Gold: ವೆಡ್ಡಿಂಗ್‌ನಲ್ಲಿ ವಿಲನ್‌: ಬೆಂಗಳೂರು ಆರತಕ್ಷತೆಯಲ್ಲಿ ₹1 ಕೋಟಿ ಚಿನ್ನಾಭರಣ ಕಳವು

Gold: ಬೆಂಗಳೂರಿನಲ್ಲಿ ನಡೆದ ಮದುವೆ ಸಂದರ್ಭವೊಂದರಲ್ಲಿ ಎನ್‌ಆರ್‌ಐವೊಬ್ಬರು ಬರೋಬ್ಬರಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಹೌದು ಬೆಂಗಳೂರಿನಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ 1 ಕೋಟಿ ರೂ. ಮೌಲ್ಯದ 725 ಗ್ರಾಂ ಚಿನ್ನ ಕಳ್ಳತನವಾಗಿದೆ ಎಂದು ಅನಿವಾಸಿ ಭಾರತೀಯ ವೈದ್ಯರೊಬ್ಬರು ದೂರು ನೀಡಿದ್ದಾರೆ.

ಏಪ್ರಿಲ್ 22 ರಂದು ಪೂರ್ವ ಬೆಂಗಳೂರು ಪ್ರದೇಶದಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿದ್ದ ಅನಿವಾಸಿ ಭಾರತೀಯ ವೈದ್ಯರಾದ ಶ್ರೀದೇವಿ ಅವರು ಸುಮಾರು 1 ಕೋಟಿ ರೂ. ಮೌಲ್ಯದ 725 ಗ್ರಾಂ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ. ಏಪ್ರಿಲ್ 18 ರಂದು ತಮ್ಮ ಅಕ್ಕನ ಮಗನ ಮದುವೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿಳಿದರು. ಶ್ರೀದೇವಿ ಅವರು ಗಂಗಾನಗರದಲ್ಲಿ ತಂಗಿದ್ದರು ಮತ್ತು ಬೆಳಿಗ್ಗೆ ಕಟಮ್ನಲ್ಲೂರಿನ ಎಸ್‌ಡಿಪಿ ಪ್ಯಾಲೇಸ್‌ಗೆ ಹೋಗಿದ್ದರು. ಶ್ರೀದೇವಿಯ ಸಹೋದರ ಕೆ. ಶ್ರೀನಿವಾಸಮೂರ್ತಿ ಸಂಜೆ 6:30 ರ ಸುಮಾರಿಗೆ ಮದುವೆ ಮಂಟಪದಲ್ಲಿ ಅವರಿಗೆ ಚಿನ್ನದ ಆಭರಣಗಳಿರುವ ಪೆಟ್ಟಿಗೆಯನ್ನು ನೀಡಿದ್ದರು ಎನ್ನಲಾಗಿದೆ.

Gold

ಶ್ರೀದೇವಿ ಅವರು ಕೆಲವೊಂದು ಪ್ರಮುಖ ಚಿನ್ನದ ಆಭರಣಗಳನ್ನು ಧರಿಸಿದ್ದು, ಇನ್ನುಳಿದ ಆಭರಣಗಳನ್ನು ಪೆಟ್ಟಿಗೆಯಲ್ಲಿ ಇರಿಸಿ, ಅದನ್ನು ಬ್ಯಾಗ್‌ನಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಇದಾದ ಮೇಲೆ ಅವರು ತಮ್ಮ ಕೋಣೆಗೆ ತೆರಳಿದರು. ಆ ರೂಮ್‌ಅನ್ನು ಅವರಿಗೆ ಮೊದಲೇ ನಿಗಿದ ಮಾಡಲಾಗಿತ್ತು. ಚಿನ್ನದ ಆಭರಣಗಳು ಇರುವ ಬ್ಯಾಗ್ ಅನ್ನು ತಮ್ಮ ಕೋಣೆಯಲ್ಲಿ ಇರಿಸಿ, ಅದನ್ನು ಲಾಕ್ ಮಾಡಿ, ಸಂಜೆ 7 ಗಂಟೆಗೆ ಮದುವೆ ಮಂಟಪಕ್ಕೆ ಹೋಗಿದ್ದರು.

ರಾತ್ರಿ 11:30 ಸುಮಾರಿಗೆ ಅವರು ತಮ್ಮ ಕೋಣೆಗೆ ಹಿಂತಿರುಗಿದಾಗ ಸಂದರ್ಭದಲ್ಲಿ ಬ್ಯಾಗ್ ಕಾಣೆಯಾಗಿತ್ತು. ದೂರುದಾರರ ದೂರಿನ ಪ್ರಕಾರ, 300 ಗ್ರಾಂ ತೂಕದ ಚಿನ್ನದ ಎರಡು ಜುಮ್ಕಾಗಳು, 200 ಗ್ರಾಂ ತೂಕದ ಒಂದು ನಾಣ್ಯದ ಹಾರ, 200 ಗ್ರಾಂ ತೂಕದ ಒಂದು ಡಾಬು (ಸೊಂಟದ ಪಟ್ಟಿ) ಮತ್ತು 25 ಗ್ರಾಂ ತೂಕದ ಎರಡು ಚಿನ್ನದ ಆಭರಣಗಳು ತನ್ನ ಕೋಣೆಯಿಂದ ಕಾಣೆಯಾಗಿವೆ ಎಂದಿದ್ದಾರೆ.

ಚಿನ್ನದ ಆಭರಣದ ಬ್ಯಾಗ್ ಕಾಣೆಯಾಗಿದೆ ಎಂದು ತಿಳಿದ ಕೂಡಲೇ ಅವರು ತಮ್ಮ ಕುಟುಂಬದವರಿಗೆ ಕರೆ ಮಾಡಿ ಇಡೀ ಘಟನೆಯ ಬಗ್ಗೆ ತಿಳಿಸಿದ್ದಾರೆ. ತಾನು ರೆಡಿಯಾಗುವಾಗ ಕೋಣೆಗೆ ಸಿಬ್ಬಂದಿಯೊಬ್ಬರು ಬಂದಿದ್ದರು. ಅವರು ಈ ಕಳ್ಳತನವನ್ನು ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Gold: ತನಿಖೆ ಪ್ರಾರಂಭಿಸಿದ ಪೊಲೀಸರು

ಚಿನ್ನಾಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವೈದ್ಯೆಗೆ ಅವರ ಸಹೋದರ ಚಿನ್ನದ ಆಭರಣಗಳ ಪೆಟ್ಟಿಗೆಯನ್ನು ಹಸ್ತಾಂತರಿಸುವ ಸಮಯದಲ್ಲಿ ಅಲ್ಲಿದ್ದವರ ಬಗ್ಗೆ ವಿಚಾರಣೆ ಮಾಡುವಂತೆಯೂ ಶ್ರೀದೇವಿ ಅವರು ಮನವಿ ಮಾಡಿದ್ದಾರೆ. ಆವಲಹಳ್ಳಿ ಪೊಲೀಸರು ಬಿಎನ್‌ಎಸ್ ಸೆಕ್ಷನ್ 305 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಕೋಣೆಯ ಕೀಲಿ ಶ್ರೀದೇವಿ ಬಳಿ ಇದ್ದ ಕಾರಣ ಕಳ್ಳತನಕ್ಕೆ ಯಾವುದೇ ಕುಟುಂಬದ ಸದಸ್ಯರು ಕಾರಣರಾಗಿರಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದೂ ಹೇಳಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮತ್ತು ಶ್ರೀದೇವಿಯ ಕೋಣೆಗೆ ಪ್ರವೇಶಿಸಿದ್ದ ಕೆಲವು ಕುಟುಂಬ ಸದಸ್ಯರನ್ನು ಪ್ರಶ್ನಿಸುವ ಮೂಲಕ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಏತನ್ಮಧ್ಯೆ ಮದುವೆ ಮಂಟಪದ ವ್ಯವಸ್ಥಾಪಕ ಪ್ರಭು, ಕಳ್ಳತನದಲ್ಲಿ ಯಾವುದೇ ಸಿಬ್ಬಂದಿ ಭಾಗಿಯಾಗಿಲ್ಲ ಮತ್ತು ತನಿಖೆಯ ಸಮಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಾರೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+