2018 ಅಸ್ತಮ-2019 ಉದಯ, ಸಂಭ್ರಮದ ಹೊಸ ವರ್ಷಾಚರಣೆ
ಬೆಂಗಳೂರು, ಜನವರಿ ೦1: 2018 ಅಸ್ತಮಿಸಿ ಹೊಸ ವರ್ಷ 2019ರ ಉದಯವಾಗಿದೆ. ಎಲ್ಲೆಡೆ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಎಂಜಿ ರೋಡಿನಲ್ಲಿ ಹೊಸ ವರ್ಷದ ಆಚರಣೆ ಕಳೆ ಕಟ್ಟಿದೆ.
ಪೊಲೀಸರ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಬಿಗಿ ಭದ್ರತೆಯಿಂದಾಗಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಶಾಂತಿಯಿಂದ ಆಚರಿಸಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು ಎಂಜಿ ರಸ್ತೆಯಲ್ಲಿ ಒಟ್ಟಾಗಿ ಹೊಸ ವರ್ಷ ಆಚರಿಸಿದರು. ಬೆಂಗಳೂರಿನಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಹೊಸ ವರ್ಷಚರಣೆ ಆಚರಿಸಲಾಯಿತು.
ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿ ಆಗಿಲ್ಲ. ರಾಜ್ಯದೆಲ್ಲೆಡೆ ಬಹುತೇಕ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ನಡೆದಿದೆ.












Click it and Unblock the Notifications