Get Updates
Get notified of breaking news, exclusive insights, and must-see stories!

ಕರ್ನಾಟಕ ಸರ್ಕಾರಕ್ಕೆ ಎನ್‌ಜಿಟಿಯಿಂದ 2,900 ಕೋಟಿ ರೂ. ದಂಡ

ಬೆಂಗಳೂರು, ಅ.16: ಘನ ಮತ್ತು ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಪರಿಸರ ಪರಿಹಾರವಾಗಿ 2,900 ಕೋಟಿ ರೂಪಾಯಿ ಪಾವತಿಸಲು ನಿರ್ದೇಶಿಸಿದೆ.

ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕೈಗೊಂಡಿರುವ ಕ್ರಮಗಳು ಅಸಮರ್ಪಕವಾಗಿವೆ ಎಂದು ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಮಂಡಳಿ ತಿಳಿಸಿದೆ.

ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ತಜ್ಞ ಸದಸ್ಯರಾದ ಎ. ಸೆಂಥಿಲ್ ವೆಲ್ ಮತ್ತು ಅಫ್ರೋಜ್ ಅಹ್ಮದ್ ಅವರನ್ನೊಳಗೊಂಡ ಎನ್‌ಜಿಟಿ ಪೀಠವು ಘನ ಮತ್ತು ದ್ರವ ತ್ಯಾಜ್ಯದ ಉತ್ಪಾದನೆ ಮತ್ತು ವೈಜ್ಞಾನಿಕ ನಿರ್ವಹಣೆಯಲ್ಲಿನ ಅಂತರವು ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡಿದೆ ಎಂದು ತಿಳಿಸಿದೆ.

ಪರಿಸರಕ್ಕೆ ಉಂಟಾಗುತ್ತಿರುವ ನಿರಂತರ ಹಾನಿಯನ್ನು ನಿವಾರಿಸಲು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಲು ಎನ್‌ಜಿಟಿ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಪರಿಹಾರವನ್ನು ನೀಡುವುದು ಅಗತ್ಯವಾಗಿದೆ ಎಂದು ಪೀಠ ಹೇಳಿದೆ.

ರಾಜ್ಯವು ಕಾನೂನು ಮತ್ತು ನಾಗರಿಕರಿಗೆ ತನ್ನ ಕರ್ತವ್ಯವನ್ನು ತಿಳಿಯುವಂತೆ ಮಾಡಲು ಮತ್ತು ತನ್ನದೇ ಆದ ಕೇಂದ್ರೀಕೃತ ಸಮಿತಿಯನ್ನು ಸ್ಥಾಪಿಸುವ ಮೂಲಕ ಅದರ ವಿಧಾನವನ್ನು ಕೂಲಂಕಷವಾಗಿ ಮೇಲ್ವಿಚಾರಣೆ ಮಾಡಲು ಇದು ಉತ್ತಮ ಸಮಯ ಎಂದು ಹಸಿರು ಪೀಠ ತಿಳಿಸಿದೆ.

ಹಳೆಯ ಕಸದ ಅಸಮರ್ಪಕ ನಿರ್ವಹಣೆಗೆ 540 ಕೋಟಿ ಪರಿಹಾರ

ಹಳೆಯ ಕಸದ ಅಸಮರ್ಪಕ ನಿರ್ವಹಣೆಗೆ 540 ಕೋಟಿ ಪರಿಹಾರ

ದ್ರವ ತ್ಯಾಜ್ಯ ಅಂದರೆ ದಿನ ಉತ್ಪಾದನೆಯಾಗುತ್ತಿರುವ 1,427.4 ದಶಲಕ್ಷ ಲೀಟರ್ ಕೊಳಚೆಯ ಸಂಸ್ಕರಣೆ ಸರಿಯಾಗಿ ಆಗುತ್ತಿಲ್ಲ ಎಂದಿರುವ ನ್ಯಾಯಪೀಠ ಈ ಕಾರಣಕ್ಕೆ 2,856 ಕೋಟಿ ರೂ. ಪರಿಹಾರ ನೀಡಬೇಕು ಎಂದಿದೆ.

ಇನ್ನು ಭೂಭರ್ತಿ ಘಟಕಗಳಲ್ಲಿ ವಿಲೇವಾರಿ ಮಾಡದೇ ಉಳಿದುಕೊಂಡಿರುವ 178.50 ಮೆಟ್ರಿಕ್ ಟನ್‌ಗಳ (ಎಂಟಿ) ಹಳೆಯ ತ್ಯಾಜ್ಯಕ್ಕೆ ರಾಜ್ಯವು ಪರಿಹಾರವನ್ನು ಪಾವತಿಸಬೇಕಿದ್ದು, ಇದು 540 ಕೋಟಿ ರೂಪಾಯಿ. ಒಟ್ಟು ಪರಿಹಾರದ ಮೊತ್ತ 3,396 ಕೋಟಿಗಳು ಎಂದು ತಿಳಿಸಿದೆ.

ಚಂದಾಪುರ ಕೆರೆ ಸಂರಕ್ಷಣೆಗೆ ಕ್ರಮವಿಲ್ಲ ಎಂದು 500 ಕೋಟಿ ರೂ ದಂಡ

ಚಂದಾಪುರ ಕೆರೆ ಸಂರಕ್ಷಣೆಗೆ ಕ್ರಮವಿಲ್ಲ ಎಂದು 500 ಕೋಟಿ ರೂ ದಂಡ

ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳದ ಕಾರಣಕ್ಕೆ ಅಕ್ಟೋಬರ್ 10, 2022 ರ ಎನ್‌ಜಿಟಿ ಆದೇಶದಲ್ಲಿ 500 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ತಿಳಿಸಿಸಿತ್ತು.

ಈಗ ವಿಧಿಸಲಾಗಿರುವ ಪರಿಹಾರದ ಮೊತ್ತದಲ್ಲಿ 500 ಕೋಟಿ ಮೊತ್ತವನ್ನು ಕಡಿತಗೊಳಿಸಿದ್ದು, ರಾಜ್ಯ ಸರ್ಕಾರ 2,900 ಕೋಟಿ ದಂಡ ಪರಿಸರ ಪರಿಹಾರವಾಗಿ ಪಾವತಿಸಬೇಕಿದೆ.

ಒಂದು ತಿಂಗಳೊಳಗೆ ಸಮಗ್ರ ಯೋಜನೆ ರೂಪಿಸಬೇಕು

ಒಂದು ತಿಂಗಳೊಳಗೆ ಸಮಗ್ರ ಯೋಜನೆ ರೂಪಿಸಬೇಕು

"ರಾಜ್ಯ ಸರ್ಕಾರವು ಎರಡು ತಿಂಗಳೊಳಗೆ ಪ್ರತ್ಯೇಕ ಖಾತೆ ತೆರೆದು 2,900 ಕೋಟಿ ರೂಪಾಯಿಯನ್ನು ಅದರಲ್ಲಿ ಇಡಬೇಕು. ಮುಖ್ಯ ಕಾರ್ಯದರ್ಶಿ ಅವರು ಮೇಲ್ವಿಚಾರಣೆ ವಹಿಸಬೇಕು. ಈ ಮೊತ್ತವನ್ನು ಕಸದ ವೈಜ್ಞಾನಿಕ ವಿಲೇವಾರಿಗೆ ಬಳಸಿ 6 ತಿಂಗಳಲ್ಲಿ ಪ್ರಗತಿ ತೋರಿಸಬೇಕು' ಎಂದು ಪೀಠ ನಿರ್ದೇಶಿಸಿದೆ.

ಒಂದು ತಿಂಗಳೊಳಗೆ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಮುಖ್ಯ ಕಾರ್ಯದರ್ಶಿಗಳು ಪರಿಹಾರ ಕ್ರಮಕ್ಕಾಗಿ ಕಾರ್ಯಕ್ರಮಗಳ ಯೋಜನೆ, ಕಾರ್ಯಗತಗೊಳಿಸುವಿಕೆ, ಮೇಲ್ವಿಚಾರಣೆಗೆ ಸಮಗ್ರ ಯೋಜನೆ ರೂಪಿಸಬೇಕು ಎಂದು ತಿಳಿಸಿದೆ.

ರಾಜ್ಯ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯ ಯೋಜನೆ, ಸಾಮರ್ಥ್ಯ ವೃದ್ಧಿ ಮತ್ತು ಮೇಲ್ವಿಚಾರಣೆಗಾಗಿ ಕೇಂದ್ರೀಕೃತ ಕಾರ್ಯವಿಧಾನವನ್ನು ಸ್ಥಾಪಿಸುವುದು ಅಗತ್ಯವಿರುವ ಪ್ರಮುಖ ಬದಲಾವಣೆ ಎಂದು ಎನ್‌ಜಿಟಿ ಹೇಳಿದೆ.

ಆರು ತಿಂಗಳಲ್ಲಿ ಎನ್‌ಜಿಟಿಗೆ ಪ್ರಗತಿ ವರದಿ ಸಲ್ಲಿಸಬೇಕು

ಆರು ತಿಂಗಳಲ್ಲಿ ಎನ್‌ಜಿಟಿಗೆ ಪ್ರಗತಿ ವರದಿ ಸಲ್ಲಿಸಬೇಕು

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪರಿಸರ ಮತ್ತು ಅರಣ್ಯ, ಕೃಷಿ, ಜಲಸಂಪನ್ಮೂಲ, ಮೀನುಗಾರಿಕೆ ಮತ್ತು ಕೈಗಾರಿಕೆಗಳ ಸಂಬಂಧಿತ ಇಲಾಖೆಗಳ ಪ್ರಾತಿನಿಧ್ಯದೊಂದಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯು ಸಮಿತಿಯ ನೇತೃತ್ವ ವಹಿಸಬೇಕು ಎಂದು ಎನ್‌ಜಿಟಿ ಹೇಳಿದೆ.

"ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿ, ರಾಜ್ಯವು ವಿನೂತನ ವಿಧಾನ ಮತ್ತು ಕಠಿಣ ಮೇಲ್ವಿಚಾರಣೆಯ ಮೂಲಕ ಈ ವಿಷಯದಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡು, ಘನ ಮತ್ತು ದ್ರವ ತ್ಯಾಜ್ಯ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿನ ಅಂತರವನ್ನು ಶೀಘ್ರವಾಗಿ ನಿವಾರಿಸಬೇಕು" ಎಂದು ತಿಳಿಸಿದೆ.

ಸರಿಯಾದ ಘನತ್ಯಾಜ್ಯ ನಿರ್ವಹಣೆಗಾಗಿ, ಹಳೆ ತ್ಯಾಜ್ಯವನ್ನು ಹಾಕುವ ಸ್ಥಳಗಳಿಗೆ ಸೂಕ್ತವಾಗಿ ಬೇಲಿ ಹಾಕಬೇಕು. ದ್ರವ ತ್ಯಾಜ್ಯ ನಿರ್ವಹಣೆಗಾಗಿ, ಶುದ್ಧ ನೀರಿನ ಮೂಲಗಳನ್ನು ನಿರ್ವಹಿಸಬೇಕು. ಸಂಸ್ಕರಿಸಿದ ಕೊಳಚೆ ನೀರನ್ನು ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ ಬಳಸಬೇಕು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಹಸಿರು ಸಮಿತಿ ಸೂಚಿಸಿದೆ.

ಆರು ತಿಂಗಳ ಪ್ರಗತಿ ವರದಿಯನ್ನು ಮುಖ್ಯ ಕಾರ್ಯದರ್ಶಿಗಳು ನ್ಯಾಯಮಂಡಳಿಯ ರಿಜಿಸ್ಟ್ರಾರ್ ಜನರಲ್‌ಗೆ ಪ್ರತಿಯೊಂದಿಗೆ ಸಲ್ಲಿಸಬೇಕು ಎಂದು ಹಸಿರು ಸಮಿತಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+