ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ಚುನಾವಣೆ : ಜಿಗ್ನೇಶ್ ಮೇವಾನಿ ಹೇಳಿದ್ದೇನು?

|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 29 : 'ಬಿಜೆಪಿ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ. 2018ರ ಕರ್ನಾಟಕ ಚುನಾವಣೆಯಲ್ಲಿ ಯಾವುದೇ ಪಕ್ಷದ ಪರವಾಗಿ ನಾನು ಪ್ರಚಾರ ಮಾಡುವುದಿಲ್ಲ' ಎಂದು ಜಿಗ್ನೇಶ್ ಮೇವಾನಿ ಹೇಳಿದರು.

ಶುಕ್ರವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ದಲಿತ ಪರ ಹೋರಾಟಗಾರ ಮತ್ತು ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ, 'ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ನನ್ನ ಹೋರಾಟ ದಲಿತ ಮತ್ತು ಕೆಳ ಹಂತದ ವರ್ಗದ ಜನರ ಪರವಾಗಿರುತ್ತದೆ' ಎಂದರು.

ಗುಜರಾತ್: ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿಗೆ ಭರ್ಜರಿ ಜಯಗುಜರಾತ್: ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿಗೆ ಭರ್ಜರಿ ಜಯ

Jignesh Mevani

ಕೋಮು ಸೌಹಾರ್ದ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದರು. 'ಕರ್ನಾಟಕದಲ್ಲಿ ಹಲವು ಹೋರಾಟಗಾರರು ನನಗೆ ಪರಿಚಿತರು. ಗೌರಿ ಲಂಕೇಶ್ ಅವರ ಪರಿಚಯವೂ ಇತ್ತು' ಎಂದು ಹೇಳಿದರು.

'ಸೆಕ್ಸ್ ಮೂಲಭೂತ ಹಕ್ಕು', ಹಾರ್ದಿಕ್ ಬೆಂಬಲಕ್ಕೆ ಜಿಗ್ನೇಶ್ ಮೇವಾನಿ'ಸೆಕ್ಸ್ ಮೂಲಭೂತ ಹಕ್ಕು', ಹಾರ್ದಿಕ್ ಬೆಂಬಲಕ್ಕೆ ಜಿಗ್ನೇಶ್ ಮೇವಾನಿ

'2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಆದರೆ, ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ' ಎಂದು ಜಿಗ್ನೇಶ್ ಮೇವಾನಿ ಸ್ಪಷ್ಟಪಡಿಸಿದರು.

'ಕರ್ನಾಟಕ ಮತ್ತು ಕೇರಳದಲ್ಲಿ ನನಗೆ ಹಲವು ಜವಾಬ್ದಾರಿಗಳನ್ನು ನೀಡಲಾಗಿದೆ. ಕೋಮು ಸೌಹಾರ್ದದ ಕುರಿತು ಜಾಗೃತಿ ಮೂಡಿಸಲು ಇಂದು ಆಗಮಿಸಿದ್ದೇನೆ' ಎಂದು ಹೇಳಿದರು.

English summary
I will continue my fight against BJP and will not campaign for any party in 2018 Karnataka assembly elections said, Jignesh Mevani in Chikkamagaluru, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X