SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ
ಬೆಂಗಳೂರು: ಮೈಸೂರು ಮತ್ತು ಮೈಸೂರು ನ್ಯೂ ಗುಡ್ಸ್ ಟರ್ಮಿನಲ್ ಬೈಪಾಸ್ ನಡುವೆ ರಸ್ತೆ, ಕೆಳಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ (South Western Railways) ಕೆಲವು ರೈಲು ಸೇವೆಗಳ ಪುನರ್ ಆರಂಭ ಹಾಗೂ ಭಾಗಶಃ ರದು ಪಡಿಸಿರುದಾಗಿ ರೈಲ್ವೆ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಹಿಂದೆ ಭಾಗಶಃ ರದ್ದಾದ ರೈಲುಗಳ ಪುನರ್ ಆರಂಭ, ಯಾವುವು?
2026 ಮಾರ್ಚ್ 21 ಮತ್ತು 24 ರಂದು ಭಾಗಶಃ ರದ್ದುಪಡಿಸಲಾಗಿದ್ದ ಕೆಳಗಿನ ರೈಲುಗಳು ಈಗ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ. ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು (ಸಂಖ್ಯೆ 56267) ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿತ್ತು. ಇದೀಗ ಈ ರೈಲು ಮರು ಆರಂಭವಾಗಿದ್ದು ನಿಯಮಿತ ವೇಳಾಪಟ್ಟಿಯಂತೆ ಸಂಚಾರ ಮಾಡಲಿದೆ.

ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16225) ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗಿತ್ತು. ಇದೀಗ ಈ ರೈಲು ಕಾರ್ಯಾಚರಣೆ ಪುನರ್ ಆರಂಭಿಸಲಾಗಿದ್ದು, ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.
ಭಾಗಶಃ ರದ್ದಾದ ರೈಲುಗಳ ಪಟ್ಟಿ
ಟರ್ಮಿನಲ್ ಬೈಪಾಸ್ ಬಳಿ ರಸ್ತೆ, ಕೆಳಸೇತುವೆ ಕಾಮಗಾರಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳು 2026 ಮಾರ್ಚ್ 28 ಮತ್ತು 31 ರಂದು ಭಾಗಶಃ ರದ್ದುಪಡಿಸಲಾಗಿದೆ. ಯಾವೆಲ್ಲ ಮಾರ್ಗದ ರೈಲುಗಳು ಸಂಚಾರ ಸ್ಥಗಿತಗೊಳಿಸಿವೆ ಎಂಬ ಮಾಹಿತಿ ಇಲ್ಲಿದೆ.
ಪುನರ್ ಸಂಚಾರ ಆರಂಭಿಸಿರುವ ಅರಸೀಕರೆ-ಮೈಸೂರು ಪ್ಯಾಸೆಂಜರ್ ರೈಲು (56267) ಸಂಚಾರವನ್ನು ಬೆಳಗುಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲಿನ ಸೇವೆ ಬೆಳಗುಳದಲ್ಲಿ ಅಂತ್ಯವಾಗಲಿದೆ.
ಇನ್ನೂ ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು (16225) ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಮೈಸೂರು ಬದಲಿಗೆ ಬೆಳಗುಳದಿಂದ ತನ್ನ ಪ್ರಯಾಣ ಆರಂಭಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications