ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಘೋಷದೊಂದಿಗೆ ಬನ್ನಿ ಮಂಟಪ ತಲುಪಿದ ಜಂಬೂ ಸವಾರಿ

|
Google Oneindia Kannada News

ಮೈಸೂರು, ಅಕ್ಟೋಬರ್. 23: ನಾಡಹಬ್ಬ ದಸರಾ ಮಹೋತ್ಸವಕ್ಕೆ ಜಂಬೂಸವಾರಿಯೊಂದಿಗೆ ತೆರೆಬಿದ್ದಿದೆ. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ಧರಾಮಯ್ಯ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.

ರೈತರಿಗೆ ಆತ್ಮ ಸ್ಥೈರ್ಯ ತುಂಬುವ ಉದ್ದೇಶದಿಂದ ಈ ಬಾರಿ ದಸರಾಕ್ಕೆ ಪ್ರಗತಿಪರ ರೈತರಿಂದಲೇ ಚಾಲನೆ ನೀಡಲಾಗಿದೆ. ಮುಂಗಾರು ಕೈ ಕೊಟ್ಟಿದ್ದರೂ ಹಿಂಗಾರು ಬೆಳೆ ಉತ್ತಮವಾಗಿ ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದು ಸಿದ್ಧರಾಮಯ್ಯ ಪ್ರಾರ್ಥನೆ ಮಾಡಿದರು.[ಮೈಸೂರು ಅರಮನೆ ಇತಿಹಾಸ]

mysuru

ರೈತರ ನೆರವಿಗೆ ರಾಜ್ಯ ಸರ್ಕಾರ ಬದ್ಧ, ಕೇಂದ್ರ ಸರ್ಕಾರ ಯಾವ ಪರಿಹಾರವನ್ನು ಬಿಡುಗಡೆ ಮಾಡಲಾಗಿಲ್ಲ. ರಾಜ್ಯದ ಸಮಗ್ರ ಚಿತ್ರಣವನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಪರಿಹಾರ ವಿತರಣಾ ಕಾರ್ಯ ಕೈಗೊಂಡಿದ್ದು ಬಡ್ಡಿ ಮನ್ನಾಕ್ಕೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಜೆ 5.30: ಜಯಘೋಷಗಳೊಂದಿಗೆ ಬನ್ನಿ ಮಂಟಪ ತಲುಪಿದ ದಸರಾ ಜಂಬೂ ಸವಾರಿ
ಮಧ್ಯಾಹ್ನ 3.45:ಸಯ್ಯಾಜಿರಾವ್ ರಸ್ತೆಯಲ್ಲಿ ಮೆರವಣಿಗೆ
ಮಧ್ಯಾಹ್ನ 3.40: ಅರಮನೆಯಿಂದ ಹೊರಟ ಜಂಬೂ ಸವಾರಿ ಮೆರವಣಿಗೆ, ಅರ್ಜುನನಿಗೆ ಉಳಿದ ದಸರಾ ಆನೆಗಳ ಸಾಥ್
ಮಧ್ಯಾಹ್ನ 3.30: ಜಂಬೂ ಸವಾರಿಗೆ ಪುಷ್ಪ ನಮನ ಸಲ್ಲಿಸಿದ ಯದುವೀರ್
ಮಧ್ಯಾಹ್ನ 2.45: ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಸಿದ್ದರಾಮಯ್ಯ
ಮಧ್ಯಾಹ್ನ 2.00: ಆನೆ ಅರ್ಜುನನ ಮೇಲೆ ಅಂಬಾರಿಯನ್ನು ಹಗ್ಗದಿಂದ ಬಿಗಿದ ಸಿಬ್ಬಂದಿ
ಮಧ್ಯಾಹ್ನ 1.00: ಸರತಿ ಸಾಲಿನಲ್ಲಿ ಸಾಗುತ್ತಿರುವ ವಿವಿಧ ಇಲಾಖೆಗಳ ಸ್ಥಬ್ಧಚಿತ್ರಗಳು

ಮಧ್ಯಾಹ್ನ 12.10:ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ದೇವಿ ಪ್ರತಿಷ್ಠಾಪನೆ
ಮಧ್ಯಾಹ್ನ 12.10: ರಥ ಬೀದಿಯಲ್ಲಿ ನಗಾರಿ ಸದ್ದಿನೊಂದಿಗೆ ಸಾಗುತ್ತಿರುವ ಕಲಾ ತಂಡಗಳು
ಬೆಳಿಗ್ಗೆ 12.00: 30 ಕ್ಕೂ ಆಕರ್ಷಕ ಸ್ಥಬ್ಧ ಚಿತ್ರಗಳ ಒಂದರ ಹಿಂದೆ ಹೊರಟಿವೆ
ಬೆಳಿಗ್ಗೆ 11.30: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು

English summary
Mysore Dasara 2015 : Count down has begun for attractive Jambu Savari in Mysuru. People from all around the world have gathered in the cultural captital of Karnataka to watch the spectacular elephant procession. Here is the Live updates of Mysore Dasara 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X