ಕಲಬುರಗಿಯಲ್ಲಿ ಮುತ್ತೂಟ್ ಫಿನ್‌ಕಾರ್ಪ್ ಕಚೇರಿ ದರೋಡೆ
ಕಲಬುರಗಿ, ಮಾರ್ಚ್ 02 : ಜಯನಗರದ ಮುತ್ತೂಟ್ ಫಿನ್‌ಕಾರ್ಪ್ ಕಚೇರಿಗೆ ನುಗ್ಗಿದ ನಾಲ್ವರು, ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಎಂ.ಬಿ.ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಮುತ್ತೂಟ್ ಫಿನ್‌ಕಾರ್ಪ್ ಕಚೇರಿಗೆ ನುಗ್ಗಿದ ನಾಲ್ವರ ತಂಡ, ಚಾಕು ತೋರಿಸಿ ಕಚೇರಿಯ ಸಿಬ್ಬಂದಿಯನ್ನು ಬೆದರಿಸಿ, ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದಾರೆ. [ಮಂಗಳೂರು : ಮುತ್ತೂಟ್ ಫೈನಾನ್ಸ್ ದರೋಡೆ ಯತ್ನ]

ಈಶಾನ್ಯ ವಲಯ ಐಜಿಪಿ ಬಿ.ಶಿವಕುಮಾರ್ ಮತ್ತು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂ.ಬಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications