Property: ಪ್ರಾಪರ್ಟಿದಾರರಿಗೆ ಸರ್ಕಾರದಿಂದ ಹೊಸ ಶಾಕ್: ಈ ತಪ್ಪಾದರೆ ಆಸ್ತಿಯೇ ಉಳಿಯಲ್ಲ!
Property: ಪ್ರಾಪರ್ಟಿದಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸ ಶಾಕ್‌ವೊಂದನ್ನು ಕೊಟ್ಟಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ಆಸ್ತಿಗಳಿಗೂ ಇ - ಖಾತಾ (ಡಿಜಿಟಲ್ ಖಾತಾ)ವನ್ನು ಕಡ್ಡಾಯ ಮಾಡಲಾಗಿದೆ. ಮುಂದುವರಿದು ಆಸ್ತಿದಾರರಿಗೆ ಹಲವು ಹೊಸ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಹಾಗೂ ಆಸ್ತಿ ಮತ್ತು ಕಟ್ಟಡ ನಿರ್ಮಾಣದ ವಿಚಾರದಲ್ಲಿ ತಪ್ಪು ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಮತ್ತೊಂದು ಶಾಕ್ ನೀಡಲಾಗಿದ್ದು. ಇದು ಆಸ್ತಿದಾರರಲ್ಲಿ ಆತಂಕವನ್ನು ಉಂಟು ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಆದಾಯವನ್ನು ಹೆಚ್ಚಿಸಿಕೊಳ್ಳಲು ವಿವಿಧ ಇಲಾಖೆಗಳಲ್ಲಿ ಕಠಿಣ ನಿಯಮವನ್ನು ಅನುಸರಿಸುತ್ತಿದೆ. ಇದೀಗ ಇದೇ ಮಾದರಿಯನ್ನು ಆಸ್ತಿ ವಿಚಾರದಲ್ಲೂ ತೆಗೆದುಕೊಂಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಹಲವು ಕಠಿಣ ನಿಯಮಗಳನ್ನು ರೂಪಿಸಿದೆ. ಇದಕ್ಕೆ ಮುಖ್ಯ ಕಾರಣ ಕೆಲವು ಆಸ್ತಿದಾರರು ವರ್ಷಗಳಾದರೂ ರಾಜ್ಯದ ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರವು ಕಠಿಣ ನಿಯಮವನ್ನು ರೂಪಿಸಿದ್ದು. ಇದನ್ನು ರಾಜ್ಯದಾದ್ಯಂತ ಜಾರಿ ಮಾಡಲು ಮುಂದಾಗಿದೆ.

ಈಗಾಗಲೇ ಈ ಹೊಸ ನಿಯಮವನ್ನು ರಾಜ್ಯದ ಪ್ರಮುಖ ಸ್ಥಳೀಯ ಸಂಸ್ಥೆಗಳಲ್ಲಿ ಒಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡ ಮಾದರಿಯನ್ನೇ ಇದೀಗ ರಾಜ್ಯದ ಎಲ್ಲಾ ಆಸ್ತಿಗಳ ಮೇಲೂ ಪ್ರಯೋಗಿಸಲು ಮುಂದಾಗಿದೆ. ಆ ಪ್ರಯೋಗದ ವಿವರ ನೋಡೋಣ.
ಆಸ್ತಿದಾರರಿಗೆ ಬಿಗ್ ಶಾಕ್: ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿದಾರರು ಅಂದಾಜು ಸಹ ಮಾಡಲಾಗದ ಶಾಕ್‌ವೊಂದನ್ನು ಕೊಟ್ಟಿದೆ. ಅದೇ ಬೆಂಗಳೂರಿನಲ್ಲಿ ಆಸ್ತಿ ಬಾಕಿ ಉಳಿಸಿಕೊಂಡಿರುವವರ ಆಸ್ತಿ ಹರಾಜು ಮಾಡಿ ಅವರ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕುವ ವಿಧಾನದಲ್ಲಿಯೇ ರಾಜ್ಯದ ಎಲ್ಲಾ ಟೈಯರ್ ಟೂ ಸಿಟಿಸ್, ಪಟ್ಟಣಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಆಸ್ತಿದಾರರಿಗೆ ನಡುಕವುಂಟಾಗಿದೆ.
ಯಾರೆಲ್ಲ ಸುದೀರ್ಘ ಅವಧಿಯಿಂದ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೋ ಅವರ ಆಸ್ತಿಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಹರಾಜು ಹಾಕಿ ವಶಪಡಿಸಿಕೊಳ್ಳುವುದು ಹಾಗೂ ಅದರಿಂದ ಬರುವ ಹಣದಲ್ಲಿ ಆಸ್ತಿ ತೆರಿಗೆಯನ್ನು ಮನ್ನಾ ಮಾಡಿಕೊಳ್ಳುವುದು ಸರ್ಕಾರದ ಪ್ಲ್ಯಾನ್ ಆಗಿದೆ. ಇನ್ನು ಈ ರೀತಿ ಹರಾಜಿನಿಂದ ಬಂದ ಬಾಕಿ ಮೊತ್ತವನ್ನು ಆಸ್ತಿದಾರರ ಖಾತೆಗೇ ಜಮೆ ಮಾಡಲಾಗುತ್ತದೆ. ಇನ್ನು ಈ ಕಾನೂನನ್ನು ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರು ಎಂಟು ವಲಯಗಳ 608 ಆಸ್ತಿದಾರರಿಗೆ ಕೊನೆಯ ವಾರೆಂಟ್ ನೀಡಲಾಗಿದೆ. ಇನ್ನು ಇದೀಗ ರಾಜ್ಯದಾದ್ಯಂತ ಇದೇ ಮಾದರಿ ಅನುಸರಿಸಲು ಮುಂದಾಗಿದ್ದು. ರಾಜ್ಯದಲ್ಲಿ ಭಾರೀ ಆಸ್ತಿ ಮೊತ್ತ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್ ಎದುರಾಗಿದೆ.
ಹಲವು ಲಕ್ಷ ಆಸ್ತಿದಾರರಿಂದ ಬಾಕಿ: ಇನ್ನು ರಾಜ್ಯದಲ್ಲಿ ಲಕ್ಷಾಂತರ ಜನ ಆಸ್ತಿದಾರರು ರಾಜ್ಯ ಸರ್ಕಾರಕ್ಕೆ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ 608 ಆಸ್ತಿಗಳನ್ನು ಹರಾಜು ಹಾಕುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದೇ ಮಾದರಿಯನ್ನು ರಾಜ್ಯದಾದ್ಯಂತ ಜಾರಿ ಮಾಡಲು ಮುಂದಾಗಿದೆ.












Click it and Unblock the Notifications