ಬಿಜೆಪಿಯಲ್ಲಿ ಎಸ್ ಎಂ ಕೃಷ್ಣ ಪಾಂಚಜನ್ಯ? ಯಡಿಯೂರಪ್ಪ ನೇರ ನುಡಿ

Written By:
Subscribe to Oneindia Kannada

ತುಮಕೂರು/ ಬೆಂಗಳೂರು, ಫೆ 3: ಕಾಂಗ್ರೆಸ್ ನಲ್ಲಿ ಪಕ್ಷದ ಹಿರಿಯ ಮುಖಂಡರಾಗಿದ್ದ ಎಸ್ ಎಂ ಕೃಷ್ಣ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಸುದ್ದಿಗೆ, ಯಡಿಯೂರಪ್ಪ ತುಮಕೂರಿನಲ್ಲಿ ನೀಡಿರುವ ಹೇಳಿಕೆ ಮತ್ತಷ್ಟು ಬಲ ನೀಡಿದೆ.

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮುನ್ನ, ಪಕ್ಷದ ಹಿರಿಯ ಮುಖಂಡ ಎಸ್ ಎಂ ಕೃಷ್ಣ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು ಎನ್ನುವ ಸುದ್ದಿಗೂ, ಬಿಎಸ್ವೈ ವಿಶ್ವಾಸದ ಮಾತಿಗೂ ಒಂದಕ್ಕೊಂದು ತಾಳೆಯಾಗುತ್ತಿದೆ. (ಮುನಿಸಿಕೊಂಡ ಕೃಷ್ಣರ ಮನವೊಲಿಸುತ್ತೇವೆ)

ಶುಕ್ರವಾರ (ಫೆ 3) ಎಡಿಯೂರು ಸಿದ್ದಲಿಂಗೇಶ್ವರ ದೇವಾಯಲಕ್ಕೆ ಭೇಟಿ ನೀಡಿದ ನಂತರ ಮಾತನಾಡುತ್ತಿದ್ದ ಯಡಿಯೂರಪ್ಪ, ನಾನು ಹಿಂದೆಯೇ ಹೇಳಿದ ಹಾಗೆ ಕೃಷ್ಣ ಅವರಿಗೆ ಬಿಜೆಪಿಯ ಬಾಗಿಲು ತೆರೆದಿದೆ.

ಅವರ ಜೊತೆ ನಮ್ಮ ಪಕ್ಷದ ಮುಖಂಡ ಆರ್ ಅಶೋಕ್ ಸಂಪರ್ಕದಲ್ಲಿದ್ದಾರೆ. ಕೃಷ್ಣ ಬಿಜೆಪಿಗೆ ಸೇರುವ ಬಗ್ಗೆ ಯಾವುದೇ ಅನುಮಾನ ಬೇಡ. ಅವರು ನಮ್ಮ ಪಕ್ಷಕ್ಕೆ ಸೇರುವುದು ನಿಶ್ಚಿತ..ನಿಶ್ಚಿತ.. ಎಂದು ಯಡಿಯೂರಪ್ಪ ಭರವಸೆಯ ಮಾತನ್ನಾಡಿದ್ದಾರೆ.

ಕಾಂಗ್ರೆಸ್ಸಿನ ಮತ್ತೊಬ್ಬ ಹಿರಿಯ ಮುಖಂಡ ವಿ ಶ್ರೀನಿವಾಸ ಪ್ರಸಾದ್, ಬಿಜೆಪಿಗೆ ಸೇರಿರುವ ಹಿಂದೆಯೂ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಿದ್ದರು.

ಈಗ ಕೃಷ್ಣ, ಹೈಕಮಾಂಡ್ ಜೊತೆ ಮುನಿಸಿಕೊಂಡು ಪಕ್ಷ ತೊರೆದಿರುವ ಹಿನ್ನಲೆಯಲ್ಲಿ, ಯಡಿಯೂರಪ್ಪ ನೀಡುತ್ತಿರುವ ವಿಶ್ವಾಸದ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಕೃಷ್ಣ ಯಾವ ಪಕ್ಷಕ್ಕಾದರೂ ಹೋಗಲಿ, ಮುಂದೆ ಓದಿ..

ಡಿ ಕೆ ಶಿವಕುಮಾರ್ ಹೇಳಿಕೆ

ಡಿ ಕೆ ಶಿವಕುಮಾರ್ ಹೇಳಿಕೆ

ಎಸ್ ಎಂ ಕೃಷ್ಣ ಅವರ ಅವಶ್ಯಕತೆ ಪಕ್ಷಕ್ಕಿದೆ, ಅವರ ಹಿರಿತನ ನಮಗೆ ಬೇಕಿದೆ. ತಮಗಾದ ನೋವನ್ನು ನುಂಗಿಕೊಂಡು ಕೃಷ್ಣ, ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯಬೇಕು ಎನ್ನುವುದು ನನ್ನ ಮನವಿ - ಡಿ ಕೆ ಶಿವಕುಮಾರ್.

ದಿನೇಶ್ ಗುಂಡೂರಾವ್ ಹೇಳಿದ್ದು

ದಿನೇಶ್ ಗುಂಡೂರಾವ್ ಹೇಳಿದ್ದು

ಎಸ್ ಎಂ ಕೃಷ್ಣ ಅವರಿಗೆ ಪಕ್ಷ ಎಲ್ಲವನ್ನೂ ನೀಡಿದೆ, ಅವರಿಗೆ ಉಪರಾಷ್ಟ್ರಪತಿ ಹುದ್ದೆ ಅಲಂಕರಿಸಬೇಕಿತ್ತು ಅಥವಾ ಬೇರೆ ರೀತಿಯ ಆಸೆ ಇದ್ದಿರಬಹುದು. ಅದನ್ನು ಈಡೇರಿಸಲು ಪಕ್ಷಕ್ಕೆ ಆಗದೇ ಇದ್ದಿರಬಹುದು, ಅದಕ್ಕಾಗಿ ಪಕ್ಷವನ್ನು ಬಿಟ್ಟಿದ್ದು ಸರಿಯಲ್ಲ - ದಿನೇಶ್ ಗುಂಡೂರಾವ್.

ಕೃಷ್ಣ ಬಿಜೆಪಿಗೆ ಸೇರುವುದು ಖಚಿತ

ಕೃಷ್ಣ ಬಿಜೆಪಿಗೆ ಸೇರುವುದು ಖಚಿತ

ಎಸ್ ಎಂ ಕೃಷ್ಣ ಬಿಜೆಪಿಗೆ ಸೇರುವುದು ಖಚಿತ, ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಎಡಿಯೂರಿನಲ್ಲಿ ಯಡಿಯೂರಪ್ಪ ಹೇಳಿಕೆ.

ಕೃಷ್ಣ ಯಾವ ಪಕ್ಷಕ್ಕಾದರೂ ಹೋಗಲಿ

ಕೃಷ್ಣ ಯಾವ ಪಕ್ಷಕ್ಕಾದರೂ ಹೋಗಲಿ

ಎಸ್ ಎಂ ಕೃಷ್ಣ ಯಾವ ಪಕ್ಷಕ್ಕಾದರೂ ಹೋಗಲಿ, ಕಾಂಗ್ರೆಸ್ ಪಾಲಿಗೆ ಅದೊಂದು ಮುಗಿದ ಅಧ್ಯಾಯ. ಜೊತೆಗೆ, ಕೃಷ್ಣ ಅವರನ್ನು ಮನವೊಲಿಸುವ ಪ್ರಯತ್ನವನ್ನೂ ಬಿಟ್ಟಿದ್ದೇವೆ - ಆರೋಗ್ಯ ಸಚಿವ ರಮೇಶ್ ಕುಮಾರ್.

ಕೃಷ್ಣರನ್ನು ಮಾತಿನಿಂದ ತಿವಿದ ಕಾಗೋಡು

ಕೃಷ್ಣರನ್ನು ಮಾತಿನಿಂದ ತಿವಿದ ಕಾಗೋಡು

ಹುದ್ದೆ ಬೇಕಂದರೆ ಪ್ರವಾಸ ಮಾಡಬೇಕು, ಸಕ್ರಿಯ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಕೃಷ್ಣ ಎಲ್ಲಿದ್ದರು. ಪಕ್ಷ ಅವರಿಗೆ ಎಲ್ಲವನ್ನೂ ನೀಡಿತ್ತು, ಈಗ ಕಾಂಗ್ರೆಸ್ ಪಕ್ಷ ತೊರೆದ ಅವರ ನಿರ್ಧಾರ, ಅವರು ನಡೆದುಕೊಂಡು ಬಂದ ರಾಜಕೀಯಕ್ಕೆ ಕಳಂಕ - ಕಾಗೋಡು ತಿಮ್ಮಪ್ಪ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News on senior leader S M Krishna joining BJP, State President of BJP unit of Karnataka B S Yeddyurappa statement in Yediyur on Feb 3.
Please Wait while comments are loading...