ಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಸಿಕ್ತು ಪರಿಹಾರ!

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 13 : ರಾಜ್ಯದಲ್ಲಿ ಕೆಲವು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಕೆಪಿಟಿಸಿಎಲ್ ವಿದ್ಯುತ್ ಸಮಸ್ಯೆ ಬಗೆ ಹರಿಸಲು 500 ಮೆಗಾವಾಟ್ ವಿದ್ಯುತ್ ಖರೀದಿ ಮಾಡಿದೆ. ಇದರಲ್ಲಿ 250 ಮೆಗಾವಾಟ್ ವಿದ್ಯುತ್ ಬೆಸ್ಕಾಂಗೆ ಸಿಗಲಿದೆ.

ಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಕಾರಣ ಬಹಿರಂಗ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 500 ಮೆಗಾವಾಟ್ ವಿದ್ಯುತ್ ಖರೀದಿ ಮಾಡಲು ಟೆಂಡರ್ ಕರೆದಿತ್ತು. ಜೆಎಸ್‌ಡಬ್ಲ್ಯೂ ಎನರ್ಜಿ (200), ಗ್ಲೋಬಲ್ ಎನರ್ಜಿ ಪ್ರೈ.ಲಿ. (300) ಮೆಗಾವಾಟ್ ವಿದ್ಯುತ್ ಒದಗಿಸಲು ಟೆಂಡರ್ ಪಡೆದಿವೆ.

Need not to worry about load shedding

ಪ್ರತಿ ಯೂನಿಟ್‌ಗೆ 4.11 ರೂ. ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. 500 ಮೆಗಾವಾಟ್ ವಿದ್ಯುತ್‌ನಲ್ಲಿ 250 ಮೆಗಾವಾಟ್ ವಿದ್ಯುತ್ ಬೆಸ್ಕಾಂಗೆ ಪೂರೈಕೆಯಾಗಲಿದೆ.

ಅನಿಯಮಿತ ಲೋಡ್‌ ಶೆಡ್ಡಿಂಗ್‌ಗೆ ಕಾರಣ ಬಹಿರಂಗ

ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಕೆಪಿಟಿಸಿಎಲ್ 1 ಮಿಲಿಯನ್ ಟನ್ ವಿದ್ಯುತ್‌ ಅನ್ನು ಜಾಗತಿಕ ಟೆಂಡರ್ ಮೂಲಕ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

500 ಮೆಗಾವಾಟ್ ವಿದ್ಯುತ್‌ನಲ್ಲಿ 250 ಮೆಗಾವಾಟ್ ವಿದ್ಯುತ್ ಬೆಸ್ಕಾಂಗೆ ಸಿಗುವುದರಿಂದ ಬೇಸಿಗೆಯಲ್ಲಿ ನಗರದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಇರುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Need not to worry about load shedding. Karnataka Power Transmission Corporation Limited (KPTCL) has purchased 500 MW of power, of which 250 MW will be given to Bescom alone.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ