• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಲ್ಬರ್ಗಾ ಹೆಸರು ಬದಲಾವಣೆಗೆ ಮುಸ್ಲಿಂ ವಿರೋಧ

By Mahesh
|

ಗುಲ್ಬರ್ಗಾ, ಅ.27: ರಾಜ್ಯದ 12 ನಗರಗಳ ಹೆಸರನ್ನು ಬದಲಾಯಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಧರಿಸಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ, ಗುಲ್ಬರ್ಗಾದಲ್ಲಿ ಮಾತ್ರ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಎಂದಿನಂತೆ ಬೆಳಗಾವಿ ಹೆಸರಿಡಲು ಬಿಡುವುದಿಲ್ಲ ಎಂದು ಎಂಇಎಸ್ ನ ಸಂಬಾಜಿ ಪಾಟೀಲ್ ಅರ್ಭಟಿಸಿದ್ದಾರೆ.

ಗುಲ್ಬರ್ಗಾ ಹೆಸರನ್ನು ಕಲ್ಬುರ್ಗಿ ಎಂದು ಬದಲಾಯಿಸುವುದು ಬೇಡ ಎಂದು ಹಲವಾರು ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗಿಳಿದಿವೆ. ಮುಸ್ಲಿಮರ ಅಭಿವೃದ್ಧಿ ಸಮಿತಿ ಅಡಿಯಲ್ಲಿ ಅನೇಕ ಸಂಘಟನೆಗಳು ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭಿಸಿವೆ.

ಬೆಂಗಳೂರು ಹಾಗೂ ಬೆಳಗಾವಿ ಸೇರಿದಂತೆ 12 ನಗರಗಳ ಹೆಸರನ್ನು ಬದಲಾಯಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈಗ ಗುಲ್ಬರ್ಗಾ ಹಾಗೂ ಬೆಳಗಾವಿ ಹೆಸರು ಬದಲಾವಣೆ ಮಾತ್ರ ವಿರೋಧ ವ್ಯಕ್ತವಾಗಿವೆ. ಉಳಿದ ನಗರಗಳ ಹೆಸರುಗಳ ಬದಲಾವಣೆ ಯಾವುದೇ ಆಕ್ಷೇಪ ವ್ಯಕ್ತವಾಗಿದೆ.

14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಗುಲ್ಬರ್ಗಾ ಎಂಬ ಹೆಸರು ಪಡೆದಿದ್ದ ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಭಾಗದ ಪ್ರಮುಖ ನಗರದ ಹೆಸರನ್ನು ಕಲ್ಬುರ್ಗಿ ಎಂದು ಹೆಸರಿಸಲು ಸರ್ಕಾರ ಮುಂದಾಗಿದೆ. ನಿಜಾಮರ ಕಾಲ ಹಾಗೂ ಬ್ರಿಟಿಷರ ಆಳ್ವಿಕೆಯಲ್ಲೂ ಗುಲ್ಬರ್ಗಾ ಹೆಸರಿನಲ್ಲಿ ಬದಲಾವಣೆ ಮಾಡಿರಲಿಲ್ಲ ಎಂದು ಮುಸ್ಲಿಮ್ ಸಂಘಟನೆಗಳು ಹೇಳಿವೆ.

ಇತಿಹಾಸ ಏನು ಹೇಳುತ್ತದೆ?: ಅದರೆ, 12ನೇ ಶತಮಾನದಲ್ಲೇ ಈ ನಗರವನ್ನು ಕಲಮ್ ಬುರ್ಗಿ ಅಥವಾ ಕಲಬುರ್ಗಿ ಅಂದರೆ ಕಲ್ಲುಗಳಿರುವ ನಗರ ಎಂದು ಕರೆಯುತ್ತಿದ್ದರು ಎಂದು ಕೆಸರಟಗಿ ಜಿಲ್ಲೆಯ ಹುಣಸಿನಹಡಗಲಿ ಶಾಸನದಿಂದ ತಿಳಿದು ಬರುತ್ತದೆ. 6 ಶತಮಾನದಲ್ಲಿ ರಾಷ್ಟ್ರಕೂಟರು, ಯಾದವರು, ಹೊಯ್ಸಳರು, ಚಾಲುಕ್ಯರು, ಕಲಾಚೂರಿಗಳು, ಕಾಕಾತಿಯರು,ಬಹಮನಿ ಸುಲ್ತಾನರು, ಮೊಘಲರು, ಬ್ರಿಟಿಷರು, ನಿಜಾಮರು ಗುಲ್ಬರ್ಗಾವನ್ನು ಆಳಿದ್ದಾರೆ.

ಕಲಬುರ್ಗಿ- ಕಲ್ಬುರ್ಗಿಯಾಗಿ ಜನಪ್ರಿಯಗೊಳ್ಳದೆ ಗುಲ್ಬರ್ಗಾ ಹೆಸರೇ ಹೆಚ್ಚು ಬಳಕೆಯಲ್ಲಿತ್ತು. ಸರ್ಕಾರ ಹೆಸರು ಬದಲಾವಣೆ ನಿಲ್ಲಿಸದಿದ್ದರೆ ನಾವು ಕಾನೂನು ಪ್ರಕಾರ ಹೋರಾಟ ನಡೆಸಬೇಕಾಗುತ್ತದೆ ಗುಲ್ಬರ್ಗಾ ಮುಸ್ಲಿಂ ವೆಲ್ ಫೇರ್ ಅಸೋಸಿಯೇಷನ್ ಹೇಳಿದೆ.

ಸಾಮಾನ್ಯವಾಗಿ ಬಿಬಿಎಂಪಿ ಸೇರಿದಂತೆ ಪಾಲಿಕೆಗಳು ಯಾವುದೇ ಪಾರ್ಕ್, ರಸ್ತೆಗಳಿಗೆ ಹೆಸರಿಡುವಾಗ ಅಥವಾ ಮರು ನಾಮಕರಣ ಮಾಡುವಾಗ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಆಕ್ಷೇಪಣೆಗಳಿಲ್ಲದಿದ್ದರೆ ಮಾತ್ರ ಹೆಸರು ಬದಲಾಯಿಸುವುದು ನಡೆದುಕೊಂಡು ಬಂದಿರುವ ಕ್ರಮ. ಈಗ ಸರ್ಕಾರ ತೆಗೆದುಕೊಂಡ ಕ್ರಮಕ್ಕೆ ಆಯಾ ನಗರ ಪಾಲಿಕೆಗಳಲ್ಲಿ ಪರ ವಿರೋಧ ಚರ್ಚೆಗಳು ನಡೆದು ವಿರೋಧ ವ್ಯಕ್ತವಾದರೆ ಮುಂದೇನಾಗುತ್ತದೆ? ಕಾನೂನು ಸಮರ ಆರಂಭವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Siddaramaiah led Congress government’s decision to rename Gulbarga as Kalaburgi has sparked off a row in Gulbarga as some of the corporators strongly opposing it and members of various Muslim organisations taking to the streets to protest against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more