Rain Alert: ಬೇಸಿಗೆ ಕಾಲದಲ್ಲಿ ಭರ್ಜರಿ ಮಳೆ!
ಎಲ್ಲೆಲ್ಲೂ ಬರೀ ಬಿಸಿಲೇ ಕಾಣುತ್ತಿದ್ದು, ಹೊರಗೆ ಹೋದರೆ ಸಾಕು ಮೈ ಬೆವರಿನಿಂದ ಒದ್ದೆಯಾಗಿ ಜನರು ಒದ್ದಾಡುತ್ತಿದ್ದಾರೆ. ಹೀಗಾಗಿ ಮಳೆ ಬರಲಿ.. ಮಳೆ ಬರಲಿ.. ಅಂತಾ ಇದೀಗ ಜನ ಕೂಡ ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಇಂತಹ ಸಮಯದಲ್ಲೇ ದೇವರು ಒಂದಷ್ಟು ಕರುಣೆ ತೋರಿಸಿ ಮಳೆ ಬರಿಸುತ್ತಿರುವಂತೆ ಈಗ ಭಾಸವಾಗುತ್ತಿದೆ.
ಮಳೆ ಇಲ್ಲದೆ ಮನುಷ್ಯನ ಬದುಕೇ ಇಲ್ಲ ಎನ್ನಬಹುದು ಯಾಕಂದ್ರೆ ಮನುಷ್ಯ ಊಟ ಅಂದ್ರೆ ಆಹಾರ ಇಲ್ಲದೆ ವಾರಗಟ್ಟಲೆ ಬದುಕಬಲ್ಲ. ಆದರೆ ನೀರು ಇಲ್ಲದೆ ಒಂದು ದಿನ ಕೂಡ ಬದುಕುವುದು ಭಾರಿ ಕಷ್ಟ. ಹೀಗಾಗಿ ಮಳೆ ಬೀಳಬೇಕು ಅನ್ನೋದೆ ಪ್ರತಿಯೊಬ್ಬರ ಬೇಡಿಕೆ ಆಗಿದೆ. ಇನ್ನು ಮಳೆಗಾಗಿ ಜನ ಕೂಡ ಪ್ರಾರ್ಥನೆ & ಪೂಜೆ ಮಾಡುತ್ತಿದ್ದಾರೆ. ಹೀಗಿದ್ದರೂ ಕರ್ನಾಟಕದಲ್ಲಿ ಮಳೆ ಬಂದಿಲ್ಲ. ಆದರೆ ಇಲ್ಲೊಂದು ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲೂ ಭರ್ಜರಿ ಮಳೆ ಬಿದ್ದಿದೆ. ಹಾಗೇ ಚಳಿ ಚಳಿ ವಾತಾವರಣ ಸೃಷ್ಟಿಯಾಗಿದೆ.

ತಂಪು ತಂಪು.. ಕೂಲ್ ಕೂಲ್..!
ಭೂಮಿ ಮೇಲೆ ವಾತಾವರಣ ಬದಲಾವಣೆ ಆಗುತ್ತಿರುವ ಕಾರಣ, ಉತ್ತರ ಧ್ರುವ & ದಕ್ಷಿಣ ಧ್ರುವ ಪ್ರದೇಶದಲ್ಲಿ ಹಿಮ ಕರಗಿ ಹೋಗುತ್ತಿದೆ. ಹೀಗೆ ಹಿಮ ಕರಗಿ ಹೋಗುತ್ತಿರುವ ಕಾರಣಕ್ಕೆ ಭೂಮಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಈ ಹಿಂದೆ ಅತಿಹೆಚ್ಚು ಮಳೆ ಬೀಳುತ್ತಿದ್ದ ಪ್ರದೇಶಗಳಲ್ಲಿ ಇದೀಗ ಮಳೆಯೇ ಬೀಳುತ್ತಿಲ್ಲ. ಇನ್ನು ಮಳೆ ಬೀಳದ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಇದೆಲ್ಲವೂ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಪರಿಸ್ಥಿತಿ ಹೀಗಿದ್ದಾಗಲೇ, ಭೀಕರ ಬೇಸಿಗೆ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಕಾಡುತ್ತಿದೆ. ಆದರೆ ಇಲ್ಲೊಂದು ರಾಜ್ಯದಲ್ಲಿ ಜನರು, ತಂಪು ತಂಪು.. ಕೂಲ್ ಕೂಲ್.. ಆಗಿದ್ದಾರೆ!
ಬೇಸಿಗೆ ಸಮಯದಲ್ಲಿ ಭರ್ಜರಿ ಮಳೆ!
ಭೂಮಿ ವಾತಾವರಣ ಈ ಹಿಂದೆ ಇದ್ದಂತೆ ಸಾಮಾನ್ಯವಾಗಿ ಇದ್ದಿದ್ದರೆ, ಮನುಷ್ಯರಿಗೆ ಯಾವುದೇ ಸಮಸ್ಯೆ ಕಾಡುತ್ತಿರಲಿಲ್ಲ. ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ಎಡವಟ್ಟುಗಳ ಪರಿಣಾಮ, ಇದೀಗ ಭೂಮಿಯ ವಾತಾವರಣ ಸಂಪೂರ್ಣ ಏರುಪೇರಾಗಿ ಹೋಗಿದೆ. ಹೀಗಾಗಿ ಇದೀಗ ಮಳೆ, ಬಿಸಿಲು, ಚಳಿ ಎಲ್ಲವೂ ವ್ಯತ್ಯಾಸವಾಗಿ ಹೋಗಿದೆ. ಕಳೆದ ವರ್ಷ ಇದೇ ಕಾರಣಕ್ಕೆ ಕರ್ನಾಟಕದ ನೆಲದಲ್ಲಿ ಕೂಡ ಮಳೆ ಬೀಳಲೇ ಇಲ್ಲ. 2023ರಲ್ಲಿ ಕರ್ನಾಟಕ ಭಾರಿ ಮಳೆ ಕೊರತೆ ಎದುರಿಸಿದೆ.
ಹೀಗಾಗಿ ಬೇಸಿಗೆ ಸಮಯದಲ್ಲಿ ಜನರು ಪರದಾಡುವ ಸಮಯದಲ್ಲಿ, ರಾಷ್ಟ್ರ ರಾಜಧಾನಿ ದೆಹಲಿ ಜನರಿಗೆ ಖುಷಿ ಸಿಕ್ಕಿದೆ. ದೆಹಲಿಯಲ್ಲಿ ಭರ್ಜರಿ ಮಳೆ ಬೀಳುತ್ತಿದೆ. ಹಾಗೇ ದೆಹಲಿಯ ತಾಪಮಾನ ಕನಿಷ್ಠ 19.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎನ್ನಲಾಗಿದೆ. ಈ ಮೂಲಕ ದೆಹಲಿ ಬೇಸಿಗೆಯಲ್ಲೂ ಕೂಲ್ ಕೂಲ್ ಆಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ವಾತಾವರಣ ಮತ್ತಷ್ಟು ಸುಧಾರಿಸುವ ಬಗ್ಗೆ ಕೂಡ ಮಾಹಿತಿ ಸಿಗುತ್ತಿದೆ.
ಕರ್ನಾಟಕದಲ್ಲಿ ಯಾವಾಗ ಮಳೆ?
ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾರ್ಚ್ 31ರಿಂದ 2 ದಿನಗಳ ಕಾಲ ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರಿಂದಲೇ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕಾವೇರಿ ನದಿಯ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ, ಗಡಿನಾಡು ಬೆಳಗಾವಿಯಲ್ಲೂ ಭಾರಿ ಮಳೆ ಬಿದ್ದಿದೆ. ಇನ್ನು ಕೆಲ ದಿನದಲ್ಲಿ ಈ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗುವ ನಿರೀಕ್ಷೆ ಇದೆ. ಹೀಗಿದ್ದಾಗ ದೆಹಲಿಯಲ್ಲಿ ಮಳೆ ಜೊತೆಗೆ ತಾಪಮಾನ ಕೂಡ ಕೂಲ್ ಕೂಲ್ ಆಗಿದೆ.
ಬಾ ಮಳೆಯೇ ಬಾ..
ಬೇಸಿಗೆ ಸಮಯದಲ್ಲಿ ಭೂಮಿ ಕೊತ ಕೊತ ಕುದಿಯುತ್ತಾ ಇರುತ್ತದೆ. ಯಾಕೆ ಅಂದ್ರೆ, ಈ ಸಮಯಕ್ಕೆ ಭೂಮಿ ಸೂರ್ಯನಿಗೆ ಅತಿ ಸಮೀಪದಲ್ಲಿ ಹಾದು ಹೋಗುತ್ತದೆ. ಮೊದಲೇ ವಾತಾವರಣದಲ್ಲಿ ಭಾರಿ ಬದಲಾವಣೆ ಎದುರಾಗಿ ಜನ ಇದೀಗ ಪರದಾಡುತ್ತಿದ್ದಾರೆ ಪರಿಸ್ಥಿತಿ ಹೀಗಿದ್ದಾಗ ಕಳೆದ ವರ್ಷ ಮಳೆಯೇ ಬೀಳದೆ ಭೀಕರ ಬರ ಎದುರಾಗಿದೆ. ಹೀಗೆ ಎಲ್ಲಾ ಕೈಮೀರಿ ಹೋಗಿರುವಾಗಲೇ ಮಳೆರಾಯ ಒಂದಷ್ಟು ಕರುಣೆ ತೋರಿಸಿದ್ದಾನೆ. ವರುಣನ ಕರುಣೆ ಇದೇ ರೀತಿ ಮುಂದುವರಿದರೆ ಸಾಕಪ್ಪಾ ಅಂತಿದ್ದಾರೆ, ಕನ್ನಡ ನಾಡಿನ ಪ್ರಜೆಗಳು. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರುವಾಗುವ ನಿರೀಕ್ಷೆ ಇದೆ.
ಧಗಧಗ ಬಿಸಿಲಿನ ನಡುವೆ ಮಳೆ!
ಹೌದು ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ, ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಬಿಸಿಲು ಕಾಡುತ್ತಿದೆ. ಹೀಗಿದ್ದಾಗ ಕರ್ನಾಟಕದ ಕೆಲವು ಪ್ರದೇಶದಲ್ಲಿ ಭರ್ಜರಿ ಮಳೆ ಒಂದಷ್ಟು ತಂಪು ತಂಪು ಕೂಲ್ ಕೂಲ್ ಮಾಡಿದೆ.
ಕೊಡಗು ಜಿಲ್ಲೆಯಲ್ಲೂ ಭರ್ಜರಿ ಮಳೆ!
ರಾಜ್ಯದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಮಳೆಯ ಮನ್ಸೂಚನೆ ಇಲ್ಲ ಎನ್ನಲಾಗಿತ್ತು. ಹೀಗಾಗಿ ಒಣ ಹವೆಯ ಕಾಟ ಮುಂದುವರಿಯಲಿದೆ ಎನ್ನಲಾಗುತ್ತಿತ್ತು. ಹಾಗೆಯೇ ಮುಂದಿನ 2 ಅಥವಾ 3 ವಾರ ಇದೇ ವಾತಾರಣ ಇರಲಿದೆ ಎನ್ನಲಾಗುತ್ತಿತ್ತು. ದಕ್ಷಿಣ ಒಳನಾಡಿನ ಕೆಲವು ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಕರ್ನಾಟಕದ ನೆಲದಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಭಯ ಆವರಿಸಿತ್ತು. ಹೀಗಿದ್ದಾಗ ಮಳೆ ಮುನ್ಸೂಚನೆ ಸಿಕ್ಕಿದೆ. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗುವ ನಿರೀಕ್ಷೆ ಇದೆ. ಈಗಾಗಲೇ ಕೊಡಗು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಮಳೆ ಬಿದ್ದು ರಿಲೀಫ್ ಸಿಕ್ಕಂತಾಗಿದೆ.
ಕರ್ನಾಟಕದ ಜನರಿಗೆ ನೀರು ಅನ್ನೋದು ಚಿನ್ನಕ್ಕೆ ಸಮಾನ ಆಗಿದೆ. ದಕ್ಷಿಣ ಕರ್ನಾಟಕದಿಂದ ಹಿಡಿದು, ಉತ್ತರ ಕರ್ನಾಟಕದ ತನಕ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಕರಾವಳಿಯ ಭಾಗದ ತನಕ ಎಲ್ಲೆಲ್ಲೂ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಕೈಮೀರಿ ಹೋದ ಕಾರಣಕ್ಕೆ ಈಗ ಮಳೆ ಬೀಳಲೇಬೇಕು ಎನ್ನುವ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಡ್ಯಾಂಗಳಲ್ಲಿ ಕೂಡ ನೀರು ಖಾಲಿ ಆಗಿ ಜಲಾಶಯಗಳು ಒಣಗಿ ಹೋಗುತ್ತಿವೆ. ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲಿ ಮಳೆ ಬೀಳಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆ ಇನ್ನು ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಕೂಡ ಮೂಡಿದೆ.












Click it and Unblock the Notifications