Bhagyalakshmi Serial: ಭಾಗ್ಯಳ ಮಕ್ಕಳಿಗೆ ಅಧಿಕೃತವಾಗಿ ತನ್ನ ಮಕ್ಕಳ ಸ್ಥಾನ ಕೊಟ್ಟ ಆದಿ, ಆಸ್ತಿ ಹಂಚಿಕೆ ಮಾತು
Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಕುತಂತ್ರಿಗಳಿಗೆ ಆದಿ ಕೊನೆಗೂ ತಿರುಗೇಟು ಕೊಟ್ಟಿದ್ದಾನೆ. ಆದಿ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು, ಪೂಜಾ ಕಾರ್ಯಕ್ರಮದಲ್ಲಿ ಹಲವು ಘಟನೆ ನಡೆದಿದೆ. ಅದರಲ್ಲಿ ಮುಖ್ಯವಾಗಿ ಭಾಗ್ಯಲಕ್ಷ್ಮೀ ಮಗ ಭಾಗ್ಯ ಮತ್ತು ಆದಿ ಬಳಿಯೇ ಬಂದು ಪದೇ ಪದೇ ಕುಳಿತುಕೊಳ್ಳುತ್ತಿರುವುದಕ್ಕೆ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೂಜೆಯ ನಂತರ ಪೂಜಾರಿಗಳ ಬಳಿ ಆಶೀರ್ವಾದ ತೆಗೆದುಕೊಳ್ಳುವ ಸಂದರ್ಭದಲ್ಲಿ ಭಾಗ್ಯ ಮತ್ತು ಆದಿಗೆ ಶೀಘ್ರಮೇವ ಸಂತಾನ ಪ್ರಾಪ್ತಿರಸ್ತು ಎಂದು ಪೂಜಾರಿಗಳು ಆಶೀರ್ವಾದ ಮಾಡಿದ್ದಾರೆ. ಇದಕ್ಕೆ ಮನೆಯವರು ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ಆದಿಯು ತನ್ನ ಆಸ್ತಿಯನ್ನು ಹಂಚಿಕೆ ಮಾಡುವ ಬಗ್ಗೆ ಬೋಲ್ಡ್ ರಿಪ್ಲೈ ಕೊಟ್ಟಿದ್ದಾನೆ. ಅಭಾಗ್ಯಳ ಮಕ್ಕಳಿಗೆ ಅಧಿಕೃತವಾಗಿ ತನ್ನ ಮಕ್ಕಳ ಸ್ಥಾನ ಕೊಡ್ತಿದಾನೆ ಆದಿ ಎನ್ನುವ ಸಾಲುಗಳೊಂದಿಗೆ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ನ ಹೊಸ ಎಪಿಸೋಡ್ ಬಿಡುಗಡೆಯಾಗಿದೆ.

ಬಂದ ಸವಾಲುಗಳನ್ನೇಲ್ಲವನ್ನೂ ದಾಟಿ ಕೊನೆಗೂ ಆದಿ ಮನೆಯಲ್ಲಿ ಭಾಗ್ಯ ಬಂದ ಮೇಲೆ ನಡೆಯುತ್ತಿರುವ ಮೊದಲ ಶುಭ ಕಾರ್ಯಕ್ರಮ ಅಂತ್ಯವಾಗಿದೆ. ಪೂಜೆಯಲ್ಲಿ ಮುಗಿದು ಪೂಜಾರಿ ಬಳಿ ಭಾಗ್ಯ ಮತ್ತು ಆದಿ ಇಬ್ಬರೂ ಸೇರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಶುಭ ಹಾರೈಸುವ ಸಂದರ್ಭದಲ್ಲಿ ಪೂಜಾರಿ ಸಂತಾನ ಪ್ರಾಪ್ತಿರಸ್ತು ಎಂದಿದ್ದಾರೆ. ಇದಕ್ಕೆ ಆದಿ ಮನೆಯಲ್ಲಿರುವ ಸೋದರ ಅತ್ತೆ - ಅಕ್ಷತಾ ಈಗಾಗಲೇ ಆದಿಗೆ ಪ್ಯಾಕೇಜ್ ರೀತಿ ಒಂದಿಡೀ ಕುಟುಂಬವೇ ಸಿಕ್ಕಿದೆ ಅಂತ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಆದಿ ಸರಿಯಾಗಿ ಹೇಳಿದೆ ಅಕ್ಷತಾ.. ಈಗಾಗಲೇ ನನಗೆ ಒಳ್ಳೆಯ ಕುಟುಂಬ ಸಿಕ್ಕಿದೆ. ಎರಡು ಮುದ್ದಾದ ಮಕ್ಕಳು ಇದ್ದಾರೆ. ನನಗೆ ಗೊತ್ತು ನಿಮಗೆ ಅನುಮಾನ ಇದೆ ಅಂತ. ಆದರೆ ನಾನು ಬಾಂಡ್ ಪೇಪರ್‌ನ ಮೇಲೆ ಬರೆದುಕೊಡುತ್ತೇನೆ. ನನ್ನ ಜೀವನದಲ್ಲಿ ಏನೆಲ್ಲ ಗಳಿಸಿದ್ದೇನೋ ಅದೆಲ್ಲವನ್ನೂ ಅದನ್ನು ನನ್ನ ಮಕ್ಕಳ ಹೆಸರಿಗೆ ಬರೆಯುತ್ತೇನೆ ಎಂದು ಆದಿ ಹೇಳಿದ್ದಾನೆ.
ಮುಂದುವರಿದು ಇಷ್ಟು ದಿನ ನಾನು ದುಡಿದಿದ್ದೇಲ್ಲವೂ ಕನ್ನಿಕಾ ಹೆಸರಿಗೆ ಬರೆದುಕೊಟ್ಟೆ, ಆದರೆ ಇನ್ನು ಮೇಲೆ ನನ್ನ ಜೀವನದಲ್ಲಿ ದುಡಿಯುವುದೆಲ್ಲವೂ ನನ್ನ ಮಕ್ಕಳಿಗೆ ಸೇರಿದ್ದು ಅಂತ ಆದಿ ಹೇಳಿದ್ದಾನೆ. ಇದಕ್ಕೆ ಆದಿ ಮನೆಯವರೆಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ.












Click it and Unblock the Notifications