'ಮೀನು ಮಾರುಕಟ್ಟೆ': ವಿಧಾನಸೌಧ ಪುಸ್ತಕ ಮೇಳದ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್‌ ಕಟು ಟೀಕೆ

ಬೆಂಗಳೂರು, ಮಾರ್ಚ್ 07: ಸ್ಪೀಕರ್ ಯು.ಟಿ. ಖಾದರ್‌ ನೇತೃತ್ವದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 3 ವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಈ ಬೃಹತ್‌ ಪುಸ್ತಕ ಮೇಳದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ವಿಧಾನಸೌಧದ ಒಳಗೆ ಪ್ರವೇಶಿಸುವ ಅವಕಾಶ ಸಿಕ್ಕಿತ್ತು.

ನಾಲ್ಕು ದಿನಗಳ ಕಾಲವೂ ಸಾವಿರಾರು ಅಕ್ಷರ ಪ್ರೇಮಿಗಳು ಭಾಗಿಯಾದ ಈ ಪುಸ್ತಕ ಮೇಳದ ಅವ್ಯವಸ್ಥೆ ಬಗ್ಗೆ ಕೆಲ ಸಾರ್ವಜನಿಕರುಸಸ ಅಸಮಾಧಾನ ಹೊರಹಾಕಿದ್ದರು. ಇದೀಗ ಕನ್ನಡ ಚಿತ್ರರಂಗ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಸ್ಪೀಕರ್ ಯು.ಟಿ. ಖಾದರ್‌ ಅವರಿಗೆ ಸುಧೀರ್ಘ ಪತ್ರ ಬರೆದಿದ್ದಾರೆ.

Nagathihalli Chandrashekhar Criticised Vidhana Soudha Book Fair Management

ಪ್ರೀತಿಯ ಖಾದರ್ ಸಾಹೇಬರೇ,

ಪ್ರೀತಿಯ ಹೊರಟ್ಟಿ ಸಾಹೇಬರೇ,

ತುಸು ಕೇಳಿಸಿಕೊಳ್ಳಿ. ಅಕ್ಷರ ಪ್ರೀತಿಯ ಪುಸ್ತಕ ಮೇಳದ ನಿಮ್ಮ ಪರಿಕಲ್ಪನೆ ಸ್ತುತ್ಯಾರ್ಹ. ಸಕಾಲಕ್ಕೆ ಓಡೋಡಿ ಹೋದೆ. ಆದರೆ ಅಲ್ಲಿ ಏನೂ ಪೂರ್ವಸಿದ್ಧತೆ ಇರಲಿಲ್ಲ. ಸುಜಾತಾ ಎಂಬ ಸಚಿವಾಲಯದ ಹೆಣ್ಣುಮಗಳು ಸಾಹಿತಿಗಳನ್ನು ನೋಡಿಕೊಳ್ಳಲು ಹೆಣಗಾಡುತ್ತಿದ್ದರು. ಎಲ್ಲಾ ಮೀನು ಮಾರುಕಟ್ಟೆಯಂತಿತ್ತು. ನೀವು ಸಾಹಿತಿಗಳ ಮತ್ತು ಅಧಿಕಾರಿಗಳ ಒಂದು ಸಮಿತಿ ಮಾಡಬೇಕಿತ್ತು. ಒಂದು ಬರೋಬ್ಬರಿ ತಾಲೀಮು ಆಗಬೇಕಿತ್ತು.

ಶ್ರೀಸಾಮಾನ್ಯರಿಗೆ ಮನೆಗೆ ಹೋಗಲು ಒಂದು ಸೆಲ್ಫಿ ಸಾಕು. ನಿಮಗೂ ಅಷ್ಟೇ ಬಂಡವಾಳ ಸಾಕೇ? ಅವಿವೇಕತನದಲ್ಲಿ ಕಾಂಗ್ರೆಸ್‌-ಬಿಜೆಪಿ ಇಬ್ಬರೂ ಸಮಬಲರು. ನಮ್ಮ ಶಾಲೆಯ ಹುಡುಗ ತೇಜಸ್ ಬಣ್ಣಬಣ್ಣದ ಫೋಟೋ ತೆಗೆದಿದ್ದಾನೆ. ನೋಡಿ ಖುಷಿಪಡಿ. ಆದರೆ ಕರ್ನಾಟಕಕ್ಕೆ ಇಷ್ಟು ಸಾಕಾಗದು. ವಿಧಾನಸೌಧದಲ್ಲಿ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಇದರರ್ಥ ಬಿಜೆಪಿಗಳು ಶ್ರೇಷ್ಟರು ಅಂತಲ್ಲ. ಅವರ ಕತೆಗಳು ಇನ್ನೂ ಭೀಕರ.

ನೀವು ವಿಧಾನಸೌಧಕ್ಕೆ ಬಣ್ಣದ ಲೈಟು ಹಾಕಿ ಬಚಾವಾಗಬೇಡಿ. ನಿಮ್ಮನ್ನು ಟೀಕಿಸುವವರ ಸಭೆಯಲ್ಲಿ ಕುಳಿತು ಬೈಗುಳ ಕೇಳಿಸಿಕೊಳ್ಳಿ. ಪುಸ್ತಕ ಮೇಳದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರೊಂದಿಗೆ ಸಾಂಸ್ಕೃತಿಕ ಸಂವಾದ ನಡೆಸಬೇಕು. ನೀವು ಯಾರೂ ಸಭೆಗೆ ಬಂದು ಕೂರುವುದೇ ಇಲ್ಲ. ಮೈಕು, ವೇದಿಕೆ ಕೊಟ್ಟು ಪಾರಾಗುತ್ತೀರಿ. ಬಲು ಜಾಣರು. ಇದರಿಂದ ಏನು ಲಾಭ? ಇದೆಂಥ ಪ್ರಜಾತಂತ್ರ?

Nagathihalli Chandrashekhar Criticised Vidhana Soudha Book Fair Management

ನೀವು ದೊಡ್ಡಪ್ಪ. ಬಿಜೆಪಿ ಚಿಕ್ಕಪ್ಪ. ಮುಂದಿನ ಸಲ ಯಾರಿರುತ್ತೀರೋ ಗೊತ್ತಿಲ್ಲ. ಕಸಾಪದ ಕೆಟ್ಟ, ದುಬಾರಿ ಮತ್ತು ನಿರರ್ಥಕ ಸಮ್ಮೇಳನದ ಆಚರಣೆಯ ಅಣುಕು ಅಭ್ಯಾಸ ನಿಧಾನಸೌಧಕ್ಕೂ ಇಣುಕುವ ಅಪಾಯವಿದ್ದಂತಿದೆ. ಪುಸ್ತಕ ಮೇಳದಲ್ಲಿ ಒಬ್ಬನೇ ಒಬ್ಬ ಸಂಸದ, ಮಂತ್ರಿ, ಶಾಸಕ ಮತ್ತು ಅಧಿಕಾರಿ ಕಾಣಿಸಲಿಲ್ಲ. ಸತ್ಯ ಹೇಳಿ - ನೀವು ಓದುವುದು-ಅನೇಕ ಹಿರಿಯ ಲೇಖಕರ ಹಾಗೆ, ನಿಮ್ಮ ಅಭಿನಂದನಾಗ್ರಂಥ ಮಾತ್ರ. ಹೌದಲ್ಲವಾ? ಮುಂದಿನ ಪುಸ್ತಕ ಮೇಳವಾದರೂ ಅರ್ಥಪೂರ್ಣವಾಗಿರಲಿ ಎಂದು ಕಟುವಾಗಿ ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+