ಮೈಸೂರು ಮಿನರಲ್ಸ್ ಲಿ.ನಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜ.30 : ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ವಿವಿಧ ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಿದೆ. ಕಂಪನಿ ಸೆಕ್ರೆಟರಿ, ಫಸ್ಟ್ ಕ್ಲಾಸ್ ಮ್ಯಾನೇಜರ್, ಮ್ಯಾನೇಜರ್ ಸೇರಿದಂತೆ 14 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 5.
ಕಂಪೆನಿ ಸೆಕ್ರೆಟರಿ 1, ಫಸ್ಟ್ ಕ್ಲಾಸ್ ಮ್ಯಾನೇಜರ್/ಮ್ಯಾನೇಜರ್ 3, ಅಸಿಸ್ಟೆಂಟ್ ಮೈನ್ ಸರ್ವೇಯರ್ 2, ಜೂನಿಯರ್ ಕೆಮಿಸ್ಟ್ 2 ಸೇರಿದಂತೆ ಒಟ್ಟು 14 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ಮತ್ತು ಬರೆಯಲು ಬರಬೇಕು. [ನೇಮಕಾತಿ ಆದೇಶ ಇಲ್ಲಿದೆ ನೋಡಿ]

ಅರ್ಜಿ ಶುಲ್ಕ : ಅರ್ಜಿಯನ್ನು ಎಂಎಂಎಲ್ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಮೈಸೂರು ಮಿನರಲ್ಸ್ ಲಿಮಿಟೆಡ್, ಬೆಂಗಳೂರು ಇವರ ಹೆಸರಿನಲ್ಲಿ ಡಿಡಿ ತೆಗೆದು ಅರ್ಜಿ ಶುಲ್ಕ ಪಾವತಿಸಬೇಕು. [ಎಂಎಂಎಲ್ ವೆಬ್ ಸೈಟ್]
ಬ್ಲಾಕ್ ಲಾಗ್, ಹೈದರಾಬಾದ್-ಕರ್ನಾಟಕ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಮೀಸಲಾತಿ ಬಗ್ಗೆ ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿಯನ್ನು ಸಲ್ಲಿಸಲು ಮಾರ್ಚ್ 5 ಕೊನೆಯ ದಿನವಾಗಿದೆ. [ಉದ್ಯೋದ ಮಾಹಿತಿ ಇಲ್ಲಿದೆ ನೋಡಿ]
ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ದಾಖಲಾತಿಗಳೊಂದಿಗೆ ಮೈಸೂರು ಮಿನರಲ್ಸ್ ಲಿಮಿಟೆಡ್ ಕಚೇರಿಗೆ ಸಲ್ಲಿಸಬೇಕಾಗಿದೆ. ಅಂಚೆ ಅಥವ ಖುದ್ದಾಗಿ ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ 5ರ ಸಂಜೆ 5ಗಂಟೆಯೊಳಗೆ ಸಲ್ಲಿಸಬೇಕು.












Click it and Unblock the Notifications