Karnataka MLC Election 2024: ಕಾಂಗ್ರೆಸ್‌ನಲ್ಲಿ 7 ಎಂಎಲ್‌ಸಿ ಸ್ಥಾನಕ್ಕೆ ಸುಮಾರು 100 ಆಕಾಂಕ್ಷಿಗಳು!
ಬೆಂಗಳೂರು, ಮೇ. 26: ವಿಧಾನಸಭೆಯಿಂದ ಚುನಾಯಿತರಾಗಲಿರುವ 11 ಎಂಎಲ್‌ಸಿ ಸ್ಥಾನಗಳಿಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರಾವಧಿಯು ಮುಂದಿನ ತಿಂಗಳು ಮುಗಿಯಲಿದೆ. ಮುಂದಿನ ತಿಂಗಳ ಜೂನ್ 13 ರಂದು ಚುಣಾವಣೆ ನಡೆಯಲಿದೆ.
ಈ ಹನ್ನೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಳು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಬಹುದು. ಈ ಏಳು ಸ್ಥಾನಗಳಿಗೆ ಸುಮಾರು 100 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಲಾಬಿ ತೀವ್ರಗೊಂಡಿದೆ. ವಿವಿಧ ಕ್ಷೇತ್ರಗಳ ನಾಯಕರಿಂದ ಕೆಲವು ಅಭ್ಯರ್ಥಿಗಳ ಪರವಾಗಿ ಶಿಫಾರಸುಗಳು ಬರುತ್ತಿವೆ.

ವಿವಿಧ ಕಾಂಗ್ರೆಸ್ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಎಂದು ಹೇಳುತ್ತಿದ್ದರೇ, ಪ್ರಭಾವಿ ಧಾರ್ಮಿಕ ಮುಖ್ಯಸ್ಥರು ಕೆಲವು 'ಅರ್ಹ' ಅಭ್ಯರ್ಥಿಗಳನ್ನು ಬೆಂಬಲಿಸಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನೇ ಆಯ್ಕೆ ಮಾಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
ಹೆಸರಾಂತ ಉದ್ಯಮಿಯೊಬ್ಬರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಇಮೇಲ್ ಮಾಡಿದ್ದಾರೆ ಎಂದು ಮೂಲಗಳು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮುಸ್ಲಿಮರ ನಿಯೋಗ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದೆ.
ರಾಜ್ಯಕ್ಕೆ ನಾಳೆ ರಣದೀಪ್ ಸಿಂಗ್ ಸುರ್ಜೇವಾಲಾ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ. ನವದೆಹಲಿಯಲ್ಲಿ ಹೈಕಮಾಂಡ್ ಅಂತಿಮಗೊಳಿಸಲಿರುವ ಅಭ್ಯರ್ಥಿಗಳನ್ನು ಇಲ್ಲಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮೇ 28 ಮತ್ತು ಮೇ 29 ರಂದು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿ ಪಟ್ಟಿಯನ್ನು ಚರ್ಚಿಸುವ ಸಾಧ್ಯತೆಯಿದೆ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಅವರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಪೂರ್ವದಲ್ಲಿ ಕೆಲ ಆಕಾಂಕ್ಷಿಗಳಿಗೆ ಎಂಎಲ್‌ಸಿ ಸ್ಥಾನ ನೀಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಇಬ್ಬರು ನಾಯಕರ ನಿವಾಸಗಳಲ್ಲಿ ಇದೀಗ ಆಕಾಂಕ್ಷಿಗಳ ದಂಡು ಬಂದು ನಿಂತಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಎಂಎಲ್‌ಸಿ ಸ್ಥಾನ
ಸಿಎಂ ಸಿದ್ದರಾಮಯ್ಯ ಅವರಿಗಾಗಿ ತಮ್ಮ ಕ್ಷೇತ್ರ ತ್ಯಾಗ ಮಾಡಿದ್ದ ಪುತ್ರ ಡಾ.ಯತೀಂದ್ರ ಅವರಿಗೆ ಪಕ್ಷ ಎಂಎಲ್‌ಸಿ ಸ್ಥಾನ ನೀಡಲಿದೆ ಎನ್ನಲಾಗಿದೆ. ಸಚಿವ ಎನ್.ಎಸ್.ಬೋಸರಾಜು ಅವರಿಗೆ ಪಕ್ಷದ ಹೈಕಮಾಂಡ್ ಎಂಎಲ್ಸಿ ಸ್ಥಾನದ ಭರವಸೆ ನೀಡಿದ್ದರಿಂದ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ. ಎಸ್‌ಸಿ/ಎಸ್‌ಟಿ, ಒಬಿಸಿ, ವೀರಶೈವ ಲಿಂಗಾಯತ, ಒಕ್ಕಲಿಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಉಳಿದ ಐದು ಸ್ಥಾನಗಳನ್ನು ಹಂಚಿಕೆ ಮಾಡುವಲ್ಲಿ ಹೈಕಮಾಂಡ್ ಜಾತಿ ಸಮತೋಲನ ಕಾಪಾಡಲು ಮುಂದಾಗಿದೆ.
ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ವಿ.ಎಸ್.ಉಗ್ರಪ್ಪ, ಡಾ.ಬಿ.ಸಿ.ಮುದ್ದುಗಂಗಾಧರ್, ಎಂ.ಎಸ್.ಬಸವರಾಜ್, ಎ.ವಸಂತಕುಮಾರ್ ಮತ್ತು ಡಾ.ಬಿ.ಪುಷ್ಪಾ ಅಮರನಾಥ್ (ಎಸ್‌ಸಿ/ಎಸ್‌ಟಿ), ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಮತ್ತು ಮಾಜಿ ಸಚಿವ ಆರ್.ಶಂಕರ್ (ಒಬಿಸಿ), ರಾಣಿ ಸತೀಶ್ ಮತ್ತು ವೀಣಾ ಕಾಶಪ್ಪನವರ್ (ವೀರಶೈವ ಲಿಂಗಾಯತ), ಎಎನ್ ನಟರಾಜೇಗೌಡ, ಎಂ ನಾರಾಯಣಸ್ವಾಮಿ, ಕುಸುಮಾ ಹನುಮಂತರಾಯಪ್ಪ ಮತ್ತು ವಿನಯ್ ಕಾರ್ತಿಕ್ (ಒಕ್ಕಲಿಗ), ಎಸ್‌ಎ ಹುಸೇನ್, ಜಿಎ ಬಾವ ಮತ್ತು ಆಗಾ ಸುಲ್ತಾನ್ (ಮುಸ್ಲೀಮರು) ಸ್ಪರ್ಧೆಯಲ್ಲಿದ್ದಾರೆ.
ಬ್ರಾಹ್ಮಣರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಕೆ ಮುಳಗುಂದ ಅವರು ಕೂಡ ನಾಮನಿರ್ದೇಶಿತರಾಗಿ ಹೊರಹೊಮ್ಮಿದರೆ ಆಶ್ಚರ್ಯವಿಲ್ಲ. ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಿರುವುದರಿಂದ ಕ್ರೈಸ್ತರು ಐವನ್ ಡಿಸೋಜಾ ಅವರನ್ನು ಮುಂಚೂಣಿಯಲ್ಲಿಟ್ಟುಕೊಂಡು ಎಂಎಲ್‌ಸಿ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ.
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮತ್ತು ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಇತರ ನಾಯಕರು ಕೂಡ ಈ ಸ್ಥಾನಗಳಿಗೆ ಲಾಬಿ ನಡೆಸುತ್ತಿದ್ದಾರೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ನಾಮನಿರ್ದೇಶನ ಮಾಡದಿರಲು ಪಕ್ಷವು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಎಸ್‌ಸಿ/ಎಸ್‌ಟಿ ಕೋಟಾದ ಆಕಾಂಕ್ಷಿಗಳು ಸೇರಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications