Nandini Milk Price: ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು; ಎಷ್ಟು? ಇಲ್ಲಿದೆ ಮಾಹಿತಿ

Nandini Milk Price: ಈಗಾಗಲೆ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಇದೀಗ ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಸುಳಿವನ್ನು ಶಾಸಕ ಕೆ.ವೈ.ನಂಜೇಗೌಡ ಸುಳಿವು ನೀಡಿದ್ದಾರೆ. ಹಾಗಾದರೆ ಎಷ್ಟು ಏರಿಕೆ ಮಾಡಲು ಯೋಜಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಶೀಘ್ರದಲ್ಲಿಯೇ ನಂದಿನಿ ಹಾಲಿನ ದರ ಏರಿಕೆ ಆಗುವ ಸಾಧ್ಯತೆಯಿದೆ ಎಂದು ಎಂದು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಸಕ ನಂಜೇಗೌಡ ಸುಳಿವು ನೀಡಿದ್ದಾರೆ. ನಂದಿನ ಹಾಲಿನ ದರ 5 ರೂಪಾಯಿ ಏರಿಸಿ. ಆಣವನ್ನು ರೈತರಿಗೆ ನೀಡಲು ಚಂತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Nandini Milk Price Hike Hint in State Know details

ನಂದಿನಿ ಹಾಲಿನಿ ದರ ಹೆಚ್ಚಿಸುವ ಬಗ್ಗೆ ಕೆಲವು ದಿನಗಳ ಹಿಂದಿನಿಂದಲೇ ಚರ್ಚೆ ನಡೆಯುತ್ತಿದೆ. ಬೆಳಗಾವಿ ಅಧಿವೇಶನದ ಬಳಿಕ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಈಗಾಗಲೇ ಜೋರಾಗಿ ಕೇಳಿಬರುತ್ತಿವೆ.

ಹಲವು ನಿಯಮಗಳಲ್ಲಿ ಬದಲಾವಣೆ: ಹೊಸ ತಿಂಗಳು ಬರುತ್ತಿದ್ದಂತೆ ಹಲವು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ನವೆಂಬರ್ ತಿಂಗಳು ಮುಗಿದು, ಡಿಸೆಂಬರ್ ತಿಂಗಳು ಆರಂಭವಾಗಿದೆ. ಹಾಗೆಯೇ ಇಂದಿನಿಂದ ಭಾರತದಲ್ಲಿ ಹಲವು ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. ಏನೆಲ್ಲಾ ಬದಲಾವಣೆಗಳಾಗಲಿವೆ ಎನ್ನುವ ಮಾಹಿತಿ ಇಲ್ಲಿದೆ ಗಮನಿಸಿ.

ಈ ಬದಲಾವಣೆಗಳು ಎಲ್‌ಪಿಜಿ ಸಂಪರ್ಕ, ಎಟಿಎಂ ಕಾರ್ಡ್, ಆಧಾರ್ ಅಪ್ಡೇಟ್, ಪೆಟ್ರೋಲ್ ಬೆಲೆ, ಸರ್ಕಾರಿ ನೌಕರರು, ಖಾಸಗಿ ವಲಯದ ಉದ್ಯೋಗಿಗಳು, ವಿಮೆ, ಪ್ನಾನ್-ಆಧಾರ್ ಲಿಂಕ್‌ಗಳಂತಹ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ.

* ಎಲ್‌ಪಿಜಿಯಲ್ಲಿ ಹೊಸ ನಿಯಮಗಳು: ಡಿಸೆಂಬರ್ 1, 2024ರಿಂದ ಎಲ್‌ಪಿಜಿ ಸಬ್ಸಿಡಿಯಲ್ಲಿ ಬದಲಾವಣೆ ಆಗಬಹುದು. ಗ್ಯಾಸ್ ಸಂಪರ್ಕಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಗ್ರಾಹಕರಿಗೆ ಮಾತ್ರ ಸಬ್ಸಿಡಿ ಲಭ್ಯವಿದೆ. ಹೆಚ್ಚುವರಿಯಾಗಿ, ಪ್ರತಿ ಸಂಪರ್ಕಕ್ಕೂ ಡಿಜಿಟಲ್ ಪಾವತಿಗಳನ್ನು ಕಡ್ಡಾಯಗೊಳಿಸಬಹುದು.

* ಎಟಿಎಂ ಕಾರ್ಡ್ ಸಂಬಂಧಿತ ಬದಲಾವಣೆಗಳು: ಈಗ ನಿಮ್ಮ ಹಳೆಯ ಮ್ಯಾಗ್ನೆಟಿಕ್ ಸ್ಟ್ರೈಪ್ ಎಟಿಎಂ ಕಾರ್ಡ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಡಿಸೆಂಬರ್ 1, 2024ರೊಳಗೆ ಚಿಪ್ ಆಧಾರಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಂತೆ ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ. ನೀವು ಇನ್ನೂ ಹೊಸ ಕಾರ್ಡ್ ತೆಗೆದುಕೊಳ್ಳದಿದ್ದರೆ, ತಕ್ಷಣವೇ ನಿಮ್ಮ ಬ್ಯಾಂಕ್ ಸಂಪರ್ಕಿಸಿ.

* ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಗದಿಪಡಿಸಲು ಸರ್ಕಾರ ನಿರ್ಧರಿಸಿದೆ. ಹಸಿರು ಶಕ್ತಿ ಪರಿವರ್ತನೆಯ ಅಡಿಯಲ್ಲಿ ಪೆಟ್ರೋಲ್ ಬೆಲೆ ಬದಲಾಗಬಹುದು. ಅಲ್ಲದೆ, ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹೊಸ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಲಾಗುವುದು.

* ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ: ಡಿಸೆಂಬರ್ 1, 2024ರಿಂದ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಕೊಡುಗೆಗಳು ಹೆಚ್ಚಾಗುತ್ತವೆ. ಅಲ್ಲದೆ, ನಿವೃತ್ತಿಯ ನಂತರದ ಪ್ರಯೋಜನಗಳನ್ನು ಪಡೆಯುವ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗುವುದು.

* ಖಾಸಗಿ ಉದ್ಯೋಗಿಗಳಿಗೆ ಹೊಸ ನಿಯಮಗಳು: ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಇಪಿಎಫ್‌ಒ ಘೋಷಣೆ ಮಾಡಿದೆ. ಇದರಡಿಯಲ್ಲಿ ನೌಕರರು ಈಗ ತಮ್ಮ ಪಿಂಚಣಿ ಖಾತೆಗಳ ಬಗ್ಗೆ ಹೆಚ್ಚು ಪಾರದರ್ಶಕತೆಯನ್ನು ಪಡೆಯುತ್ತಾರೆ. ಇದರ ಹೊರತಾಗಿ ಪ್ರತಿಯೊಬ್ಬ ಉದ್ಯೋಗಿ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+