SWR: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇಂದು ಉತ್ತರ ಕರ್ನಾಟಕದ ಹೊಸ ರೈಲ್ವೆ ಮಾರ್ಗ & ಪ್ಯಾಸೆಂಜರ್ ರೈಲಿಗೆ ಚಾಲನೆ
ಬೆಂಗಳೂರು, ಮೇ 15: ಉತ್ತರ ಕರ್ನಾಟಕ ಭಾಗಕ್ಕೆ ವಿವಿಧ ರೈಲು ಯೋಜನೆಗೆ ಹಾಗೂ ಹೊಸ ರೈಲುಗಳಿಗೆ ಇಂದು ಗುರವಾರ ಚಾಲನೆ ದೊರೆಯುತ್ತಿದೆ. ಅಲ್ಲದೇ ಹೊಸ ರೈಲು ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಇಲ್ಲಿ ರೈಲ್ವೆ ಮೂಲಭೂರ್ತಿ ಸೌಕರ್ಯಗಳು ಸುಧಾರಣೆಗೊಳಿಸಲಾಗುತ್ತಿದೆ. ಹೊಸ ಪ್ಯಾಸೆಂಜರ್ ರೈಲು ಇಂದಿನಿಂದ ಸೇವೆ ಆರಂಭಿಸಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇಂದು ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕುಷ್ಟಗಿ ರೈಲು ನಿಲ್ದಾಣ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನ ರೈಲು ನಿಲ್ದಾಣದಲ್ಲಿ ಮಹತ್ವದ ಕಾರ್ಯಕ್ರಮ ಜರುಗಲಿವೆ. ಈ ರೈಲ್ವೆ ಯೋಜನೆಗಳಿಂದ ಗದಗ, ಹುಬ್ಬಳ್ಳಿ, ಧಾರವಾಡ, ರಾಚಯೂರು, ಕೊಪ್ಪಳ, ಸಿಂಧನೂರು ಭಾಗದ ಜನರಿಗೆ ಅನುಕೂಲವಾಗಲಿದೆ. ಕೈಗಾರಿಕೆ, ಕೃಷಿ ಸೇರಿದಂತೆ ಇತರ ವಲಯಗಳಲ್ಲಿ ಸುಧಾರಣೆ ಆಗಲಿದೆ.

ಇಂದು ಸಚಿವರು ಕುಷ್ಟಗಿ ರೈಲು ನಿಲ್ದಾಣದಲ್ಲಿ 56 ಕಿಲೋ ಮೀಟರ್ ಉದ್ದದ ಗದಗ (ತಳಕಲ್ಲ) - ಕುಷ್ಟಗಿ ಹೊಸ ರೈಲು ಮಾರ್ಗದ (ಗದಗ (ತಳಕಲ್ಲ) - ವಾಡಿ ಹೊಸ ರೈಲು ಮಾರ್ಗದ ಯೋಜನೆ) ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಕುಷ್ಟಗಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು (17328) ಸೇವೆಗೆ ಹಸಿರು ನಿಶಾನೆ ನೀಡಲಿದ್ದಾರೆ.
ಇನ್ನೂ ಸಿಂಧನೂರು ವ್ಯಾಪ್ತಿಯಲ್ಲಿ 81 ಕಿಲೋ ಮೀಟರ್ ಹೊಸ ಸಿಂಧನೂರು-ರಾಯಚೂರು (ಮುನಿರಾಬಾದ್ (ಗಿಣಿಗೇರಾ) - ರಾಯಚೂರು ಹೊಸ ರೈಲು ಮಾರ್ಗದ ಯೋಜನೆ) ಹೊಸ ಮಾರ್ಗಕ್ಕೆ ಇಂದು ಶಂಕುಸ್ಥಾಪನೆಯನ್ನು ವಿ.ಸೋಮಣ್ಣ ಅವರು ನೆರವೇರಿಸಲಿದ್ದಾರೆ.
ಬಹು ನಿರೀಕ್ಷೆಯ ಹೊಸ ರೈಲ್ವೆ ಯೋಜನೆಗಳಿಂದ ಉತ್ತರ ಕರ್ನಾಟಕದ ರೈಲ್ವೆ ಮೂಲಸೌಕರ್ಯಗಳು ಅಭಿವೃದ್ಧಿ ಆಗಲಿವೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ನಿರೀಕ್ಷೆ ಇದೆ. ಕುಷ್ಟಗಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ (17328) ನಿತ್ಯ ಸಾವಿರಾರು ಜನರು ಪ್ರಯಾಣ ಮಾಡಲಿದ್ದಾರೆ.
ಉತ್ತರ ಕರ್ನಾಟಕದಲ್ಲಿ ರೈಲ್ವೆ ಪ್ರಯಾಣಿಕರ ಹೆಚ್ಚಿನ ಅನುಕೂಲತೆಗಾಗಿ ಮೂಲಭೂತ ಸೌಕರ್ಯದ ಸುಧಾರಣೆ :
— South Western Railway (@SWRRLY) May 15, 2025
ಮಾನ್ಯ ಸಚಿವರಾದ ಶ್ರೀ @VSOMANNA_BJP ಅವರಿಂದ ಕುಷ್ಟಗಿ ನಿಲ್ದಾಣದಲ್ಲಿ ಗದಗ (ತಳಕಲ್ಲ) - ಕುಷ್ಟಗಿ (56 ಕಿಮೀ) ಹೊಸ ರೈಲು ಮಾರ್ಗದ (ಗದಗ (ತಳಕಲ್ಲ) - ವಾಡಿ ಹೊಸ ರೈಲು ಮಾರ್ಗದ ಯೋಜನೆ) ಉದ್ಘಾಟನೆ ಹಾಗೂ ರೈಲು ಸಂಖ್ಯೆ. 17328 ಕುಷ್ಟಗಿ -… pic.twitter.com/VRkgmuuiuM
ರೈಲ್ವೆ ಯೋಜನೆಗಳ ಪ್ರಯೋಜನಗಳು
* ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳನ್ನು ಪ್ರಮುಖ ರೈಲ್ವೆ ಜಂಕ್ಷನ್ಗಳಿಗೆ ಸಂಪರ್ಕಿಸುವ ಹುಬ್ಬಳ್ಳಿ, ಗದಗ ಮತ್ತು ಕುಷ್ಟಗಿ ನಡುವೆ ನೇರ ರೈಲು ಸಂಪರ್ಕ ಒದಗಿಸಲಿದೆ.
* ಉದ್ಯೋಗ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸ್ಥಳೀಯ ಆರ್ಥಿಕ ಮತ್ತು ಕೃಷಿಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
* ಕುಷ್ಟಗಿ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಡುವಿನ ದೈನಂದಿನ ಹೊಸ ಪ್ಯಾಸೆಂಜರ್ ರೈಲಿನಿಂದ ಪ್ರಯಾಣದ ಸಮಯ ಮತ್ತು ವೆಚ್ಚಗಳು ಕಡಿಮೆ ಆಗಿರುವ ಕಾರಣ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ನೌಕರರಿಗೆ ಪ್ರಯೋಜನಕಾರಿಯಾಗಲಿದೆ.
* ಸಿಂಧನೂರು ಮತ್ತು ರಾಯಚೂರು ನಡುವೆ ನೇರ ರೈಲು ಸಂಪರ್ಕವನ್ನು ಸ್ಥಾಪಿಸುವುದರಿಂದ ಸಾರಿಗೆ ಸೌಕರ್ಯವನ್ನು ಹೆಚ್ಚಿಸುತ್ತದೆ.
* ರಸ್ತೆಯಿಂದ ರೈಲು ಸಾರಿಗೆಗೆ ಬದಲಿಸುವುದನ್ನು ಉತ್ತೇಜಿಸುವುದ ರಿಂದ ಕಾರ್ಬನ್ ಎಮಿಷನ್ ಅನ್ನು ಕಡಿಮೆಗೊಳಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.
* ಕುಷ್ಟಗಿ, ಗದಗ, ಸಿಂಧನೂರು, ರಾಚಯೂರು ಪ್ರದೇಶದ ಸ್ಥಳೀಯ ಜನತೆಯ ಬಹು ಕಾಲದ ಬೇಡಿಕೆಯನ್ನು ಪೂರೈಸಿದಂತಾಗುತ್ತದೆ.












Click it and Unblock the Notifications