ಪಾಸ್ ಇಲ್ಲದ ವಿದ್ಯಾರ್ಥಿಗಳಿಗೂ ಕೆಎಸ್ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ
ಬೆಂಗಳೂರು, ಜೂನ್ 09 : ವಿದ್ಯಾರ್ಥಿ ಬಸ್ ಪಾಸ್ ಇಲ್ಲದವರೂ ಕೆಎಸ್ಆರ್‌ಟಿಸಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಜೂನ್ 30ರ ತನಕ ಉಚಿತವಾಗಿ ಪ್ರಯಾಣ ಮಾಡಲು ಸಂಸ್ಥೆ ಅವಕಾಶ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಈ ಕುರಿತು ಪ್ರಕಟಣೆ ಹೊರಡಿಸಿದೆ. ಬಸ್ ಪಾಸ್ ಇಲ್ಲದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಜೂನ್ 30ರ ತನಕ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
2018-19ನೇ ಸಾಲಿನ ಬಸ್ ಪಾಸ್ ಇರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಜೂನ್ 30ರ ತನಕ ಉಚಿತವಾಗಿ ಪ್ರಯಾಣಿಸಲು ಕೆಎಸ್ಆರ್‌ಟಿಸಿ ಅನುಮತಿ ನೀಡಿತ್ತು. ಈ ಶೈಕ್ಷಣಿಕ ವರ್ಷ ಶಾಲೆ, ಕಾಲೇಜು ಸೇರಿದ ವಿದ್ಯಾರ್ಥಿಗಳಿಗೂ ಈಗ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

2019-20ನೇ ಸಾಲಿನಲ್ಲಿ ಹೊಸದಾಗಿ ಶಾಲೆ-ಕಾಲೇಜು ಸೇರಿದವರಿಗೆ ಅನುಕೂಲ ಮಾಡಿಕೊಡಲು ಕೆಎಸ್ಆರ್‌ಟಿಸಿ ಈ ಆದೇಶವನ್ನು ಹೊರಡಿಸಿದೆ. ಜೂನ್ 30ರ ತನಕ ಮಾತ್ರ ಈ ಆದೇಶ ಜಾರಿಯಲ್ಲಿರುತ್ತದೆ.
ಹೊಸದಾಗಿ ಶಾಲಾ-ಕಾಲೇಜಿಗೆ ಸೇರಿದವರು ಬೋಧನಾ ಶುಲ್ಕದ ರಸೀದಿ ಅಥವ ಗುರುತಿನ ಚೀಟಿ ತೋರಿಸಿ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.












Click it and Unblock the Notifications