraswamy win in Channapatna is certain

ಇಡೀ ಚನ್ನಪಟ್ಟಣಕ್ಕೆ ನೀರು ಸೌಲಭ್ಯ

ಇಡೀ ಚನ್ನಪಟ್ಟಣಕ್ಕೆ ನೀರು ಸೌಲಭ್ಯ ಒದಗಿಸಿಕೊಟ್ಟವರು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು. ಸಿಪಿ ಯೋಗೇಶ್ವರ್ ಅಲ್ಲ. ದೇವೇಗೌರ ಕುಟುಂಬದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರಿಗೇ ನಾವು ಮತ ನೀಡುತ್ತೇವೆ. ಅವರನ್ನೇ ಗೆಲ್ಲಿಸುತ್ತೇವೆ ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ವರ್ಕ್ ಆಗಲ್ಲ ಕಾಂಗ್ರೆಸ್ ಗ್ಯಾರಂಟಿ

ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಗೆ ಕಾಂಗ್ರೆಸ್‌ ಪಕ್ಷದ ಗ್ಯಾರಮಟಿ ಕೈ ಹಿಡಿಯಲಿದೆ ಎನ್ನುವ ಲೆಕ್ಕಾಚಾರಗಳು ಇವೆ. ಆದರೆ ಕೆಲ ಜನ ಇದನ್ನು ಒಪ್ಪುವುದಿಲ್ಲ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಗಳನ್ನು ತಂದಿದೆ. ಆದರೆ ಚನ್ನಪಟ್ಟಣಕ್ಕೆ ದೇವೇಗೌಡರು ಕಾಲದಿಂದಲೂ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಆಗಿವೆ. ಮುಂದೆ ಕೂಡ ಆಗುತ್ತವೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಕಾಂಗ್ರೆಸ್‌ ಅವರು ದುಡ್ಡು ಕೊಟ್ಟು ಮತ ಪಡೆಯುತ್ತಾರೆ ಎಂದು ಮೈತ್ರಿ ಕಾರ್ಯಕರ್ತರು ಹೇಳಿದರು.

ಹೀಗೆ ತಿಟ್ಟಮಾರನಹಳ್ಳಿ, ಕುಂತೂರು ದೊಡ್ಡಿ, ಚಿಕ್ಕನದೊಡ್ಡಿ, ಪಟಲು, ಕಳ್ಳಿ ಹೊಸೂರು, ಮೈಲನಾಯಕನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಮೈತ್ರಿ ಪಕ್ಷಕ್ಕೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯ ಹವಾ ಜೋರಾಗಿದ್ದು, ಗೆಲುವು ಖಚಿತ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+