Property New Good News: ಆಸ್ತಿದಾರರಿಗೆ ಆಸ್ತಿ ತೆರಿಗೆ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್‌, ಡಿಸ್ಕೌಂಟ್ ದಿನಾಂಕ ವಿಸ್ತರಣೆ!

Property Tax: ಕರ್ನಾಟಕ ಸರ್ಕಾರವು ರಾಜ್ಯದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ರಾಜ್ಯದಲ್ಲಿ ಎ ಖಾತಾ, ಬಿ ಖಾತಾ ಹಾಗೂ ಇ ಖಾತಾಗಳ ಸೌಲಭ್ಯದ ನಂತರ ಆಸ್ತಿದಾರರಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಸರ್ಕಾರವು ಎಲ್ಲಾ ಆಸ್ತಿದಾರರಿಗೆ ಆಸ್ತಿ ತೆರಿಗೆ ಪಾವತಿಯ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಈ ಡಿಸ್ಕೌಂಟ್‌ನಿಂದಾಗಿ ಆಸ್ತಿದಾರರಿಗೆ ಭಾರೀ ಲಾಭವಾಗಲಿದೆ ಅಂತಲೇ ಹೇಳಲಾಗುತ್ತಿದೆ. ಈ ಹೊಸ ನೀತಿಯಿಂದಾಗಿ ಮನೆ, ಅಪಾರ್ಟ್ಮೆಂಟ್, ಕಮರ್ಷಿಯಲ್ ಪ್ರಾಪರ್ಟಿ ಹಾಗೂ ಖಾಲಿ ಜಮೀನುಗಳನ್ನು ಹೊಂದಿರುವ ಆಸ್ತಿ ಮಾಲೀಕರಿಗೂ ಲಾಭವಾಗಲಿದೆ. ಇಷ್ಟಕ್ಕೂ ರಾಜ್ಯ ಸರ್ಕಾರವು ಆಸ್ತಿದಾರರಿಗೆ ನೀಡಿರುವ ಗುಡ್‌ನ್ಯೂಸ್‌ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಮತ್ತೊಮ್ಮೆ ಗುಡ್‌ನ್ಯೂಸ್‌ ನೀಡಿದೆ. ಇದು ಬೆಂಗಳೂರಿನ ಆಸ್ತಿದಾರರು ಸೇರಿದಂತೆ ರಾಜ್ಯದಾದ್ಯಂತ ಇರುವ ಆಸ್ತಿದಾರರಿಗೆ ಅನ್ವಯವಾಗಲಿದೆ. ಇದು ಕರ್ನಾಟಕದ ನಗರಸಭೆ, ನಗರಪಾಲಿಕೆ ಹಾಗೂ ನಗರ ನಿಗಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳಿಗೂ ಅನ್ವಯವಾಗಲಿದೆ. ಈ ಮೂಲಕ ಈ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿದಾರರಿಗೂ ಆಸ್ತಿ ತೆರಿಗೆಯ ಮೇಲೆ ಭರ್ಜರಿ ರಿಯಾಯಿತಿ ಸಿಗಲಿದೆ. ನೀವು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದರೆ ನಿಮಗೆ ಈ ರಿಯಾಯಿತಿ ಸಿಗಲಿದೆ. ಯಾವ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿ ಸಿಗಲಿದೆ, ಎಷ್ಟು ಪ್ರಮಾಣದಲ್ಲಿ ಇರಲಿದೆ ಹಾಗೂ ಇದು ಸಿಗಬೇಕಾದರೆ ಏನೆಲ್ಲಾ ಮಾಡಬೇಕು ಎನ್ನುವ ಸಂಪೂರ್ಣ ವಿವರ ನೋಡೋಣ..

New Good News for property owners regarding property tax 5 discount on property tax till June 30th

2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆಯೇ ಮೇಲೆ ಈಗಾಗಲೇ ಶೇ 5% ರಷ್ಟು ರಿಯಾಯಿತಿ (ಡಿಸ್ಕೌಂಟ್) ನೀಡುವುದಾಗಿ ಘೋಷಿಸಲಾಗಿತ್ತು. ಅದನ್ನು ಇದೀಗ ಜೂನ್ 30, 2025ರ ಅವಧಿಯ ವರೆಗೆ ವಿಸ್ತರಿಸಲಾಗಿದೆ. ಈ ಹೊಸ ಆಸ್ತಿ ತೆರಿಗೆ ಡಿಸ್ಕೌಂಟ್ ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದರೆ ಮಾತ್ರ ಅನ್ವಯವಾಗಲಿದೆ. ಎಲ್ಲಾ ಆಸ್ತಿದಾರರಿಗೂ ಶೇ 5% ರಿಯಾಯಿತಿ ಸಿಗಲಿದೆ.

ಬೆಂಗಳೂರಿನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ ಲಕ್ಷಾಂತರ ಆಸ್ತಿಗಳು ಹೊಸದಾಗಿ ಸೇರ್ಪಡೆ ಆಗಿವೆ. ಇನ್ನು ಆಸ್ತಿ ತೆರಿಗೆಯಲ್ಲಿರುವ ಆಸ್ತಿಗಳ ಸಂಖ್ಯೆ ಭರ್ಜರಿ ಹೆಚ್ಚಳವಾಗಿದೆ. ಹೌದು ಇ ಖಾತಾ ಹಾಗೂ ಯಾವುದೇ ಖಾತಾ ಇಲ್ಲದೆ ಇರುವವರಿಗೆ ಬಿ ಖಾತಾ ನೀಡಲು ಪ್ರಾರಂಭವಾದ ಮೇಲೆ ಬಿಬಿಎಂಪಿ ವ್ಯಾಪ್ತಿಯೊಂದರಲ್ಲೇ ಲಕ್ಷಾಂತರ ಆಸ್ತಿದಾರರು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಆಸ್ತಿ ತೆರಿಗೆ ಪ್ರಮಾಣ ಬಿಬಿಎಂಪಿ ಸೇರಿದಂತೆ ವಿವಿಧ ಪಾಲಿಕೆಗಳಿಗೆ ಹೆಚ್ಚಳವಾಗಿದೆ. ಇದೀಗ ಸರ್ಕಾರವು ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ.

ಆಸ್ತಿ ಮಾಲೀಕರು ತೆರಿಗೆ ಪಾವತಿಯಲ್ಲಿ ಸಾಲದ ಸಮಸ್ಯೆ, ಆರ್ಥಿಕ ಒತ್ತಡ ಹಾಗೂ ತಾಂತ್ರಿಕ ಸಮಸ್ಯೆ ಎದುರಾಗಿರುವುದು ಸೇರಿದಂತೆ ಹಲವು ಕಾರಣಗಳಿಗೆ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಆದರೆ, ಈ ರಿಯಾಯಿತಿಯು ಆಸ್ತಿದಾರರಿಗೆ ಕೇವಲ ಮೂಲ ತೆರಿಗೆ ಮೇಲೆ ಮಾತ್ರ ಅನ್ವಯವಾಗಲಿದೆ. ಇತರೆ ಶುಲ್ಕಗಳಿಗೆ ಈ ರಿಯಾಯಿತಿ ಇರುವುದಿಲ್ಲ ಹಾಗೂ ಆಸ್ತಿದಾರರಿಗೆ ಈಗಾಗಲೇ ಹಳೆಯ ಬಾಕಿ ಇದ್ದರೆ ಅದಕ್ಕೂ ಈಗ ಸರ್ಕಾರ ಘೋಷಿಸಿರುವ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.

ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸಾಧ್ಯತೆ: ಇನ್ನು ರಾಜ್ಯ ಸರ್ಕಾರವು ರಾಜ್ಯದ ಆಸ್ತಿದಾರರಿಗೆ ಗುಡ್‌ನ್ಯೂಸ್‌ ನೀಡಿದ್ದು. ಮುಂದಿನ ದಿನಗಳಲ್ಲಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇದೆ. ಆಸ್ತಿ ತೆರಿಗೆ ರಿಯಾಯಿತಿಯನ್ನು ಬಳಸಿಕೊಂಡರೆ ಆಸ್ತಿ ತೆರಿಗೆ ಮೊತ್ತ ಕಡಿಮೆ ಆಗಲಿದ್ದು, ಆಸ್ತಿದಾರರು ಹಣ ಉಳಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+