ಮೈಸೂರು ನಂಜನಗೂಡು ಚಾಮರಾಜನಗರ ರೈಲು ವೇಳಾಪಟ್ಟಿ ಪರಿಷ್ಕರಣೆ, ವಿವರ
ಮೈಸೂರು, ಅಕ್ಟೋಬರ್ 02: ನೈರುತ್ಯ ರೈಲ್ವೆ ಇಲಾಖೆಯೂ ಮೈಸೂರು ನಂಜನಗೂಡು ಹಾಗೂ ಚಾಮರಾಜನಗರ ನಡುವೆ ಸಂಚರಿಸುವ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಅದರ ವಿವರ ಇಲ್ಲಿದೆ.
ಮೈಸೂರು ನಂಜನಗೂಡು ಚಾಮರಾಜನಗರ ವಿಭಾಗದಲ್ಲಿ ಸಂಚರಿಸುವ 06233, 06300, 06299, 06234, 06275, 06276 ಮತ್ತು 06544 ಸಂಖ್ಯೆಯ ರೈಲುಗಳು ಅಕ್ಟೋಬರ್ 1, 2023 ರಿಂದ ವೇಳಾಪಟ್ಟಿ ಪರಿಷ್ಕರಣೆಗೆ ಒಳಗಾಗಲಿವೆ ಎಂದು ಇಲಾಖೆ ತಿಳಿಸಿದೆ.

ಸಮಯದ ಪರಿಷ್ಕರಣೆಯು ಭಾರತೀಯ ರೈಲ್ವೆಯ ಹೊಸ ವೇಳಾಪಟ್ಟಿಯ (TAG 2023-24) ಭಾಗವಾಗಿದೆ. ಇದು ಅಕ್ಟೋಬರ್ 1, 2023 ರಿಂದ ಜಾರಿಗೆ ಬರುತ್ತದೆ. ನೂತನ ವೇಳಾಪಟ್ಟಿಯು ಅಕ್ಟೋಬರ್ 1, 2023 ರಿಂದ ಪ್ರಾರಂಭವಾಗುವ ಪ್ರಯಾಣಗಳಿಗೆ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ (SWR) ಪ್ರಕಟಣೆಯಲ್ಲಿ ತಿಳಿಸಿದೆ. ಇದು 06233, 06300, 06299, 06234, 06275, 06276 ಮತ್ತು 06544 ಸಂಖ್ಯೆಯ ಏಳು ರೈಲುಗಳ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ.
06233/06234 ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ವಿಶೇಷ ರೈಲು
ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ವಿಶೇಷ ರೈಲು ಸಂಖ್ಯೆ 06233 ಮೈಸೂರಿನಿಂದ 08.20 ಗಂಟೆಗೆ ಹೊರಟು 10.10 ಗಂಟೆಗೆ ಚಾಮರಾಜನಗರ ತಲುಪಲಿದೆ. ಈ ಹಿಂದೆ ರೈಲು ಮೈಸೂರಿನಿಂದ 09.15 ಗಂಟೆಗೆ ಹೊರಟು 10.55 ಗಂಟೆಗೆ ಚಾಮರಾಜನಗರ ತಲುಪುತ್ತಿತ್ತು. ಅಲ್ಲದೆ ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ವಿಶೇಷ ರೈಲು ಸಂಖ್ಯೆ 06234 ಚಾಮರಾಜನಗರದಿಂದ 10.40 ಗಂಟೆಗೆ ಹೊರಟು 12.20 ಗಂಟೆಗೆ ಮೈಸೂರು ತಲುಪಲಿದೆ. ಈ ಹಿಂದೆ ರೈಲು ಚಾಮರಾಜನಗರದಿಂದ 5.25 ಗಂಟೆಗೆ ಹೊರಟು 7.15 ಗಂಟೆಗೆ ಮೈಸೂರು ತಲುಪುತ್ತಿತ್ತು.
ಮೈಸೂರು- ನಂಜನಗೂಡು ಪಟ್ಟಣ ವಿಶೇಷ ಎಕ್ಸ್ಪ್ರೆಸ್ ರೈಲು
ಮೈಸೂರು ನಂಜನಗೂಡು ಪಟ್ಟಣ ಯುಆರ್ ಎಕ್ಸ್ಪ್ರೆಸ್ ಸಂಖ್ಯೆ 06300 ವಿಶೇಷ ರೈಲು ಮೈಸೂರಿನಿಂದ 09.15 ಗಂಟೆಗೆ ಹೊರಟು 10.05 ಗಂಟೆಗೆ ನಂಜನಗೂಡು ಪಟ್ಟಣವನ್ನು ತಲುಪಲಿದೆ. ಈ ಹಿಂದೆ ರೈಲು ಮೈಸೂರಿನಿಂದ 09.35 ಗಂಟೆಗೆ ಹೊರಟು ನಂಜನಗೂಡು ಪಟ್ಟಣಕ್ಕೆ 10.30 ಗಂಟೆಗೆ ತಲುಪುತ್ತಿತ್ತು.
ಆ ಕಡೆಯಿಂದ ನಂಜನಗೂಡು ಟೌನ್-ಮೈಸೂರು ಯುಆರ್ ಎಕ್ಸ್ಪ್ರೆಸ್ ವಿಶೇಷ ರೈಲು ಸಂಖ್ಯೆ 06299 ನಂಜನಗೂಡು ಪಟ್ಟಣದಿಂದ 09.15 ಗಂಟೆಗೆ ಹೊರಟು 10.05 ಗಂಟೆಗೆ ಮೈಸೂರು ತಲುಪಲಿದೆ. ಈ ಹಿಂದೆ ರೈಲು ನಂಜನಗೂಡು ಪಟ್ಟಣದಿಂದ 09.35 ಗಂಟೆಗೆ ಹೊರಟು 10.30 ಗಂಟೆಗೆ ಮೈಸೂರು ತಲುಪುತ್ತಿತ್ತು.
06275/06276 ಚಾಮರಾಜನಗರ ಮೈಸೂರು ಯುಆರ್ ಎಕ್ಸ್ಪ್ರೆಸ್ ವಿಶೇಷ ರೈಲು
ಚಾಮರಾಜನಗರ ಮೈಸೂರು ಯುಆರ್ ಎಕ್ಸ್ಪ್ರೆಸ್ ವಿಶೇಷ ರೈಲು ಸಂಖ್ಯೆ 06275 ಚಾಮರಾಜನಗರದಿಂದ 17.25 ಗಂಟೆಗೆ ಹೊರಟು 19.15 ಗಂಟೆಗೆ ಮೈಸೂರು ತಲುಪಲಿದೆ. ಈ ಹಿಂದೆ ಚಾಮರಾಜನಗರದಿಂದ 6.35 ಗಂಟೆಗೆ ಹೊರಡುತ್ತಿದ್ದ ರೈಲು 8.25 ಗಂಟೆಗೆ ನಂಜನಗೂಡು ಪಟ್ಟಣಕ್ಕೆ ಆಗಮಿಸುತ್ತಿತ್ತು. ಆ ಕಡೆಯಿಂದ ಮೈಸೂರು ಚಾಮರಾಜನಗರ ಯುಆರ್ ಎಕ್ಸ್ಪ್ರೆಸ್ ವಿಶೇಷ ರೈಲು ಸಂಖ್ಯೆ 06276 ಮೈಸೂರಿನಿಂದ 12.30 ಗಂಟೆಗೆ ಹೊರಟು 2.15 ಗಂಟೆಗೆ ಚಾಮರಾಜನಗರ ತಲುಪಲಿದೆ. ಈ ಹಿಂದೆ ರೈಲು ಮೈಸೂರಿನಿಂದ 12.15 ಗಂಟೆಗೆ ಹೊರಟು ಮಧ್ಯಾಹ್ನ 2.00 ಗಂಟೆಗೆ ಚಾಮರಾಜನಗರ ತಲುಪುತ್ತಿತ್ತು.
06544 ಚಾಮರಾಜನಗರ-ಮೈಸೂರು ಯುಆರ್ ಎಕ್ಸ್ಪ್ರೆಸ್ ವಿಶೇಷ ರೈಲು
ಚಾಮರಾಜನಗರ- ನಂಜನಗೂಡು ಟೌನ್ ನಡುವಿನ 06544 ಚಾಮರಾಜನಗರ-ಮೈಸೂರು ಯುಆರ್ ಎಕ್ಸ್ಪ್ರೆಸ್ ವಿಶೇಷ ರೈಲು ಮಧ್ಯಂತರ ನಿಲ್ದಾಣಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಬದನಗುಪ್ಪೆ ಹಾಲ್ಟ್ 9.54/9.55, ಕೊಣ್ಣನೂರು ಹಾಲ್ಟ್ 10.00/10.01, ಕವಲಂದೆ ಹಾಲ್ಟ್ 10.06/10.07, ನರಸಾಂಬುಧಿ 10.15/10.16, ಚಿನ್ನದಗುಡಿ ಹುಂಡಿ 10.20/10.21ಕ್ಕೆ ಅಂತ್ಯಗೊಳ್ಳಲಿದೆ.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications