ಮೈಸೂರು ಬೆಂಗಳೂರು ದಸರಾ ವಿಶೇಷ ರೈಲುಗಳು, ವೇಳಾಪಟ್ಟಿ ವಿವರ

ಬೆಂಗಳೂರು, ಅಕ್ಟೋಬರ್‌ 12: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಓಡಿಸಲಿದೆ. ದಸರಾ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರ ಸಂಚಾರ ಅನುಕೂಲಕ್ಕಾಗಿ ಮೈಸೂರು ಮತ್ತು ಬೆಂಗಳೂರು ನಡುವೆ ಎರಡು ಜೋಡಿ ವಿಶೇಷ ರೈಲುಗಳನ್ನು ಓಡಿಸಲಿದೆ.

06279/06280 ದಸರಾ ವಿಶೇಷ ರೈಲುಗಳು:

ಸಾರ್ವಜನಿಕ ಬೇಡಿಕೆಯ ಮೇರೆಗೆ ರೈಲು ಸಂಖ್ಯೆ 06279 ಮೈಸೂರು-ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ರೈಲು 20, 21, 22, 23 ಮತ್ತು 24 ಅಕ್ಟೋಬರ್ 2023 ರಂದು 11:15 ಗಂಟೆಗೆ ಮೈಸೂರಿನಿಂದ ಹೊರಟು ಮರುದಿನ 02:30 ಗಂಟೆಗೆ ಕೆಎಸ್‌ಆರ್ ಬೆಂಗಳೂರಿಗೆ (5ಸೇವೆಗಳು) ಆಗಮಿಸುತ್ತದೆ.

Mysuru Bengaluru Dasara Special Trains, Schedule Details

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06280 ಕೆಎಸ್‌ಆರ್‌ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಕೆಎಸ್‌ಆರ್ ಬೆಂಗಳೂರಿನಿಂದ 21, 22, 23, 24 ಮತ್ತು 25ನೇ ಅಕ್ಟೋಬರ್ 2023 ರಂದು 03:00 ಗಂಟೆಗೆ ಹೊರಟು ಅದೇ ದಿನ 06:15 ಗಂಟೆಗೆ ಮೈಸೂರಿಗೆ ಆಗಮಿಸಲಿದೆ. (5 ಸೇವೆಗಳು).

ಈ ರೈಲು ಹದಿನೆಂಟು ಎರಡನೇ ತರಗತಿಯ ಡೈಲಿ ಕೋಚ್‌ಗಳು, ಒಂದು ಹವಾನಿಯಂತ್ರಿತ ಚೇರ್ ಕಾರ್ ಕೋಚ್, ಎರಡು ಗಾರ್ಡ್ ವ್ಯಾನ್-ಕಮ್-ಲಗೇಜ್ ವ್ಯಾನ್-ಕಮ್ ಸಾಮಾನ್ಯ ವಿಭಾಗವನ್ನು ಒಳಗೊಂಡಿರುವ ಕೋಚ್ ಸಂಯೋಜನೆಯನ್ನು ಹೊಂದಿರುತ್ತದೆ.

06597/06598 ಡೆಮು ದಸರಾ ವಿಶೇಷ ರೈಲುಗಳು:

ರೈಲು ಸಂಖ್ಯೆ 06587 ಕೆಎಸ್ಆರ್ ಬೆಂಗಳೂರು-ಮೈಸೂರು ಬೇಡಿಕೆಯ ಮೇರೆಗೆ ಡೆಮೊ ವಿಶೇಷ ರೈಲು 20, 21, 22, 23 ಮತ್ತು 24 ಅಕ್ಟೋಬರ್ 2023 ರಂದು 12:15 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು ಅದೇ ದಿನ 3:30 ಗಂಟೆಗೆ ಮೈಸೂರಿಗೆ ಆಗಮಿಸುತ್ತದೆ. (55 ಸೇವೆಗಳು).

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06598 ಮೈಸೂರು-ಕೆಎಸ್ಆರ್ ಬೆಂಗಳೂರು ಬೇಡಿಕೆಯ ಮೇರೆಗೆ ಡೆಮೊ ವಿಶೇಷ ರೈಲು 20, 21, 22, 23 ಮತ್ತು 24 ಅಕ್ಟೋಬರ್ 2023 ರಂದು 3:45 ಗಂಟೆಗೆ ಮೈಸೂರಿನಿಂದ ಹೊರಟು ಅದೇ ದಿನ 7:20 ಗಂಟೆಗೆ ಕೆಎಸ್ಆರ್ ಬೆಂಗಳೂರಿಗೆ ಆಗಮಿಸುತ್ತದೆ. (5 ಸೇವೆಗಳು).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+