• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈತ್ರಿಯಾ ಕೇಸ್ : ಕಾರ್ತಿಕ್ ಗೌಡ ವಿರುದ್ಧದ ಚಾರ್ಜ್ ಶೀಟ್ ರದ್ದು

By Mahesh
|

ಬೆಂಗಳೂರು, ಡಿಸೆಂಬರ್ 16: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರಿಗೆ ವಂಚನೆ ಪ್ರಕರಣದಲ್ಲಿ ಹೈಕೋರ್ಟಿನಿಂದ ಶುಕ್ರವಾರ(ಡಿಸೆಂಬರ್ 16)ದಂದು ಶುಭ ಸುದ್ದಿ ಸಿಕ್ಕಿದೆ. ಕಾರ್ತಿಕ್ ಗುಡ ವಿರುದ್ಧ ನಟಿ ಮೈತ್ರಿಯಾ ಗೌಡ ಅವರು ಹಾಕಿರುವ ಅತ್ಯಾಚಾರ, ವಂಚನೆ ಆರೋಪ ಹೊರೆಸಿದ್ದರು. ಆದರೆ, ಕಾರ್ತಿಕ್ ವಿರುದ್ಧದ ಚಾರ್ಜ್ ಶೀಟ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಮೈತ್ರಿಯಾ ಗೌಡ ಸಲ್ಲಿರುವ ಅತ್ಯಾಚಾರ ಹಾಗೂ ವಂಚನೆ ಆರೋಪ ಪ್ರಕರಣವನ್ನು ರದ್ದುಗೊಳಿಸುವಂತೆ ಕಾರ್ತೀಕ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ.ಆನಂದ ಬೈರಾರೆಡ್ಡಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕಾರ್ತಿಕ್ ವಿರುದ್ಧದ ದೋಷಾರೋಪಣ ಪಟ್ಟಿಯನ್ನು ರದ್ದುಗೊಳಿಸಿದೆ. [ಮೈತ್ರಿಯಾ- ಕಾರ್ತೀಕ್ ಗೌಡಗೆ ಸಂಧಾನ ಪಾಠ ಹೇಳಿದ ಹೈಕೋರ್ಟ್]

Mythriya Gowda Karnataka High Court quashes Chargesheet against Karthik Gowda

ಇದಕ್ಕೂ ಮುನ್ನ ಇಬ್ಬರು ಸಂಧಾನ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ, ಮಧ್ಯಸ್ಥಿಕಾ(mediation) ಕೇಂದ್ರಕ್ಕೆ ಹೋಗಿ ಬನ್ನಿ ಕಾರ್ತಿಕ್ ಗೌಡ ಈಗಾಗಲೇ ಮದುವೆಯಾಗಿದ್ದಾರೆ. ಕುಟುಂಬದ ನೆಮ್ಮದಿಗಾಗಿ ಪ್ರಕರಣವನ್ನ ಪರಸ್ಪರ ಕುಳಿತು ಇತ್ಯರ್ಥ ಮಾಡಿಕೊಳ್ಳಿ. ಆಸ್ತಿ, ಹಣಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ ಎಂದು ಕೋರ್ಟ್ ಸಲಹೆ ನೀಡಿತ್ತು.

ಕಾರ್ತೀಕ್ ಅವರು ನಂಬಿಕೆ ದ್ರೋಹ ಮಾಡಿದ್ದಾರೆ ಎಂಬುದನ್ನು ಇರುವ ಕಾಲ್ ರೆಕಾರ್ಡಿಂಗ್ ಪುರಾವೆಯನ್ನು ನೀಡುವಂತೆ ಮೈತ್ರಿಯಾ ಪರ ವಕೀಲರಿಗೆ ಕೋರ್ಟ್ ಸೂಚಿಸಿತ್ತು. ಆದರೆ, ಯಾವುದೇ ಪುರಾವೆ ಸಿಗಲಿಲ್ಲ.

English summary
The Karnataka High Court on Friday quashed the chargesheeet filed against Karthik Gowda, son of union minister, D Sadananda Gowda. The court observed that there were contradictions in the allegations made by the complainant and hence the chargesheet was being quashed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X